Asianet Suvarna News Asianet Suvarna News

ಜೂ. 3 ಕ್ಕೆ ಅಭಿಮಾನಿಗಳಿಗೆ ದೊಡ್ಡದಾಗಿ ಗುಡ್‌ನ್ಯೂಸ್‌ ಕೊಡಲಿದ್ದಾರೆ ರಾಕಿಭಾಯ್..!

ಯಶ್ ಅಭಿನಯದ ನರ್ತನ್ ನಿರ್ದೇಶನದ ಚಿತ್ರವನ್ನ ಜೂನ್ 3 ರಂದು ಅನೌನ್ಸ್ ಮಾಡಲಿದ್ದಾರೆ ಅನ್ನೋ ಸುದ್ದಿ ಜೋರಾಗಿದೆ. ಜೂನ್ 3 ಕ್ಕೆ ಕೆಜಿಎಫ್ 2 ಬಿಡುಗಡೆ ಆಗಿ 50 ದಿನಗಳಾಗುತ್ತೆ. 

ಕೆಜಿಎಫ್ 2 (KGF 2)  ಸಕ್ಸಸ್ ಖುಷಿಯಲ್ಲಿರೋ ರಾಕಿಂಗ್ ಸ್ಟಾರ್ ಯಶ್ (Yash) ಈಗ ತಮ್ಮ ಮುಂದಿನ ಸಿನಿಮಾ ಅನೌನ್ಸ್ ಮಾಡೋ ತಯಾರಿಯಲ್ಲಿದ್ದಾರೆ. ಕೆಜಿಎಫ್ 2 ನೋಡಿ ಸಂತಸ ಪಟ್ಟ ಅಭಿಮಾನಿಗಳು ಮುಂದಿನ ಸಿನಿಮಾ ಯಾವಾಗ ಅನೌನ್ಸ್ ಮಾಡ್ತಾರೆ ಅಂತ ಕಾತುರರಾಗಿದ್ರು. ಈಗ ಆ ಸಮಯ ಆ ದಿನ ಬಂದಿದೆ. ರಾಕಿ ತಮ್ಮ ಅಭಿಮಾನಿಗಳಿಗಾಗಿ ಗುಡ್ ನ್ಯೂಸ್ ಕೊಡಲು ಸಿದ್ದನಾಗಿದ್ದಾನೆ.

ಯಶ್ ಅಭಿನಯದ ನರ್ತನ್ ನಿರ್ದೇಶನದ ಚಿತ್ರವನ್ನ ಜೂನ್ 3 ರಂದು ಅನೌನ್ಸ್ ಮಾಡಲಿದ್ದಾರೆ ಅನ್ನೋ ಸುದ್ದಿ ಜೋರಾಗಿದೆ. ಜೂನ್ 3 ಕ್ಕೆ ಕೆಜಿಎಫ್ 2 ಬಿಡುಗಡೆ ಆಗಿ 50 ದಿನಗಳಾಗುತ್ತೆ. ಇದೇ ಖುಷಿಯಲ್ಲಿ ಯಶ್ ಅಭಿನಯದ ಹೊಸ ಸಿನಿಮಾ ಅನೌನ್ಸ್ ಆಗಲಿದ್ಯಂತೆ. ಇನ್ನು ಯಶ್ 19 ನೇ ಸಿನಿಮಾವನ್ನ ಮಫ್ತಿ ಸಿನಿಮಾ ಖ್ಯಾತಿಯ ನರ್ತನ್ ನಿರ್ದೇಶನ ಮಾಡಲಿದ್ದಾರೆ. ಚಿತ್ರಕ್ಕೆ ಝೀ ಸ್ಟುಡಿಯೋಸ್ ಹಾಗೂ ಕೆವಿಎನ್ ಸಂಸ್ಥೆ ಬಂಡವಾಳ ಹಾಕಲಿದ್ಯಂತೆ..ಈಗಾಗಲೇ ನಿರ್ಮಾಣದ ಎಲ್ಲಾ ತಯಾರಿ ನಡೆದಿದ್ದು ಸದ್ಯ ಚಿತ್ರ ಅನೌನ್ಸ್ ಮಾಡಿ ಶೂಟಿಂಗ್ ಶುರು ಮಾಡುವುದಷ್ಟೇ ಬಾಕಿ.

ಕಳೆದ ಎಂಟು ವರ್ಷದಿಂದ ಒಂದೇ ಲುಕ್ ನಲ್ಲಿರೋ ಯಶ್ ಈಗ ತಮ್ಮ ಔಟ್ ಲುಕ್ ಅನ್ನು  ಕಂಪ್ಲೀಟ್ ಆಗಿ ಬದಲಾಯಿಸುವ ಸಮಯ ಬಂದಿದೆ...ಹೊಸ ಸಿನಿಮಾಗಾಗಿ ಹೊಸ ಅವತಾರದಲ್ಲಿ ರಾಕಿಂಗ್ ಸ್ಟಾರ್ ಅಭಿಮಾನಿಗಳ ಮುಂದೆ ಎಂಟ್ರಿ ಕೊಡಲಿದ್ದಾರೆ.
 

Video Top Stories