Asianet Suvarna News Asianet Suvarna News

Madhagaja: ರೋರಿಂಗ್ ಸ್ಟಾರ್ ಶ್ರೀಮುರಳಿ ಜೊತೆಗೆ ಚಿತ್ರತಂಡದ ಎಕ್ಸ್‌ಕ್ಲೂಸಿವ್ ಸಂದರ್ಶನ

Dec 6, 2021, 8:50 PM IST
  • facebook-logo
  • twitter-logo
  • whatsapp-logo

ಸ್ಯಾಂಡಲ್‌ವುಡ್‌ನ ರೋರಿಂಗ್ ಸ್ಟಾರ್ ಶ್ರೀಮುರಳಿ (SriiMurali) ಅಭಿನಯದ ಹಾಗೂ ಮಹೇಶ್ ಕುಮಾರ್ (Mahesh Kumar) ನಿರ್ದೇಶನದ 'ಮದಗಜ' (Madhagaja) ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಮೂರೇ ದಿನಕ್ಕೆ ಬರೋಬ್ಬರಿ 20 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್‌ ಅಫೀಸ್‌ನಲ್ಲೂ ರೇಕಾರ್ಡ್ ಮಾಡಿದೆ. 'ಮದಗಜ' ಶ್ರೀಮುರಳಿ ಕೆರಿಯರ್‌ನಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿದ್ದು, ಒಂದು ಕಡೆ ಆಕ್ಷನ್ ಧಮಾಕ, ಮತ್ತೊಂದು ಕಡೆ ತಾಯಿ ಸೆಂಟಿಮೆಂಟ್ ಕಥೆಯನ್ನೊಳಗೊಂಡಿದೆ.

Madhagaja Response: ಮದಗಜ ಮೈಂಡ್‌ ಬ್ಲೋಯಿಂಗ್ ಎಂದ ಪ್ರೇಕ್ಷಕ ಪ್ರಭು..!

ಇದೀಗ 'ಮದಗಜ' ಚಿತ್ರದ ಬಗ್ಗೆ ನಟ ಶ್ರೀಮುರಳಿ, ನಿರ್ದೇಶಕ ಮಹೇಶ್ ಕುಮಾರ್, ಹಾಸ್ಯನಟ ಚಿಕ್ಕಣ್ಣ,  ಖಳನಾಯಕರಾದ ಗರುಡರಾಮ್ ಹಾಗೂ ಅನಿಲ್ ಸುವರ್ಣ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ಕೊಟ್ಟಿದ್ದಾರೆ. ಚಿತ್ರದ ಮೇಕಿಂಗ್, ಕಥೆ, ಹಾಡುಗಳು, ಪಾತ್ರಗಳು, ಚಿತ್ರೀಕರಣ ಸ್ಥಳಗಳು ಹಾಗೂ ಕಲೆಕ್ಷನ್ ಬಗ್ಗೆ ಎಲ್ಲರೂ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ 'ಮದಗಜ' ಚಿತ್ರ ವೀಕ್ಷಿಸಿರುವ ಅಭಿಮಾನಿಗಳ ಜೊತೆ ದೂರವಾಣಿ ಮುಖಾಂತರ ಚಿತ್ರತಂಡ ಖುಷಿ-ಖುಷಿಯಾಗಿ ಮಾತನಾಡಿದ್ದಾರೆ. ಇನ್ನು ಇದೇ ಖುಷಿಯಲ್ಲಿ ಚಿತ್ರತಂಡ ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಕೇಕ್ ಕಟ್ ಮಾಡಿ ಚಿತ್ರದ ಯಶಸ್ಸಿನ ಬಗ್ಗೆ ಸಂಭ್ರಮಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories