Puneeth Rajkumar: ಅಪ್ಪು ಹೆಸರಲ್ಲಿ ಉಡಾವಣೆ ಆಗಲಿದೆ ಉಪಗ್ರಹ!
ಬೆಂಗಳೂರಿನ ಶಾಲೆಯ ವಿದ್ಯಾರ್ಥಿಗಳು ಮಹತ್ವದ ಕೆಲಸ ಮಾಡಿದ್ದು, ಉಪಗ್ರಹ ಒಂದನ್ನು ನಿರ್ಮಾಣ ಮಾಡಿದ್ದಾರೆ ಅದಕ್ಕೆ ಪುನೀತ್ ರಾಜ್ ಕುಮಾರ್ ಹೆಸರನ್ನು ಇಟ್ಟಿದ್ದು, ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಉಪಗ್ರಹ ನಿರ್ಮಾಣವಾಗಲಿದೆ.
ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಮೇಲೆ ಜನರು ಇಟ್ಟಿರುವ ಪ್ರೀತಿ ಅಷ್ಟಿಷ್ಟಲ್ಲ. ಅವರು ನಿಧನ ಹೊಂದಿದ ನಂತರದಲ್ಲಿ ಅಭಿಮಾನಿಗಳು ನಾನಾ ರೀತಿಯಲ್ಲಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆ ಹಾಗೂ ಪಾರ್ಕ್ಗಳಿಗೆ ಪುನೀತ್ ಹೆಸರನ್ನು ಇಡಲಾಗುತ್ತಿದೆ. ಈಗ ಅಚ್ಚರಿ ಎಂಬಂತೆ ಪುನೀತ್ ಹೆಸರಲ್ಲಿ ಉಪಗ್ರಹ (Satellite) ಉಡಾವಣೆ ಮಾಡಲಾಗುತ್ತಿದೆ. ಈ ಬಗ್ಗೆ ಸಚಿವ ಅಶ್ವತ್ಥ್ ನಾರಾಯಣ (Ashwath Narayan) ಹೇಳಿಕೆ ನೀಡಿದ್ದಾರೆ. ಸ್ವಾತಂತ್ರ್ಯ ಬಂದು 75ನೇ ವರ್ಷ ಆದ ಹಿನ್ನೆಲೆಯಲ್ಲಿ, ಐಟಿಸಿಎ 75 ಉಪಗ್ರಹಗಳನ್ನು ಉಡಾಯಿಸುತ್ತಿದೆ.
James 2022: ಮಹಾಶಿವರಾತ್ರಿಗೆ ರಿಲೀಸ್ ಆಯ್ತು ಪವರ್ ಪ್ಯಾಕ್ಡ್ 'ಟ್ರೇಡ್ಮಾರ್ಕ್' ಸಾಂಗ್
ಈ ಪೈಕಿ ಒಂದು ಉಪಗ್ರಹ ರಾಜ್ಯ ಸರ್ಕಾರ ಸಹಕಾರದಲ್ಲಿ ತಯಾರಾಗಲಿದೆ. ಸರ್ಕಾರಿ ಶಾಲೆಗಳ ಮಕ್ಕಳು ಇದನ್ನು ನಿರ್ಮಿಸುತ್ತಿದ್ದು, ರಾಜ್ಯ ಸರ್ಕಾರವೇ ಇದಕ್ಕೆ ಹಣ ನೀಡುತ್ತಿದೆ. ಈ ಯೋಜನೆಯ ಗ್ರೌಂಡ್ ಸ್ಟೇಷನ್ ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲೇ ಇರಲಿದೆ. ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಉಪಗ್ರಹ ಉಡಾವಣೆ ಮಾಡಲಾಗುತ್ತಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಉಪಗ್ರಹ ನಿರ್ಮಾಣವಾಗಲಿದೆ. 1.90 ಕೋಟಿ ವೆಚ್ಚದಲ್ಲಿ 1.5 ಕೆ.ಜಿ. ತೂಕದ ಉಪಗ್ರಹ ಸಿದ್ಧವಾಗುತ್ತಿದೆ' ಎಂದು ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ.
ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies