BIG 3: ರೊಟ್ಟಿ ಮುರಿದಂಗೆ ರಸ್ತೆ ಮುರಿತಿದ್ದಾರೆ ಜನ, ಹಾವೇರಿಯಲ್ಲೊಂದು ವಿಚಿತ್ರ ರಸ್ತೆ!
ಹಣದ ಆಸೆಗಾಗಿ ಅಧಿಕಾರಿಗಳು, ಗುತ್ತಿಗೆದಾರರು ಹೇಗೆಲ್ಲಾ ಜನ ಸಾಮಾನ್ಯರನ್ನು ಯಾಮಾರಿಸ್ತಾರೆ ಅನ್ನೋದಕ್ಕೆ ಈ ರಸ್ತೆಯೇ ಸಾಕ್ಷಿ. ಹಾವೇರಿ (Haveri) ತಾಲೂಕು ಹೊಸರಿತ್ತಿ ಗ್ರಾಮದಲ್ಲಿ ಕಳೆದ ವರ್ಷ ಸುರಿದ ಬಾರೀ ಮಳೆಗೆ ಗ್ರಾಮೀಣ ಪ್ರದೇಶದ ರಸ್ತೆಗಳು ಹಾಳಾಗಿವೆ.
ಹಾವೇರಿ (ಮೇ.19): ಹಣದ ಆಸೆಗಾಗಿ ಅಧಿಕಾರಿಗಳು, ಗುತ್ತಿಗೆದಾರರು ಹೇಗೆಲ್ಲಾ ಜನ ಸಾಮಾನ್ಯರನ್ನು ಯಾಮಾರಿಸ್ತಾರೆ ಅನ್ನೋದಕ್ಕೆ ಈ ರಸ್ತೆಯೇ ಸಾಕ್ಷಿ. ಹಾವೇರಿ (Haveri) ತಾಲೂಕು ಹೊಸರಿತ್ತಿ ಗ್ರಾಮದಲ್ಲಿ ಕಳೆದ ವರ್ಷ ಸುರಿದ ಬಾರೀ ಮಳೆಗೆ ಗ್ರಾಮೀಣ ಪ್ರದೇಶದ ರಸ್ತೆಗಳು ಹಾಳಾಗಿವೆ.
ಹಾಳಾಗಿವೆ. ಹಾಳಾದ ರಸ್ತೆ ದುರಸ್ತಿಗೆ ಸರ್ಕಾರ ಹಣ ಬಿಡುಗಡೆ ಮಾಡಿದೆ. ಅಧಿಕಾರಿಗಳು, ಗುತ್ತಿಗೆದಾರರ ಹಣದಾಸೆಗೆ ಕಾಟಾಚಾರಕ್ಕೆ ರಸ್ತೆ ಮಾಡಿದ್ದಾರೆ. ರಸ್ತೆಗೆ ಹಾಕಲಾದ ಡಾಂಬರ್ ಗುಣಮಟ್ಟ ಇಲ್ಲದ ಕಾರಣ, 4 ದಿನಕ್ಕೆ ಡಾಂಬರ್ ಎದ್ದು ಬರುತ್ತಿದೆ. ಇದನ್ನು ಕೀಳಲು ಜೆಸಿಬಿ ಬೇಕಾಗಿಲ್ಲ, ಕೈಯಲ್ಲೇ ರೊಟ್ಟಿ ಮುರಿದಂಗೆ ಮುರಿಯಬಹುದು. ಇದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಗ್ 3 ಗಮನಕ್ಕೂ ತಂದಿದ್ದಾರೆ.