Asianet Suvarna News Asianet Suvarna News

ಸಕ್ಸಸ್ ಬಾರಿಸಲು ಸಜ್ಜಾದ ಸ್ಯಾಂಡಲ್‌ವುಡ್: ಬರ್ತಿವೆ 12ಕ್ಕೂ ಹೆಚ್ಚು ಬಿಗ್ ಸಿನಿಮಾಗಳು

ಭಾರತೀಯ ಸಿನಿಮಾರಂಗದಲ್ಲಿ ಸ್ಯಾಂಡಲ್ ವುಡ್ ಲೆವೆಲ್ ಬದಲಾಗಿದೆ. ಸೌತ್ ಚಿತ್ರರಂಗದಲ್ಲಿಯೇ ಕನ್ನಡ ಸಿನಿಮಾರಂಗ ಅಂದ್ರೆ ಬೇರೆಯದ್ದೇ ಟಾಕ್ ಇದೆ.

Aug 17, 2022, 4:53 PM IST

ಭಾರತೀಯ ಸಿನಿಮಾರಂಗದಲ್ಲಿ ಸ್ಯಾಂಡಲ್ ವುಡ್ ಲೆವೆಲ್ ಬದಲಾಗಿದೆ. ಸೌತ್ ಚಿತ್ರರಂಗದಲ್ಲಿಯೇ ಕನ್ನಡ ಸಿನಿಮಾರಂಗ ಅಂದ್ರೆ ಬೇರೆಯದ್ದೇ ಟಾಕ್ ಇದೆ. ಈಗಾಗಲೇ ಈ ವರ್ಷದ 8 ತಿಂಗಳಲ್ಲಿ ಕೆಜಿಎಫ್ 2 , 777ಚಾರ್ಲಿ, ವಿಕ್ರಾಂತ್ ರೋಣ , ಗಾಳಿಪಟ2 ಹೀಗೆ ಒಂದಕ್ಕಿಂತ ಒಂದು ಹಿಟ್ ಚಿತ್ರಗಳನ್ನ ನೀಡಿದ ಸ್ಯಾಂಡಲ್ ವುಡ್  ಇನ್ನು ಐದಾರು ತಿಂಗಳಲ್ಲಿ ಮತ್ತಷ್ಟು ಬ್ಲಾಕ್ ಬಾಸ್ಟರ್ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನ ರಂಜಿಸೋದ್ರ ಜೊತೆ ಅನ್ಯ ಭಾಷೆಯ ಚಿತ್ರಗಳಿಗೆ ಟಕ್ಕರ್ ಕೊಡಲಿದ್ದಾರೆ. ಮಾಸ್ ಕ್ಲಾಸ್ ಸಿನಿಮಾಗಳನ್ನ ನೋಡಿ ಎಂಜಾಯ್ ಮಾಡಿರೋ ಪ್ರೇಕ್ಷಕರ ಮುಂದೆ ಅಣ್ಣಾವ್ರ ಪ್ಯಾಮಿಲಿಯ ಕುಡಿ, ಯಂಗ್ ಹೀರೋ ಧೀರೆನ್ ರಾಮ್ ಕುಮಾರ್ ಅವರ ಶಿವ143 ಚಿತ್ರದ ಮೂಲಕ ಬರ್ತಿದ್ದಾರೆ. ಈ ಚಿತ್ರದಿಂದ ಸ್ಯಾಂಡಲ್ ವುಡ್ ಗೆ ಹೊಸ ನಾಯಕ ಸಿಕ್ತಾನೆ ಅನ್ನೋ ಭರವಸೆ ಮೂಡಿದೆ. ಶಿವ 143 ಇದೇ ತಿಂಗಳು 26ಕ್ಕೆ ರಿಲೀಸ್ ಆಗ್ತಿದೆ. ಇನ್ನು ಫ್ರೆಶ್ ಜಾನರ್ ಎನ್ನಿಸೋ ಹಾಡು, ಟೀಸರ್ ಮೂಲಕ ಹೊಸ ಗುಂಗಿಡಿಸುತ್ತಿರೋ ಮಾನ್ಸೂನ್ ರಾಗ ಚಿತ್ರದ ಮೇಲೂ ಸಾಕಷ್ಟು ನಿರೀಕ್ಷೆ ಇದೆ/...ರಚಿತಾ ಹಾಗೂ ಡಾಲಿ ಕಾಂಬಿನೇಷನ್ ಮೋಡಿ ಮಾಡೋದು ಕನ್ಫರ್ಮ್ ಅಂತಿದ್ದಾರೆ ಪ್ರೇಕ್ಷಕರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಗಂಧದಗುಡಿ. ಯಾರು ಮಿಸ್ ಮಾಡಿಕೊಳ್ಳದೇ ನೋಡಬೇಕು ಅಂತಿರೋ ಚಿತ್ರ ಇದು. ದೀಪಾವಳಿ ಸಂಭ್ರಮ ಹೆಚ್ಚು ಮಾಡಲು ಗಂಧದಗುಡಿ ತೆರೆಗೆ ಬರ್ತಿದ್ದು ಇದು ಇಂಡಸ್ಟ್ರಿಯ ಆಲ್ ಟೈಂ ರೆಕಾರ್ಡ್ ಸೆಟ್ ಮಾಡೋದ್ರಲ್ಲಿ ಡೌಟ್ ಇಲ್ಲ.