Asianet Suvarna News Asianet Suvarna News

ನವಾಬರ ಕಾಲದಲ್ಲಿ ಧ್ವಂಸವಾಗಿ ಹೋಯ್ತಾ ಬಸವಣ್ಣನವರ ಅನುಭವ ಮಂಟಪ? ದರ್ಗಾದಲ್ಲಿ ಕಂಡ ಸಾಕ್ಷಿಗಳೇನು?

*ಹೈದ್ರಾಬಾದ್​ ನವಾಬ ಮನೆತನದವರ ವಶದಲ್ಲಿರುವ ಪೀರಪಾಷಾ ದರ್ಗಾ
*ಬಸವಣ್ಣ ಕಟ್ಟಿದ್ದ ಅನುಭವ ಮಂಟಪ ಪೀರ್ ಪಾಷಾ ದರ್ಗಾ ಆಗಿದೆಯಾ..?
*ಕರಾವಳಿಯಿಂದ ಬಸವನನಾಡಿಗೂ ಕಾಲಿಟ್ಟ ಧರ್ಮ ದಂಗಲ್​

ಬೀದರ್‌ (ಮೇ 28): ಪ್ರಧಾನಿ ಮೋದಿ ವಿಶ್ವಗುರು ಬಸವಣ್ಣರ (Vishwaguru Basavanna) ಬಗ್ಗೆ ಮಾತನಾಡುವ  ಮಾತುಗಳನ್ನ ಕೇಳಿದ್ರೆ ಒಂದು ಕ್ಷಣ ಮೈರೋಮಾಂಚನವಾಗುತ್ತೆ. ಕೆಲ ತಿಂಗಳ ಹಿಂದೆ ಪ್ರಧಾನಿ ಮೋದಿಯವರು (PM Narendra Modi) ಬಸವಣ್ಣರು 12 ನೇ ಶತಮಾತದಲ್ಲಿ ಕಟ್ಟಿಸಿದ್ದ ಅನುಭವ ಮಂಟಪದ ಬಗ್ಗೆ ಹಾಡಿ ಹೊಗಳಿದ್ದರು. ಈಗ ಬಸವಕಲ್ಯಾಣದ ಅನುಭವ ಮಂಟಪ (Anubhava Mantapa) ದರ್ಗಾ ಆಗಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಅನುಭವ ಮಂಟಪ ಇದ್ದ ಜಾಗದಲ್ಲಿ ಈಗ 'ಪೀರ್ ಪಾಷಾ ಬಂಗಲೆ' ಇದೆ. ಇತಿಹಾಸದ ಯಾವುದೋ ಒಂದು ಕಾಲಘಟ್ಟದಲ್ಲಿ ಅನುಭವ ಮಂಟಪವನ್ನು ಪೀರ್‌ಪಾಷಾ ಬಂಗಲೆಯಾಗಿ (Peer Pasha Dargah) ಪರಿವರ್ತನೆ ಮಾಡಲಾಗಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ.

12ನೇ ಶತಮಾನದಲ್ಲಿ ಬಸವಣ್ಣವರ ಅನುಭವ ಮಂಟಪ ನಿರ್ಮಾಣ ಮಾಡಿದ್ದರು. ತದನಂತರ ಆಡಳಿತಕ್ಕೆ ಬಂದ ನವಾಬರು  ಈ ಜಾಗದಲ್ಲಿಯೇ ಪೀರ್ ಪಾಶಾ ದರ್ಗಾ ನಿರ್ಮಾಣ ಮಾಡಿರುವ ಅನುಮಾನಗಳಿವೆ ಎಂದು ಬಸವ ಭಕ್ತರು ಹೇಳುತ್ತಿದ್ದಾರೆ. ಈ ಸಂಬಂಧ ಸೂಕ್ತ ಸಮೀಕ್ಷೆ ನಡೆಸಬೇಕು ಎಂದು ಭಕ್ತರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ಬಸವಣ್ಣ ಕರ್ಮಭೂಮಿಯಲ್ಲೂ ಈಗ ಮಸೀದಿ ವಿವಾದ ಆರಂಭ..!

ಇಷ್ಟೆ ಅಲ್ಲದೇ ಬಸವಕಲ್ಯಾಣ ಪೀರಪಾಷಾ ಬಂಗ್ಲಾ ದರ್ಗಾದಲ್ಲಿ ಅನುಭವ ಮಂಟಪದ ಕುರುಹುಗಳು ಪತ್ತೆ ಹಿನ್ನೆಲೆಯಲ್ಲಿ  ಜೂನ್ 12 ರಂದು ಮೂಲ ಅನುಭವ ಮಂಟಪದ ಮಠಾಧೀಶ ಬೃಹತ್ ರ‍್ಯಾಲಿ ನಡೆಸಲಿದ್ದಾರೆ.  ನೂತನ ಅನುಭವ ಮಂಟಪದ ನಿರ್ಮಾಣದ ಜತೆ ಮೂಲ ಅನುಭವ ಮಂಟಪ ರಕ್ಷಿಸಿಸುವಂತೆ ಮನವಿ ಮಾಡಿಕೊಂಡಿದ್ದಾರೆ.  

12ನೇ ಶತಮಾನದ ಅನುಭವ ಮಂಟಪ ಈಗ ಪೀರಪಾಷಾ ದರ್ಗಾ ಆಗಿದೆ ಎಂದು ವಾದ ಅವರದ್ದು.  ನಿಜಾಮರ ಕಾಲದಲ್ಲಿ ಅನುಭವ ಮಂಟಪವನ್ನ ಪೀರಪಾಷಾ ದರ್ಗಾ ಎಂದು ಕಬ್ಜಾ ಮಾಡಲಾಗಿದೆ,  ಈಗ ಹೈದ್ರಾಬಾದಿನ ನವಾಬ ಮನೆತನದವರ ವಶದಲ್ಲಿರುವ ಪೀರಪಾಷಾ ದರ್ಗಾ ಮೂಲ ಅನುಭವ ಮಂಟಪ ರಕ್ಷಿಸಬೇಕೆಂದು ಮಠಾಧೀಶರು, ಸಂಘಟನೆಗಳು ಮನವಿಯಾಗಿದೆ. ಈ ಕುರಿತ ಕಂಪ್ಲೀಟ್‌ ವರದಿ ಇಲ್ಲಿದೆ 

Video Top Stories