ಇದು ಹೆಸರಿಗೆ ಮಾತ್ರ ಆಸ್ಪತ್ರೆ, ಕಾಲಿಟ್ಟಲ್ಲೆಲ್ಲಾ ಅವ್ಯವಸ್ಥೆ; ರೋಗಿಗಳ ಪಾಡು ಕೇಳಲೇಬೇಡಿ..!
ಹೆಸರಿಗೆ ಮಾತ್ರ ಇದು ಆಸ್ಪತ್ರೆ. ಕಾಲಿಟ್ಟಲ್ಲೆಲ್ಲಾ ಅವ್ಯವಸ್ಥೆ. ಸಿಬ್ಬಂದಿ ಹಾಗೂ ರೋಗಿಗಳು ಓಡಾಡೋಕೆ ಭಯಪಡುತ್ತಿದ್ದಾರೆ. ಆಸ್ಪತ್ರೆ ಮುಂದೆ ರಾತ್ರಿಯಾದ್ರೆ ಲೈಟ್ ಇಲ್ಲ, ಟಾರ್ಚ್ ಹಿಡ್ಕೊಂಡು, ಮೊಬೈಲ್ ಹಿಡ್ಕೊಂಡು ಓಡಾಡಬೇಕು.
ಯಾದಗಿರಿ (ಡಿ. 01): ಹೆಸರಿಗೆ ಮಾತ್ರ ಇದು ಆಸ್ಪತ್ರೆ. ಕಾಲಿಟ್ಟಲ್ಲೆಲ್ಲಾ ಅವ್ಯವಸ್ಥೆ. ಸಿಬ್ಬಂದಿ ಹಾಗೂ ರೋಗಿಗಳು ಓಡಾಡೋಕೆ ಭಯಪಡುತ್ತಿದ್ದಾರೆ. ಆಸ್ಪತ್ರೆ ಮುಂದೆ ರಾತ್ರಿಯಾದ್ರೆ ಲೈಟ್ ಇಲ್ಲ, ಟಾರ್ಚ್ ಹಿಡ್ಕೊಂಡು, ಮೊಬೈಲ್ ಹಿಡ್ಕೊಂಡು ಓಡಾಡಬೇಕು. ವಾರ್ಡ್‌ನೊಳಗೆ ಹಾವು, ಚೇಳುಗಳು ಓಡಾಡುತ್ವೆ, ಸ್ವಚ್ಛತೆಯನ್ನು ದುರ್ಬೀನು ಹಾಕಿ ಹುಡುಕಬೇಕು. ಈ ದೃಶ್ಯ ಕಂಡು ಬಂದಿದ್ದು ಯಾದಗಿರಿ ಜಿಲ್ಲಾಸ್ಪತ್ರೆ ಕೇಂದ್ರದಲ್ಲಿ.
ಬಿಗ್ 3 ಬಮದ್ಮೇಲೆ ಸಮಸ್ಯೆಗೆ ಜಾಗವೇ ಇಲ್ಲ, ಉತ್ತರ ಸಿಗೋವರ್ಗೂ ಬಿಡೋದಿಲ್ಲ..!
ಯಾದಗಿರಿ ಜನತೆಯ ಬಹುಕಾಲದ ಕನಸು ಕೊನೆಗೂ ನನಸಾಗಿದೆ. ಜಿಲ್ಲೆಯಲ್ಲಿ ಅಸ್ಪತ್ರೆ ನಿರ್ಮಾಣವಾಗಿದೆ. ಆದರೆ ಬರೀ ಅವ್ಯವಸ್ಥೆಯ ಗೂಡಾಗಿದೆ. ಕೋವಿಡ್ ಸಮಯದಲ್ಲಿ, ಈ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಬದಲಾವಣೆ ಮಾಡಲಾಯ್ತು. ಆದರೆ ವ್ಯವಸ್ಥೆ ಮಾತ್ರ ಕೇಳಲೇಬೇಡಿ...