News Hour: ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಸಿದ್ಧರಾಮಯ್ಯ ಸರ್ಕಾರದ ಸಮರ!

ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಸಿದ್ಧರಾಮಯ್ಯ ಸರ್ಕಾರ ಸಮರ ಸಾರಿದೆ. ಕಳೆದ ಸರ್ಕಾರದಲ್ಲಿ ನಡೆದಿದೆ ಎನ್ನಲಾದ ಹಗರಣ, ಅಕ್ರಮಗಳನ್ನು ಪತ್ತೆ ಹಚ್ಚಲು ಹಾಲಿ ಸರ್ಕಾರ ಮುಂದಾಗಿದೆ. ಚಾಮರಾಜನಗರ ಆಕ್ಸಿಜನ್‌ ದುರಂತದ ಮರುತನಿಖೆಗೆ ಡಿಪಿಆರ್‌ ಸಿದ್ಧ ಮಾಡುತ್ತಿದೆ.
 

First Published Jun 9, 2023, 11:08 PM IST | Last Updated Jun 9, 2023, 11:08 PM IST

ಬೆಂಗಳೂರು (ಜೂ.9): ಬಿಜೆಪಿ ಸರ್ಕಾರದ ಅವಧಿಯಲ್ಲಾದ ಟೆಂಡರ್‌ಗಳ ಮರುಪರಿಶೀಲನೆಗೆ ಹಾಲಿ ಸರ್ಕಾರ ನಿರ್ಧಾರ ಮಾಡಲಿದೆ ಎನ್ನಲಾಗಿದೆ. ಅದರೊಂದಿಗೆ ಆರೆಸ್ಸೆಸ್‌ನ ಸಹಸಂಸ್ಥೆಗಳಿಗೆ ಪರಭಾರೆ ಮಾಡಿರುವ ಭೂಮಿಗಳನ್ನು ಸರ್ಕಾರ ವಾಪಾಸ್‌ ಪಡೆಯಬಹುದು ಎನ್ನುವ ಗುಮಾನಿಗಳು ಹರಿದಾಡುತ್ತಿವೆ.

ಅದರೊಂದಿಗೆ ಆರೋಗ್ಯ ಇಲಾಖೆಯಲ್ಲಿನ ಕೆಲವೊಂದು ಟೆಂಡರ್‌ಗಳನ್ನು ಈಗಾಗಲೇ ಸರ್ಕಾರ ರದ್ದು ಮಾಡಿದೆ. ಜಿವಿಕೆ ಸಂಸ್ಥೆಗೆ ನೀಡಲಾಗಿದ್ದ 108 ಅಂಬ್ಯುಲೆನ್ಸ್‌ ಸೇವೆಗಳ ಟೆಂಡರ್‌ ರದ್ದು ಮಾಡಲಾಗಿದೆ. ಚಾಮರಾಜನಗರ ಆಕ್ಸಿಜನ್‌ ದುರಂತದ ಮರು ತನಿಖೆಗೆ ಡಿಪಿಆರ್‌ ಸಿದ್ಧ ಮಾಡಲಾಗುತ್ತಿದೆ.

KARNATAKA BUDGET 2023: ಜುಲೈ 7 ರಂದು ಸಿದ್ಧರಾಮಯ್ಯ ಬಜೆಟ್‌ ಮಂಡನೆ!

ಇನ್ನೊಂದೆಡೆ, ಪಂಚ ಗ್ಯಾರಂಟಿ ಗೊಂದಲದ ನಡುವೆ ಸಿಎಂ ಸಿದ್ಧರಾಮಯ್ಯ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡುವ ಮೂಲಕ ದೊಡ್ಡ ಭಾರವನ್ನು ಇಳಿಸಿಕೊಂಡಿದ್ದಾರೆ. ರಹೀಂ ಖಾನ್‌ ಹಾಗೂ ಕೃಷ್ಣಬೈರೇಗೌಡರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ನೀಡಲಾಗಿಲ್ಲ.