ಚಂದ್ರನತ್ತ ಭಾರತದ 'ವಿಕ್ರಮ'ನ ಪರಾಕ್ರಮ ನಡಿಗೆ: ರಾಜಕೀಯ ನಾಯಕರು, ಸಿನಿ ಗಣ್ಯರಿಂದ ಶುಭಹಾರೈಕೆ
ಇಂದು ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ದಕ್ಷಿಣ ಧ್ರುವವನ್ನು ಚಂದ್ರಯಾನ 3ನ ವಿಕ್ರಮ್ ಲ್ಯಾಂಡರ್ ಸ್ಪರ್ಶಿಸಲಿದೆ.
ಭೂಮಿಯಿಂದ ಹೊರಟ ಚಂದ್ರಯಾನ(Chandrayaan 3) ನೌಕೆ 42 ದಿನಗಳ ಸುದೀರ್ಘ ಪ್ರಯಾಣದ ಬಳಿಕ ಇಂದು ಸಂಜೆ 6 ಗಂಟೆ 4 ನಿಮಿಷಕ್ಕೆ ಗೋಧೂಳಿ ಮುಹೂರ್ತದಲ್ಲಿ ಚಂದ್ರನ ದಕ್ಷಿಣ ಧ್ರುವ ಸ್ಪರ್ಶಿಸಲಿದೆ. ಇಸ್ರೋ ಸಾಧನೆ ಕಣ್ತುಂಬಿಕೊಳ್ಳುವ ಕಾತುರವಾಗಿರುವ ಭಾರತ, ಚಂದ್ರಯಾನ ಯಶಸ್ಸಿಗೆ ಪೂಜೆ, ಪುನಸ್ಕಾರ ನಡೆಸುತ್ತಿದೆ. ಮತ್ತೊಂದು ಕಡೆ ಭಾರತೀಯರು ಇಸ್ರೋಗೆ ಆಲ್ ದಿ ಬೆಸ್ಟ್ ಎಂದು ಶುಭ ಹಾರೈಸುತ್ತಿದ್ದಾರೆ. ನಟ ಡಾಲಿ ಕೂಡ ವಿಕ್ರಮ್ ಲ್ಯಾಂಡರ್‌ಗೆ ವಿಷ್ ಮಾಡಿದ್ದಾರೆ. ಗಣ್ಯರು ಇಸ್ರೋ ವಿಜ್ಞಾನಿಗಳಿಗೆ(Scientist) ಆತ್ಮತ್ಥೈರ್ಯ ತುಂಬುತ್ತಿದ್ದಾರೆ. ಸ್ಯಾಂಡಲ್‌ವುಡ್‌ನ ನಟರಾದ ರಮೇಶ್ ಅರವಿಂದ್, ನೀನಾಸಂ ಸತೀಶ್ ಹಾರೈಸಿದ್ದಾರೆ. ಚಂದ್ರನ ಮೇಲೆ ನೌಕೆ ಇಳಿಸಿದ 4ನೇ ದೇಶ ಎಂಬ ಹೆಗ್ಗಳಿಕೆ ಭಾರತಕ್ಕೆ ಸಲ್ಲುತ್ತದೆ. ಇನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಏನಿದೆ ಎಂದು ಅನ್ವೇಷಣೆ ನಡೆಸಿದ ಮೊದಲ ದೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಇದನ್ನೂ ವೀಕ್ಷಿಸಿ: ಭುವನ್ ಹೊಸ ಮನೆ ಗೃಹ ಪ್ರವೇಶ ಮಾಡಿದ ಕೊಡಗಿನ ಬೆಡಗಿ !