ಪಾಸಿಟಿವಿಟಿ ದರ ಇಳಿಕೆ, ಜೂ. 14 ಕ್ಕೂ ಮುನ್ನವೇ ರಾಜ್ಯದಲ್ಲಿ ಅನ್‌ಲಾಕ್..?
ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 5 ಕ್ಕಿಂತ ಕಡಿಮೆಯಾದರೆ ಅನ್‌ಲಾಕ್ ಮಾಡುವುದಾಗಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದರು. ದಿನೇ ದಿನೇ ಸೋಂಕಿನ ಸಂಖ್ಯೆ, ಹಾಗೂ ಪಾಸಿಟಿವಿಟಿ ದರ ಇಳಿಕೆಯಾಗುತ್ತಿರುವುದು ಸಮಾಧಾನ ತಂದಿದೆ. ನಿನ್ನೆ ಶೇ. 7.71 ಕ್ಕೆ ಪಾಸಿಟಿವಿಟಿ ದರ ಇಳಿದಿದೆ.
ಬೆಂಗಳೂರು (ಜೂ. 07): ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 5 ಕ್ಕಿಂತ ಕಡಿಮೆಯಾದರೆ ಅನ್‌ಲಾಕ್ ಮಾಡುವುದಾಗಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದರು. ದಿನೇ ದಿನೇ ಸೋಂಕಿನ ಸಂಖ್ಯೆ, ಹಾಗೂ ಪಾಸಿಟಿವಿಟಿ ದರ ಇಳಿಕೆಯಾಗುತ್ತಿರುವುದು ಸಮಾಧಾನ ತಂದಿದೆ. ನಿನ್ನೆ ಶೇ. 7.71 ಕ್ಕೆ ಪಾಸಿಟಿವಿಟಿ ದರ ಇಳಿದಿದೆ. ಇಂದು ಡಿಸಿಎಂ ಅಶ್ವಥ್ ನಾರಾಯಣ್ 2.30 ಕ್ಕೆ ಟಾಸ್ಕ್‌ಫೋರ್ಸ್ ಸಭೆ ಕರೆದಿದ್ದಾರೆ. ಹಂತಹಂತವಾಗಿ ಅನ್‌ಲಾಕ್ ಮಾಡುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಅಭಿಪ್ರಾಯ, ವರದಿ ಆಧಾರದ ಮೇಲೆ ಅನ್‌ಲಾಕ್ ಭವಿಷ್ಯ ನಿರ್ಧಾರವಾಗಲಿದೆ.
ನಮಗೆ ಊರಿಗೆ ಹೋಗೋಕೆ ಹೆಲ್ಪ್ ಮಾಡ್ರಿ...ಲಾಕ್ಡೌನ್‌ನಿಂದ ಕಾರ್ಮಿಕರ ಬದುಕು ಫುಟ್‌ಪಾತ್‌ಗೆ