Asianet Suvarna News Asianet Suvarna News

ಮತಾಂತರದ ಎಫೆಕ್ಟ್! ಹೊಸ ಮನೆ ಕಟ್ಟಿಸಿದರೂ, ಮನೆಗೆ ಕಾಲಿಡದ ಗೂಳಿಹಟ್ಟಿ ಶೇಖರ್ ಅಮ್ಮ!

ರಾಜ್ಯದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಪ್ರಕ್ರಿಯೆ ಚಟುವಟಿಕೆ ವ್ಯಾಪಕವಾಗಿ ನಡೆಯುತ್ತಿದೆ. ಈ ಬಗ್ಗೆ ಸದನದಲ್ಲಿ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್, ತಮ್ಮ ತಾಯಿ ಮತಾಂತರವಾದ ಬಗ್ಗೆ ಹೇಳುತ್ತಾ, ಅಳಲು ತೋಡಿಕೊಂಡಿದ್ದಾರೆ. 

Sep 25, 2021, 11:35 AM IST

ಬೆಂಗಳೂರು (ಸೆ. 25): ರಾಜ್ಯದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಪ್ರಕ್ರಿಯೆ ಚಟುವಟಿಕೆ ವ್ಯಾಪಕವಾಗಿ ನಡೆಯುತ್ತಿದೆ. ಈ ಬಗ್ಗೆ ಸದನದಲ್ಲಿ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್, ತಮ್ಮ ತಾಯಿ ಮತಾಂತರವಾದ ಬಗ್ಗೆ ಹೇಳುತ್ತಾ, ಅಳಲು ತೋಡಿಕೊಂಡಿದ್ದಾರೆ.

ರಾಜ್ಯದಲ್ಲಿ ಹೆಚ್ಚುತ್ತಿದೆ ಮತಾಂತರ, ನನ್ನ ತಾಯಿಯನ್ನೂ ಬಿಟ್ಟಿಲ್ಲ! ಸದನದಲ್ಲಿ ಗೂಳಿಹಟ್ಟಿ ಗೋಳು!

ಮತಾಂತರ ಮಾಫಿಯಾ ಬಗ್ಗೆ ಈ ಹಿಂದೆ ಕವರ್ ಸ್ಟೋರಿ ವರದಿ ಕೂಡಾ ಮಾಡಿತ್ತು. ಈ ವರದಿ ಕೂಡಾ ವಿಧಾನಸಭೆಯಲ್ಲಿ ಸದ್ದು ಮಾಡಿತ್ತು. ಬೆಂಗಳೂರು ಗ್ರಾಮಾಂತರದ ಹೊಸಕೋಟೆಯಲ್ಲಿ ನಡೆದ ಮತಾಂತರದ ಬಗ್ಗೆ ಕಾರ್ಯಾಚರಣೆ ನಡೆಸಿದಾಗ ಆಘಾತಕಾರಿ ವಿಚಾರಗಳು ಬಯಲಿಗೆ ಬಂದವು. ಇನ್ನು ಗೂಳಿಹಟ್ಟಿ ಶೇಖರ್ ಅವರ ತಾಯಿಯನ್ನೂ ಕವರ್ ಸ್ಟೋರಿ ತಂಡ ಮಾತನಾಡಿಸಿತು. ಮತಾಂತರ ಮಾಫಿಯಾ ಹೇಗೆ ನಡೆಯುತ್ತಿದೆ..? ಯಾವ ರೀತಿ ಬ್ರೇನ್ ವಾಶ್ ಮಾಡಲಾಗುತ್ತಿದೆ..? ನೀವೇ ನೋಡಿ.