ಹಿಜಾಬ್ ಗಲಾಟೆಯ ನಡುವೆ ವಿಜಯಪುರದಲ್ಲಿ ಭಾವೈಕ್ಯತೆಯ ಸಾಕ್ಷಾತ್ ದರ್ಶನ
ರಾಜ್ಯದಲ್ಲಿ ಹಿಜಾಬ್ ವಿವಾದ, ಈ ಮಠದಲ್ಲಿ ನಿತ್ಯ ಭಾವೈಕ್ಯತೆಯ ಪಾಠ!
ಹಿಂದೂ-ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ ಜಾತ್ಯಾತೀತ ಮಠ!
ವಿಜಯಪುರ ಜಿಲ್ಲೆಯ ಇಂಚಗೇರಿ ಮಠಕ್ಕೆ ಇದ್ದಾರೆ ಮುಸ್ಲಿಂ ಭಕ್ತರು!
ವಿಜಯಪುರ (ಫೆ. 8): ರಾಜ್ಯದಲ್ಲಿ ಹಿಜಾಬ್ ವಿವಾದ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದೆ. ಈ ವಿವಾದ ಶಾಲಾ-ಕಾಲೇಜು ಮಟ್ಟದಲ್ಲೆ ಹಿಂದೂ-ಮುಸ್ಲಿಂ ವಿದ್ಯಾರ್ಥಿಗಳ ನಡುವಿನ ಸಾಮರಸ್ಯಕ್ಕೆ ಬೆಂಕಿ ಇಡುತ್ತಿದೆ. ಆದ್ರೆ ಈ ನಡುವೆ ಗುಮ್ಮಟನಗರಿ ವಿಜಯಪುರ ಜಿಲ್ಲೆಯ ಇಂಚಗೇರಿ ಮಠದಲ್ಲಿ ( Inchageri Mutt) ನಡೆದ ಜಾತ್ಯಾತೀತ ಜಾತ್ರೆ ಎಲ್ಲರನ್ನು ಹುಬ್ಬೇರುವಂತೆ ಮಾಡಿದೆ. ಇಲ್ಲಿ ಪ್ರತಿ ವರ್ಷ ನಡೆಯೋ ಮಾಘ ಸಪ್ತಾಹದಲ್ಲಿ ಸರ್ವ ಧರ್ಮಿಯರು ಪಾಲ್ಗೊಳ್ತಾರೆ.
Hijab controversy : 'ವಿದ್ಯಾರ್ಥಿಗಳು ಮಾತ್ರ ಇರ್ಲಿಲ್ಲ' ರಜೆ ಘೋಷಣೆಗೆ ಅಸಲಿ ಕಾರಣ ಹೇಳಿದ ಸಚಿವ
ಸರ್ವ ಧರ್ಮಿಯರು ಪಾಲ್ಗೊಳ್ಳೊದ್ರಲ್ಲಿ ಅಂತಾ ವಿಶೇಷ ಏನಿಲ್ಲ ಬಿಡಿ, ಆದ್ರೆ ವಿಶೇಷ ಅಂದ್ರೆ ಮುಸ್ಲಿಂ (Muslim Devotees) ಭಕ್ತರೆ ಇಲ್ಲಿ ಮಹಾರಾಷ್ಟ್ರದಿಂದ ದಿಂಡಿ ಪಲ್ಲಕ್ಕಿಗಳನ್ನ ತೆಗೆದುಕೊಂಡು ಸಪ್ತಾಹಕ್ಕೆ ಬರ್ತಾರೆ. ಅದ್ರಲ್ಲು ವಿಶೇಷ ಅಂದ್ರೆ ಸಪ್ತಾಹದಲ್ಲಿ ಸಾವಿರಾರು ಮುಸ್ಲಿಂ ಭಕ್ತರು ಪಾಲ್ಗೊಳ್ಳುತ್ತಾರೆ, ಇಲ್ಲಿರುವ 11 ಗುರುಗಳ ಗದ್ದುಗೆಗಳ ದರ್ಶನ ಮಾಡಿ ಹೂವು-ಹಣ್ಣು ಸಮರ್ಪಿಸುತ್ತಾರೆ. ತೆಂಗಿನಕಾಯಿ ನೈವೇಧ್ಯಗಳನ್ನ ಅರ್ಪಿಸಿ ಹರಿಭಜನೆಯನ್ನು ಮಾಡ್ತಾರೆ. ಗದ್ದುಗೆಗಳಿಗೆ ಭಕ್ತಿಯಿಂದ ನಮಿಸುವುದರ ಜೊತೆಗೆ ಧೂಪ ಬೆಳಗಿ ಪೂಜೆ ಕೂಡ ಸಲ್ಲಿಸ್ತಾರೆ. ಇನ್ನು ಇಲ್ಲಿ ನಡೆಯೋ ಸಹಪಂಕ್ತಿ ಭೋಜನದಲ್ಲು ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳು ಪಾಲ್ಗೊಂಡು ಪ್ರಸಾದ ಸ್ವೀಕರಿಸುತ್ತಾರೆ. ಹೀಗಾಗಿಯೇ ಈ ಸಪ್ತಾಹವನ್ನ ಹಿಂದೂ ಮುಸ್ಲಿಂ ಜಾತ್ರೆ, ಜಾತ್ಯಾತೀತ ಜಾತ್ರೆ ಅಂತಲು ಕರೆಯುತ್ತಾರೆ..