Asianet Suvarna News Asianet Suvarna News

Narayana Guru Tableau Row: 'ನಾರಾಯಣ ಗುರುಗಳಿಗೆ ಅವಮಾನ ಮಾಡಿದ್ದು ಮೋದಿಯಲ್ಲ, ಕಮ್ಯುನಿಸ್ಟರು'

ದೆಹಲಿಯಲ್ಲಿ ನಡೆದ 73ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರ ಪ್ರದರ್ಶಿಸಲು ಕೇರಳ ಸರ್ಕಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡದಿರುವುದು ವಿವಾದಕ್ಕೆ ಕಾರಣವಾಗಿವೆ. 

ದೆಹಲಿಯಲ್ಲಿ ನಡೆದ 73ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರ (Narayana Guru Tableau) ಪ್ರದರ್ಶಿಸಲು ಕೇರಳ ಸರ್ಕಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡದಿರುವುದು ವಿವಾದಕ್ಕೆ ಕಾರಣವಾಗಿವೆ. ಈ ಎಲ್ಲ ಗೋಜಲುಗಳ ಬಗ್ಗೆ ಸ್ವತಃ ನಾರಾಯಣ ಗುರುಗಳಿಂದಲೇ ಸ್ಥಾಪಿತವಾದ ಕೇರಳದ ಶಿವಗಿರಿ ಮಠದ ಸನ್ಯಾಸಿಗಳಲ್ಲಿ ಒಬ್ಬರಾದ ಸತ್ಯಾನಂದ ತೀರ್ಥರು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. 

Narayana Guru Tableau Row: ಭುಗಿಲೆದ್ದ ಆಕ್ರೋಶ, 'ಸ್ವಾಭಿಮಾನ ನಡಿಗೆ'ಗೆ ವ್ಯಾಪಕ ಬೆಂಬಲ

ಮೋದಿ ಪ್ರಧಾನಿಯಾದ ಮೇಲೆ ನಾನು ಈ ಹುದ್ದೆಗೆ ಬರಲು ನಾರಾಯಣ ಗುರುಗಳ ಆಶೀರ್ವಾದ ಕಾರಣ ಎಂದು ಶಿವಗಿರಿ ಮಠಕ್ಕೆ ಬಂದು 70 ಕೋಟಿ ರು. ನೆರವು ನೀಡಿದರು. ಅವರಿಗೆ ನಾರಾಯಣ ಗುರುಗಳ ಬಗ್ಗೆ ಬಹಳ ಅಭಿಮಾನವಿದೆ. ಅಂತಹವರು ಗುರುಗಳಿಗೆ ಅವಮಾನ ಮಾಡಲು ಸಾಧ್ಯವೇ ಇಲ್ಲ. ಅವರ ಮೇಲೆ ಗೂಬೆ ಕೂರಿಸಲು ಬೇರೆಯವರು ಯತ್ನಿಸುತ್ತಿದ್ದಾರೆ. ಇದು ರಾಜಕೀಯ ಪ್ರೇರಿತ ಹೋರಾಟ. ದಕ್ಷಿಣ ಕನ್ನಡದಲ್ಲಿ ನಡೆದ ಹೋರಾಟವೂ ರಾಜಕೀಯ ಪ್ರೇರಿತವೇ ಎಂದಿದ್ದಾರೆ.