Asianet Suvarna News Asianet Suvarna News

ಸೆಟ್ಟೇರಲಿದೆ ಉಪ್ಪಿ ನಿರ್ದೇಶನ ಸಿನಿಮಾ; ಜೂ.3 ರಿಂದ ಪಂಗನಾಮ ಕಿಕ್ ಸ್ಟಾರ್ಟ್!

ಟಾಪ್ ಮೋಸ್ಟ್ ಡೈರೆಕ್ಷರ್ ಗಳಲ್ಲಿ ಒಬ್ಬರಾದ ರಿಯಲ್ ಸ್ಟಾರ್ ಉಪ್ಪಿ (upendra) ನಿರ್ದೇಶನದ ಸಿನಿಮಾ ಸೆಟ್ಟೇರಲು ಸಿದ್ದವಾಗಿದೆ. ಪ್ರತಿ ಬಾರಿ ಟೈಟಲ್ ನಿಂದಲೇ ಕುತೂಹಲ ಹುಟ್ಟಿಸೋ ಉಪ್ಪಿ ಈ ಭಾರಿಯೂ ಅದೇ ಟ್ರಿಕ್ಸ್ ಪ್ಲೇ ಮಾಡಿದ್ದಾರೆ. 

ಟಾಪ್ ಮೋಸ್ಟ್ ಡೈರೆಕ್ಷರ್ ಗಳಲ್ಲಿ ಒಬ್ಬರಾದ ರಿಯಲ್ ಸ್ಟಾರ್ ಉಪ್ಪಿ (Upendra) ನಿರ್ದೇಶನದ ಸಿನಿಮಾ ಸೆಟ್ಟೇರಲು ಸಿದ್ದವಾಗಿದೆ. ಪ್ರತಿ ಬಾರಿ ಟೈಟಲ್ ನಿಂದಲೇ ಕುತೂಹಲ ಹುಟ್ಟಿಸೋ ಉಪ್ಪಿ ಈ ಭಾರಿಯೂ ಅದೇ ಟ್ರಿಕ್ಸ್ ಪ್ಲೇ ಮಾಡಿದ್ದಾರೆ. ಸದ್ಯ ಉಪ್ಪಿ ರಿವಿಲ್ ಮಾಡಿರೋ ಟೈಟಲ್ ನೋಡಿ ಎಲ್ಲರೂ ಯಾರು? ಯಾರಿಗೆ? ಪಂಗನಾಮ ಹಾಕ್ತಾರೆ ಅಂತಿದ್ದಾರೆ.

ಜೂನ್ 3 ರಂದು ಅದ್ಧೂರಿ ಮುಹೂರ್ತದೊಂದಿಗೆ  ಉಪ್ಪಿ ನಿರ್ದೇಶನದ ಪ್ರಾಜೆಕ್ಟ್ ಕಿಕ್‌ಸ್ಟಾರ್ಟ್ ಆಗಲಿದೆ. ಉಪ್ಪಿ ಡೈರೆಕ್ಟರ್ ಕ್ಯಾಪ್ ಯಾವಾಗ ಹಾಕೋತಾರೆ ಅಂತ ಕಾದಿದ್ದವ್ರಿಗೆ ಇದೊಂದು ಗುಡ್ ನ್ಯೂಸ್ ಆಗಿದ್ದು ಸದ್ಯ ಉಪ್ಪಿ ಯಾವ ಸಬ್ಜೆಕ್ಟ್ ಆಯ್ಕೆ ಮಾಡಿಕೊಂಡಿರ್ತಾರೆ ಅನ್ನೋದೇ ಕುತೂಹಲ.

ಜೂ. 3 ಕ್ಕೆ ಅಭಿಮಾನಿಗಳಿಗೆ ದೊಡ್ಡದಾಗಿ ಗುಡ್‌ನ್ಯೂಸ್ ಕೊಡಲಿದ್ದಾರೆ ರಾಕಿಭಾಯ್..!

ಉಪ್ಪಿ ನಿರ್ದೇಶನ ಮಾಡ್ತಿರೋ ಈ ಚಿತ್ರ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ನಿರ್ಮಾಣ ಆಗಲಿದೆ. ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ಟಾಲಿವುಡ್ , ಕಾಲಿವುಡ್ ನಲ್ಲಿಯೂ ಹೆಚ್ಚೆಚ್ಚು ಅಭಿಮಾನಿಗಳನ್ನ ಹೊಂದಿದ್ದಾರೆ ಉಪ್ಪಿ...ಇನ್ನು ಸಿನಿಮಾವನ್ನ . ಕೆ ಪಿ ಶ್ರೀಕಾಂತ್ ಅವರ ವೀನಸ್ ಎಂಟರ್ಟೈನರ್ಸ್ ಸಹಯೋಗದೊಂದಿಗೆ ಜಿ ಮನೋಹರನ್ ಅವರ ಲಹರಿ ಫಿಲ್ಮ್ಸ್  ನಿರ್ಮಾಣ ಮಾಡುತ್ತಿದೆ. ನಿರ್ಮಾಪಕ ಕೆ ಪಿ  ಶ್ರೀಕಾಂತ್ ಅವ್ರ ಪಾಲಿನ ಲಕ್ಕಿ ದೇವಸ್ಥಾನವಾದ ಬಂಡಿ ಮಹಾಕಾಳಿ ದೇವಾಲಯದಲ್ಲಿಯೇ ಈ ಚಿತ್ರದ ಮಹೂರ್ತವೂ ನಡೆಯಲಿದೆ.

Video Top Stories