Asianet Suvarna News Asianet Suvarna News

ಅಶಿಸ್ತು ತೋರಿದ ಪಶುವೈದ್ಯಾಧಿಕಾರಿಗಳ ವಿರುದ್ಧ ಕ್ರಮ

ಪಶುವೈದ್ಯಾಧಿಕಾರಿಗಳನ್ನು ಸಸ್ಪೆಂಡ್ ಮಾಡುವ ಎಚ್ಚರಿಕೆ

ವಿಧಾನಪರಿಷತ್ ನಲ್ಲಿ ಪ್ರಭು ಚೌಹಾಣ್ ಹೇಳಿಕೆ

ಸುನೀಲ್ ವಲ್ಯಾಪುರೆ ಆರೋಪಕ್ಕೆ ಪ್ರತಿಕ್ರಿಯೆ

ಬೆಂಗಳೂರು (ಮಾ.9): ಪಶು ವೈದ್ಯಾಧಿಕಾರಿಗಳು (Veterinary Doctors) ಸರಿಯಾಗಿ ಕರ್ತವ್ಯಕ್ಕೆ ಹಾಜಾರಾಗುತ್ತಿಲ್ಲ. ಡೆಪ್ಯುಟೇಶನ್ (Deputation) ಮೇಲೆ ನಿಯೋಜನೆ ಮಾಡಿದವರು ಕೆಲಸಕ್ಕೆ ಬರುತ್ತಿಲ್ಲ ಎಂದು ವಿಧಾನ ಪರಿಷತ್ ನಲ್ಲಿ ಸುನೀಲ್ ವಲ್ಯಾಪುರೆ (Sunil Vallyapure) ಆರೋಪ ಮಾಡಿದರು.

ಈ ಪ್ರಶ್ನೆಗೆ ಉತ್ತರಿಸಿದ ಪ್ರಭು ಚೌಹಾಣ್ (Prabhu Chavan), ಯಾರು ಡೆಪ್ಯುಟೇಶನ್ ಮೇಲೆ ಬೇರೆ ಕಡೆ ಹೋಗಿದ್ದಾರೋ ಅವರನ್ನು ವಾಪಸ್ ಕರೆಸಿಕೊಳ್ಳುತ್ತೇವೆ. ವಾಪಸ್ ಬರದೇ ಇದ್ದವರನ್ನು ಸಸ್ಪೆಂಡ್ ಮಾಡುತ್ತೇವೆ. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಇಲ್ಲ ಎಂದು ಹೇಳಿದರು.

ಮಂಡ್ಯದಲ್ಲಿ ಮುಂದುವರೆದ ಸುಮಲತಾ v/s ಜೆಡಿಎಸ್ ಸಮರ, ಗುದ್ದಲಿ ಪೂಜೆ ಮಾಡದೆ ವಾಪಸ್!
ಅದರೊಂದಿಗೆ ಪಶು ವೈದ್ಯಕೀಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು. ಬೀದರ್ ನ ಪಶು ವೈದ್ಯಕೀಯ ವಿಶ್ವವಿದ್ಯಾಲಯವನ್ನು ಸ್ಥಳಾಂತರ ಮಾಡುವ ಪ್ರಶ್ನೆಯೇ ಇಲ್ಲ ಎಂದು ಪಶು ಸಂಗೋಪನಾ ಸಚಿವ (Minister of Animal Husbandry) ಪ್ರಭು ಚೌಹಾಣ್ ಮಾಹಿತಿ ನೀಡಿದ್ದಾರೆ.

Video Top Stories