Asianet Suvarna News Asianet Suvarna News

ಅರುಂಧತಿ ನಕ್ಷತ್ರದ ಬದಲು ಅಪ್ಪುರನ್ನ ನೋಡಿದ ನವ ಜೋಡಿ!

ರಾಜರತ್ನ ಪುನೀತ್ ರಾಜ್‍ಕುಮಾರ್ (Puneeth Rajkumar) ಅಪ್ಪಟ ಅಭಿಮಾನಿಯೊಬ್ಬರು ತನ್ನ ವಿವಾಹದ (Wedding) ದಿನದಂದು ರಾಜರತ್ನನಿಗೆ ವಿಶೇಷವಾದ ನಮನ ಸಲ್ಲಿಸಿದ್ದಾರೆ. ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ಪಟ್ಟಣದ ನಿವಾಸಿಯಾಗಿರುವ ಆನಂದ ಪಟ್ಟಣ ಹಾಗೂ ಜ್ಯೋತಿ ಎನ್ನುವ ಯುವ ದಂಪತಿ ಪುನೀತ್ ಅವರ ನೆನಪಿನಲ್ಲಿ ವಿಶೇಷವಾಗಿ ವಿವಾಹವಾಗಿದ್ದಾರೆ. 

'ವಿಕ್ರಾಂತ್ ರೋಣ' ಟೀಸರ್ ಡೈಲಾಗ್‌ನಲ್ಲಿ RCB ತಂಡದ ಗ್ಲೆನ್ ಮ್ಯಾಕ್ಸ್ವೆಲ್..!

ರಾಯಬಾಗ ಪಟ್ಟಣದಲ್ಲಿ ನಡೆದ ವಿವಾಹ ಸಮಾರಂಭ ಸಂಪೂರ್ಣವಾಗಿ ಪುನೀತ್ ಮಾಯವಾಗಿತ್ತು. ಮದುವೆ ಸಮಾರಂಭ ನಡೆಯುವ ಕಲ್ಯಾಣ ಮಂಟಪ ಪುನೀತ್ ಭಾವಚಿತ್ರಗಳಿಂದ ರಾರಾಜಿಸುತ್ತಿತ್ತು. ಮದುವೆ ಸಮಾರಂಭದ ವೇದಿಕೆಯಲ್ಲೂ ಪುನೀತ್ ಭಾವಚಿತ್ರವನ್ನ ಹೂವಿನ ಅಲಂಕಾರದಿಂದ ಶೃಂಗಾರ ಮಾಡಲಾಗಿತ್ತು. ವಿಶೇಷವೆಂದರೆ ಈ ಯುವ ಜೋಡಿಗಳು ಅರುಂಧತಿ ನಕ್ಷತ್ರ ನೋಡುವ ಬದಲು ಪುನೀತ್ ಭಾವಚಿತ್ರವನ್ನ ನೋಡಿ ನವ ಜೀವನಕ್ಕೆ ಕಾಲಿಟ್ಟಿದೆ.

ನವ ವಧು-ವರರು ಅರುಂಧತಿ ನಕ್ಷತ್ರ ನೋಡುವುದು ವಾಡಿಕೆ. ಆದರೆ ಈ ಜೋಡಿ ಪುನೀತ್ ಭಾವಚಿತ್ರವನ್ನೇ ಅರುಂಧತಿ ನಕ್ಷತ್ರ ಎಂದು ನೋಡಿ ಆಶೀರ್ವಾದ ಪಡೆದಿದ್ದಾರೆ. ಈ ಜೋಡಿಯ ಮದುವೆ ನಂತರ ಪುನೀತ್ ಭಾವಚಿತ್ರದ ಮೆರವಣಿಗೆ ಮಾಡಿದ್ದಾರೆ. ಈ ಮೂಲಕ ಪುನೀತ್ ಎಲ್ಲೂ ಹೋಗಿಲ್ಲ ನಮ್ಮ ಮನದಲ್ಲಿಯೇ ಇದ್ದಾರೆ ಎಂಬುವುದಕ್ಕೆ ಈ ಮದುವೆ ಸಾಕ್ಷಿಯಾಗಿತ್ತು.