ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ; ಸಿಎಂಗೆ ಸಂತ್ರಸ್ತರಿಂದ ಪ್ರತಿಭಟನೆಯ ಬಿಸಿ

ವರುಣನ ಆರ್ಭಟಕ್ಕೆ ಉತ್ತರ ಕರ್ನಾಟಕದ 4 ಜಿಲ್ಲೆಗಳು ಅಕ್ಷರಶಃ ನಲುಗಿ ಹೋಗಿವೆ. ಪ್ರವಾಹದಿಂದ ಸಾಕಷ್ಟು ಹಾನಿಯುಂಟಾಗಿದೆ. ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಯಡಿಯೂರಪ್ಪ ಇಂದು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಆರ್‌ ಅಶೋಕ್, ಬೊಮ್ಮಾಯಿ, ಜಾರಕಿಹೊಳಿ ಸಿಎಂಗೆ ಸಾಥ್ ನೀಡಿದ್ದಾರೆ. 
 

First Published Aug 25, 2020, 4:27 PM IST | Last Updated Aug 25, 2020, 4:27 PM IST

ಬೆಳಗಾವಿ (ಆ. 25): ವರುಣನ ಆರ್ಭಟಕ್ಕೆ ಉತ್ತರ ಕರ್ನಾಟಕದ 4 ಜಿಲ್ಲೆಗಳು ಅಕ್ಷರಶಃ ನಲುಗಿ ಹೋಗಿವೆ. ಪ್ರವಾಹದಿಂದ ಸಾಕಷ್ಟು ಹಾನಿಯುಂಟಾಗಿದೆ. ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಯಡಿಯೂರಪ್ಪ ಇಂದು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಆರ್‌ ಅಶೋಕ್, ಬೊಮ್ಮಾಯಿ, ಜಾರಕಿಹೊಳಿ ಸಿಎಂಗೆ ಸಾಥ್ ನೀಡಿದ್ದಾರೆ. 

ಇದೇ ವೇಳೆ ಸಿಎಂಗೆ ಪ್ರತಿಭಟನೆಯ ಬಿಸಿ ಕೂಡಾ ತಾಗಿದೆ. ಪ್ರವಾಹದಲ್ಲಿ ಮನೆ, ಬೆಳೆ, ಜಾನುವಾರುಗಳನ್ನು ಕಳೆದುಕೊಂಡವರು, ಸಿಎಂ ಸಾಹೇಬ್ರು ನಮ್ಮ ಸಂಕಷ್ಟಗಳನ್ನು ಕೇಳಬೇಕು. ನಮಗೂ ನ್ಯಾಯ ಕೊಡಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ. 

ವೈದ್ಯರ ಸಲಹೆ ಧಿಕ್ಕರಿಸಿ ಸಿಎಂ ಬಿಎಸ್‌ವೈ ಬೆಳಗಾವಿಯಲ್ಲಿ ವೈಮಾನಿಕ ಸಮೀಕ್ಷೆ