ಕಾಂಗ್ರೆಸ್‌ ಮುಖಂಡನ ಪತ್ನಿಯಿಂದ ಗೂಂಡಾಗಿರಿ, ಮಚ್ಚು ಹಿಡಿದು ಹಲ್ಲೆಗೆ ಯತ್ನ!

ಮೈಸೂರಿನ ಸಾತಗಹಳ್ಳಿ ಬಸ್‌ ಡಿಪೋದಲ್ಲಿ ಕಾಂಗ್ರೆಸ್‌ ಮುಖಂಡನ ಪತ್ನಿ ಗೂಂಡಾಗಿರಿ ಮಾಡಿದ್ದಾರೆ. ಲಾಂಗ್‌ ಹಿಡಿದು ಅಧಿಕಾರಿಯ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.
 

First Published Dec 12, 2022, 8:00 PM IST | Last Updated Dec 12, 2022, 8:00 PM IST

ಮೈಸೂರು (ಡಿ.12): ಇಲ್ಲಿನ ಸಾತಗಹಳ್ಳಿ ಬಸ್‌ ಡಿಪೋದ ಜಾಗವನ್ನು ಬಾಡಿಗೆಗೆ ಪಡೆದಿದ್ದ ಕಾಂಗ್ರೆಸ್‌ ನಾಯಕ ಶಫಿ, ಈ ಜಾಗದಲ್ಲಿ ಕಾಲೇಜು ನಡೆಸುತ್ತಿದ್ದರು. ಪ್ರಸ್ತುತ 1.80 ಲಕ್ಷ ರೂಪಾಯಿ ಬಾಡಿಗೆ ಬಾಕಿ ಇರಿಸಿಕೊಂಡಿದ್ದಾರೆ. ಈ ಕುರಿತಾಗಿ ಅಧಿಕಾರಿಗಳು ಕ್ರಮ ಕೈಗೊಳ್ಳಲು ಬಂದಾಗ, ಮಚ್ಚು ಹಿಡಿದು ಬೆದರಿಸಿದ್ದಾರೆ.

ಸಾಬ್ರರಾಗಿ ಹುಟ್ಟಿರೋದು ಸಾವು. ಮರ್ಡರ್‌ ಮಾಡಿ ಜೈಲಿಗೆ ಬೇಕಾದ್ರೂ ಹೋಗ್ತೀವಿ. ಮಚ್‌ ತಗೊಂಡು ಬೇಕಾದ್ರೆ ಹೊಡೆದು ಬಿಡ್ತೀವಿ. ನಾವೇನೂ ಇಲ್ಲಿ ಅಡಗಿಕೊಂಡು ಬಂದಿಲ್ಲ ಎಂದು ಶಫಿ ಅವರ ಪತ್ನಿ ಪೊಲೀಸರಿಗೆ ಆವಾಜ್‌ ಹಾಕಿದ ಘಟನೆ ನಡೆದಿದೆ. 

ಮೈಸೂರು ಜಿಲ್ಲೆಯಲ್ಲೂ ವೋಟರ್‌ಗೇಟ್‌ ಹಗರಣ

ಶಫಿ, ತನ್ವೀರ್‌ ಸೇಠ್‌ ಅವರ ಬೆಂಬಲಿಗನಾಗಿದ್ದು, ಸರ್ಕಾರದ ಜಾಗವನ್ನು ಬಾಡಿಗೆಗೆ ಪಡೆದಿದ್ದ ಶಫಿ ಅದನ್ನು ಮೂರು ಜನರಿಗೆ ಲೀಸ್‌ಗೆ ಕೊಟ್ಟಿದ್ದ. ಬಾಡಿಗೆ ಕೂಡ ನೀಡದ ಕಾರಣ ನಿಗಮ ಮಂಡಳಿಯ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದರು. ಸೋಮವಾರ ಅಧಿಕಾರಿಗಳು ಕ್ರಮ ಕೈಗೊಳ್ಳಲು ಬಂದಾಗ ಶಫಿ ಅವರ ಪತ್ನಿ ಗೂಂಡಾಗಿರಿ ಮಾಡಿದ್ದಾರೆ.