ಯೋಗರಾಜ್ ಭಟ್ಟರ 'ಗರಡಿ' ಯಲ್ಲಿ ಕೌರವ ಬಿ ಸಿ ಪಾಟೀಲ್ ಜಂಗಿಕುಸ್ತಿ..!
ಯೋಗರಾಜ ಭಟ್ (Yogaraj Bhat)ನಿರ್ದೇಶನದ ಹೊಸ ಸಿನಿಮಾ ‘ಗರಡಿ’(Gradi) ಚಿತ್ರೀಕರಣ ಭರದಿಂದ ಸಾಗುತ್ತಿದೆ. ಪ್ರಸ್ತುತ ಬೆಂಗಳೂರು ಸಮೀಪ ಚಿಕ್ಕಜಾಲದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕುಸ್ತಿ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ. ಬಿರು ಬಿಸಿಲಿನಲ್ಲಿ ನಾಯಕ ಮತ್ತು ವಿಲನ್ ಮಧ್ಯ ಕುಸ್ತಿ ಹೋರಾಟವನ್ನು ಬಿ.ಸಿ. ಪಾಟೀಲ್, ರವಿಶಂಕರ್ ವೀಕ್ಷಿಸುತ್ತಿರುವ ದೃಶ್ಯವನ್ನು ಭಟ್ರು ಚಿತ್ರೀಕರಿಸಿಕೊಂಡರು.

ಪತ್ನಿ ಅಮೂಲ್ಯಗಾಗಿ ಲೇಕ್‌ನಲ್ಲಿ ಹೂವಿನ ಮಂಟಪ ಕಟ್ಟಿಸಿದ್ದ ಜಗದೀಶ್, ಫೋಟೋಶೂಟ್ ವೈರಲ್
‘ಇದೊಂದು ಬಡವನ ಕತೆ. ಅತಿ ಸಾಮಾನ್ಯನ ಕತೆ. ಗರಡಿಯಲ್ಲಿ ಅಡುಗೆ ಮಾಡಿಕೊಂಡಿದ್ದ ಹುಡುಗನ ಕತೆ. ನನಗೆ ಏಕಲವ್ಯನ ಪಾತ್ರ ತುಂಬಾ ಇಷ್ಟ. ಎಲ್ಲೋ ಸೈಡಲ್ಲಿ ನಿಂತುಕೊಂಡು ಯಾರಿಗೂ ಹೇಳದೆ ತನಗೆ ಬೇಕಾದ್ದು ಕಲಿಯುವ ಏಕಲವ್ಯನಂತಹ ಪಾತ್ರದ ಕತೆ. ಆ ಹುಡುಗನನ್ನು ಗರಡಿಯಿಂದ ಆಚೆ ಹಾಕಿದ ಮೇಲೆ ಏನಾಗುತ್ತದೆ ಅನ್ನುವ ಕತೆ ಬರೆದಿದ್ದೇನೆ. ನಾನು ಖುಷಿ ಖುಷಿಯಾಗಿ ಬರೆದುಕೊಂಡ ಕೆಲವು ಸಿನಿಮಾಗಳಲ್ಲಿ ಇದೂ ಒಂದು. ಬಹಳ ಹಿಂದೆ ಗರಡಿ ಊರ ಕಾಯುವ ಸ್ಥಳವಾಗಿತ್ತು. ಈಗ ಗರಡಿ ಕಾಣೆಯಾಗಿದೆ. ಆ ಒಂದು ಗರಡಿಯ ಕುಸ್ತಿ ಪರಂಪರೆಯನ್ನು ಈ ಸಿನಿಮಾದಲ್ಲಿ ತೋರಿಸುತ್ತಿದ್ದೇವೆ’ ಎಂದು ಯೋಗರಾಜ್ ಭಟ್ಟರು ಹೇಳಿದರು.