ಧ್ವಜಾರೋಹಣ ವೇಳೆ ಶಶಿಕಲಾ ಜೊಲ್ಲೆಗೆ ಘೇರಾವ್, ಕಪ್ಪು ಬಟ್ಟೆ ಪ್ರದರ್ಶಿಸಿದ ಕೈ ಕಾರ್ಯಕರ್ತೆಯರು

ದ್ವಜಾರೋಹಣಕ್ಕೆ ಅಕ್ಕಮಹಾದೇವಿ ವಿವಿಗೆ ಬಂದ ಸಚಿವೆ ಶಶಿಕಲಾ ಜೊಲ್ಲೆಗೆ ಕೈ ಕಾರ್ಯಕರ್ತೆಯರು ಘೇರಾವ್ ಹಾಕಿದ್ದಾರೆ. ಧ್ವಜಾರೋಹಣ ಮಾಡದಂತೆ ತಡೆದಿದ್ಧಾರೆ. 
 

First Published Aug 15, 2021, 2:04 PM IST | Last Updated Aug 15, 2021, 2:04 PM IST

ವಿಜಯಪುರ (ಆ. 15): ದ್ವಜಾರೋಹಣಕ್ಕೆ ಅಕ್ಕಮಹಾದೇವಿ ವಿವಿಗೆ ಬಂದ ಸಚಿವೆ ಶಶಿಕಲಾ ಜೊಲ್ಲೆಗೆ ಕೈ ಕಾರ್ಯಕರ್ತೆಯರು ಘೇರಾವ್ ಹಾಕಿದ್ದಾರೆ. ಧ್ವಜಾರೋಹಣ ಮಾಡದಂತೆ ತಡೆದಿದ್ಧಾರೆ. 

ಧ್ವಜಾರೋಹಣ ವೇಳೆ ಜಿಗಜಿಣಗಿ ಮುನಿಸು, ನಿರೂಪಕನಿಗೆ ತರಾಟೆ, ಮನವೊಲಿಸಿದ ಶಶಿಕಲಾ ಜೊಲ್ಲೆ

ನಿಮ್ಮ ಮೇಲೆ ಭ್ರಷ್ಟಾಚಾರದ ಆರೋಪವಿದೆ. ಅದನ್ನು ಮೊದಲು ತೊಳೆದುಕೊಂಡು ಬನ್ನಿ' ಎಂದು ಕೈ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಶಶಿಕಲಾ ಜೊಲ್ಲೆಯವರು ಅವರ ಮನವೊಲಿಸುವ ಪ್ರಯತ್ನ ಮಾಡಿದರು.ಆದರೆ ಕಾರ್ಯಕರ್ತೆಯರು ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ. ಕೊನೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಧ್ವಜಾರೋಹಣಕ್ಕೆ ಅವಕಾಶ ಮಾಡಿಕೊಟ್ಟರು.