
Vedha: ಭರ್ಜರಿ ಓಪನಿಂಗ್ ಪಡೆದ 'ವೇದ' ಸಿನಿಮಾ: ರಗಡ್ ಲುಕ್'ನಲ್ಲಿ ಮಿಂಚಿದ ಶಿವಣ್ಣ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾ ಬಿಡುಗಡೆ ಆಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಸೆಂಚುರಿ ಸ್ಟಾರ್ ಶಿವಣ್ಣ ವೇದ ಸಿನಿಮಾ ಮೂಲಕ ಭರ್ಜರಿ ಎಂಟ್ರಿ ಕೊಟ್ಟಿದ್ದು, ಬೆಳ್ಳಿ ಪರದೆಯ ಮೇಲೆ ಸಖತ್ ಸೌಂಡ್ ಶುರುವಾಗಿದೆ. ವೇದ ಸಿನಿಮಾ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದು, ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ರಗಡ್ ಲುಕ್ನಲ್ಲಿ ಮಿಂಚಿದ್ದು, ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಇನ್ನು ಗಿಲ್ಲಕ್ ಶಿವಾ ಹಾಗೂ ಜುಂಜಪ್ಪ ಹಾಡು ಈಗಾಗಲೇ ಹಿಟ್ ಆಗಿವೆ. ಗೀತಾ ಬ್ಯಾನರ್‌ನಲ್ಲಿ ನಿರ್ಮಾಣವಾದ ಚೊಚ್ಚಲ ಸಿನಿಮಾ ವೇದ, ಎ. ಹರ್ಷ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿದೆ. ಈ ಚಿತ್ರ ಕರ್ನಾಟಕ ಮತ್ತು ಪಕ್ಕದ ಹಲವು ರಾಜ್ಯ ಮತ್ತು ವಿದೇಶಗಳಲ್ಲಿಯೂ ಬಿಡುಗಡೆ ಆಗಿದೆ.
Add Asianetnews Kannada as a Preferred Source

ಸಲ್ಮಾನ್ ಆಗಿದ್ರೆ ಖಾಸಗಿ ಜೆಟ್‌ನಲ್ಲಿ ಕರ್ಕೊಂಡು ಹೋಗ್ತಿದ್ರು; ಕತ್ರಿನ ...