Asianet Suvarna News Asianet Suvarna News

ಹೊನ್ನಾವರ ಡೇಂಜರ್‌ ಸೇತುವೆಯಿಂದ ಮುಕ್ತಿ ಯಾವಾಗ? BIG 3 ವರದಿ ಬಳಿಕ ಎಚ್ಚೆತ್ತ ಆಡಳಿತ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿನ ಡೇಂಜರ್‌ ಸೇತುವೆ ಬಗ್ಗೆ ಬೆಳಗ್ಗೆ ವರದಿ ಮಾಡಿದ್ವಿ. ವರದಿ ಬೆನ್ನಲ್ಲೇ ಜಿಲ್ಲಾಡಳಿತ ಹಾಗೂ ಶಾಸಕರು ಎಚ್ಚೆತ್ತಿದ್ದಾರೆ. ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಮಾಡುವ ಆಶ್ವಾಸನೆ ನೀಡಿದ್ದಾರೆ.

ಉತ್ತರ ಕನ್ನಡ(ಮೇ.27):  ಶಾಲೆಗೆ ತೆರಳುವ ಮಕ್ಕಳು ಸೇರಿದಂತೆ ಎಲ್ಲರೂ ಈ ಸೇತುವೆ ಮೇಲೆ ನಡೆದಾಡೋವಾಗ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತ ಪರಿಸ್ಥಿತಿ ನಿರ್ಮಾಣವಾದ ಘಟನೆ ಉತ್ತರ ಕನ್ನಡ  (Uttara Kannada)ಜಿಲ್ಲೆಯ ಹೊನ್ನಾವರ ತಾಲೂಕಿನ (Honnavar Taluk) ಸಾಲ್ಕೋಡು ಗ್ರಾಮದಲ್ಲಿ (Salkodu Village) ನಡೆದಿದೆ. ಈ ಕುರಿತಂತೆ ಸುವರ್ಣ ನ್ಯೂಸ್ ಬಿಗ್ 3 ಕಾರ್ಯಕ್ರಮದಲ್ಲಿ ವಿಸ್ತಾರದ ವರದಿ ಪ್ರಕಟವಾಗಿತ್ತು.


ಸುದ್ದಿ ಪ್ರಸಾರವಾದ ಬೆನ್ನಲ್ಲಿಯೇ ಈ ಕುರಿತಂತೆ ಕ್ರಮ ಕೈಗೊಳ್ಳಲು ಉತ್ತರ ಕನ್ನಡ ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರು ಮುಂದಾಗಿದ್ದಾರೆ. ವರದಿ ಬಂದ ಬೆನ್ನಲ್ಲಿಯೇ ಶಾಸಕ ದಿನಕರ ಶೆಟ್ಟಿ (MLA Dinakar Shetty) ಹಾಗೂ ಸಿಇಒ ಪ್ರಿಯಾಂಕಾ ಸಭೆ ನಡೆಸಿದ್ದಾರೆ. ಶೀಘ್ರದಲ್ಲಿಯೇ ಸಾಲ್ಕೋಡಿಗೆ ತಂಡ ಕಳಿಸಿ ಆಗಬೇಕಾದ ಕೆಲಸಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಶಾಶ್ವತ ಪರಿಹಾರಕ್ಕೂ ಮುನ್ನ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡುವುದಾಗಿಯೂ ಆಶ್ವಾಸನೆ ನೀಡಿದ್ದಾರೆ ಎಂದು ಹೇಳಲಾಗಿದೆ.

BIG 3: ಈ ಸೇತುವೆಯಲ್ಲಿ ನಡೆದಾಡಲಿಕ್ಕೆ ಗುಂಡಿಗೆ ಬೇಕು: ಅಡಿಕೆ ಮರವೇ ಸೇತುವೆ..!

ಅಡಿಕೆ ಮರದ ಸೇತುವೆ ಬದಲು ತಕ್ಷಣಕ್ಕೆ ಹಲಗೆಯ ಸೇತುವೆಯನ್ನು ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಈಗಾಗಲೇ 60 ಲಕ್ಷ ರೂಪಾಯಿ ತೆಗೆದಿರಿಸಿದ್ದೇನೆ. ಮಳೆಗಾಲ ಪ್ರಾರಂಭವಾಗುವ ಮುನ್ನ ಜನರ ಸುರಕ್ಷತೆಗಾಗಿ ಆದಷ್ಟು ಕ್ರಮ ತೆಗೆದುಕೊಳ್ಳಲಿದ್ದೇನೆ ಎಂದು ಹೊನ್ನಾವರ ಶಾಸಕ ದಿನಕರ ಶೆಟ್ಟಿ ಹೇಳಿದ್ದಾರೆ.

Video Top Stories