ಭುವನ್ ಹೊಸ ಮನೆ ಗೃಹ ಪ್ರವೇಶ ಮಾಡಿದ ಕೊಡಗಿನ ಬೆಡಗಿ !

ಹರ್ಷಿಕಾಗಾಗಿ ತೋಟದ ಮನೆಯಲ್ಲಿ ಭುವನ್‌ ಪೊನ್ನಣ್ಣ ಮನೆಯೊಂದನ್ನು ಕಟ್ಟಿಸಿದ್ದು, ಇದರ ಗೃಹ ಪ್ರವೇಶ ಮಾಡಲಾಗಿದೆ.
 

First Published Aug 23, 2023, 10:23 AM IST | Last Updated Aug 23, 2023, 10:23 AM IST

ಮದುವೆಗೂ ಮುನ್ನವೇ ಹರ್ಷಿಕಾ ಪೂಣಚ್ಚ ಹೊಸ ಮನೆ(Home) ಗೃಹ ಪ್ರವೇಶ ಮಾಡಿದ್ದಾರೆ. ಭುವನ್ ಪೊನ್ನಣ್ಣ ಅವರ ಹೊಸ ಮನೆಯ ಗೃಹ ಪ್ರವೇಶವನ್ನು ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ(Harshika Poonacha) ಮಾಡಿದ್ದಾರೆ. ಹರ್ಷಿಕಾಗಾಗಿಯೇ ತೋಟದಲ್ಲಿ ಭುವನ್ (bhuvanponnanna) ಮನೆ ಕಟ್ಟಿಸಿದ್ದಾರೆ. ಹಾಗಾಗಿ ಮದುವೆಗೂ ಮುನ್ನವೇ ಹೊಸ ಮನೆ ಗೃಹ ಪ್ರವೇಶವನ್ನು ಭುವನ್ ಹರ್ಷಿಕಾ ಮಾಡಿದ್ದಾರೆ. ಸಂಪ್ರದಾಯದಂತೆ ದೀಪ ಹಿಡಿದು ಹೊಸ ಮನೆಗೆ ಭುವನ್‌ ಬಾವಿ ಪತ್ನಿ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಭುವನ್‌ ಪೊನ್ನಣ್ಣ ಕೊಡವ ಶೈಲಿಯಲ್ಲಿ ಗನ್ ಹಿಡಿದು ಗುಂಡು ಹಾರಿಸಿ ಶುಭಕಾರ್ಯವನ್ನು ಶುರು ಮಾಡಿದರು.ಈ ಸಂಭ್ರಮದ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗುತ್ತಿವೆ.

ಇದನ್ನೂ ವೀಕ್ಷಿಸಿ:  ಟೋಬಿಗೆ ಕೌಂಟ್‌ಡೌನ್‌.. ರೀವಿಲ್‌ ಆಯ್ತು ಮೇಕಿಂಗ್: 10 ಕೋಟಿ ಬಜೆಟ್‌ನಲ್ಲಿ ಸಿದ್ಧವಾಯ್ತು ಸಿನಿಮಾ ..!