Asianet Suvarna News Asianet Suvarna News

ಎಚ್ಚರ..! ಕಳೆದ 9 ದಿನಗಳಲ್ಲಿ ರಾಜ್ಯದಲ್ಲಿ 224 ಜನರಿಗೆ ಕೊರೋನಾ ಸೋಂಕು..!

ರಾಜ್ಯದಲ್ಲಿ ಏಪ್ರಿಲ್ 30ರಂದು ಒಟ್ಟು 565 ಕೋರೋನಾ ಸೋಂಕಿತರಿದ್ದರು. ಆದರೆ ಮೇ 01 ರಿಂದ ಮೇ 09ರ ಅವಧಿಯಲ್ಲಿ 224 ಜನರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 789ಕ್ಕೆ ಏರಿಕೆಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

First Published May 9, 2020, 4:47 PM IST | Last Updated May 9, 2020, 4:56 PM IST

ಬೆಂಗಳೂರು(ಮೇ.09): ಕೊರೋನಾ ವೈರಸ್ ಪ್ರಕರಣ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗುತ್ತಿದ್ದು, ಕಳೆದ 9 ದಿನಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಬರೋಬ್ಬರಿ 224 ಜನರಿಗೆ ಕೋವಿಡ್ 19 ಸೋಂಕು ತಗುಲಿರುವುದು ಖಚಿತವಾಗಿದೆ.

ರಾಜ್ಯದಲ್ಲಿ ಏಪ್ರಿಲ್ 30ರಂದು ಒಟ್ಟು 565 ಕೋರೋನಾ ಸೋಂಕಿತರಿದ್ದರು. ಆದರೆ ಮೇ 01 ರಿಂದ ಮೇ 09ರ ಅವಧಿಯಲ್ಲಿ 224 ಜನರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 789ಕ್ಕೆ ಏರಿಕೆಯಾಗಿದೆ.

ತುಮಕೂರಿಗೆ ಕಂಟಕವಾದ ಪಾದರಾಯನಪುರದ ಆಸಾಮಿ..!

ಏಪ್ರಿಲ್ 09ರ ಮಾರ್ನಿಂಗ್ ಹೆಲ್ತ್ ಬುಲೆಟಿನ್‌ನಂತೆ 36 ಹೊಸ ಕೊರೋನಾ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಅದರಲ್ಲೂ ಬೆಂಗಳೂರಿನಲ್ಲೇ 12 ಹೊಸ ಕೊರೋನಾ ಪ್ರಕರಣಗಳು ದೃಢಪಟ್ಟಿದ್ದವು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.