Kalatapasvi Rajesh: ರವಿ ವರ್ಮನ ಕುಂಚದ ಕಲೆ.. ನೆನಪಿನಲ್ಲಿ ಕಲಾತಪಸ್ವಿ ರಾಜೇಶ್

ಬೆಂಗಳೂರಿನ ಅಂಚೆಪೇಟೆಯಲ್ಲಿ ರಾಮನವಮಿಯಂದು ಜನಿಸಿದ ಕಾರಣಕ್ಕೆ ತಾಯಿ ಇಟ್ಟ ಹೆಸರು ಶ್ರೀರಾಮ್‌. 50-60ರ ದಶಕದಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿ, ಸ್ಫುರದ್ರೂಪಿ ನಾಯಕನೆನ್ನಿಸಿಕೊಂಡು, ಕನ್ನಡನಾಡಿನ ಜನಮನ ಗೆದ್ದು ಕಲಾತಪಸ್ವಿ ಎನ್ನಿಸಿಕೊಂಡವರು ನಟ ರಾಜೇಶ್‌.

First Published Feb 20, 2022, 12:28 PM IST | Last Updated Feb 20, 2022, 12:28 PM IST

ಬೆಂಗಳೂರಿನ ಅಂಚೆಪೇಟೆಯಲ್ಲಿ ರಾಮನವಮಿಯಂದು ಜನಿಸಿದ ಕಾರಣಕ್ಕೆ ತಾಯಿ ಇಟ್ಟ ಹೆಸರು ಶ್ರೀರಾಮ್‌. 50-60ರ ದಶಕದಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿ, ಸ್ಫುರದ್ರೂಪಿ ನಾಯಕನೆನ್ನಿಸಿಕೊಂಡು, ಕನ್ನಡನಾಡಿನ ಜನಮನ ಗೆದ್ದು ಕಲಾತಪಸ್ವಿ ಎನ್ನಿಸಿಕೊಂಡವರು ನಟ ರಾಜೇಶ್‌ (Rajesh). ಆರಂಭದಲ್ಲಿ ಸಣ್ಣ ಪುಟ್ಟಪಾತ್ರಗಳು, ನಂತರ ನಾಯಕನಾಗಿ, ಮತ್ತೆ ಪೋಷಕ ಪಾತ್ರಗಳಲ್ಲಿ (Small Rorles) ಕಾಣಿಸಿಕೊಳ್ಳುತ್ತಲೇ ಕನ್ನಡದಲ್ಲೇ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಕೀರ್ತಿ ಅವರದ್ದು. 

RIP Kalatapasvi Rajesh: 150 ಕ್ಕೂ ಹೆಚ್ಚು ಚಿತ್ರಗಳು, ಪೋಷಕ ಪಾತ್ರಗಳಲ್ಲಿ ಛಾಪು

ರಾಜೇಶ್‌ ಅವರ ಕುಟುಂಬ ಬಾಡಿಗೆಗೆ ಇದ್ದ ಮನೆಯ ಹುಡುಗ ನಾಟಕಗಳಲ್ಲಿ ನಟಿಸುತ್ತಿದ್ದರು. ಈ ಹುಡುಗನ ಮೂಲಕ ರಾಜೇಶ್‌ ಅವರೂ ರಂಗಭೂಮಿಯತ್ತ (Theatre) ಆಕರ್ಷಿತಗೊಂಡರು. ಮನೆ ಪಾಠಕ್ಕೆ ಹೋಗುವುದಾಗಿ ಸುಳ್ಳು ಹೇಳಿ ನಾಟಕ ಸಂಸ್ಥೆಗೆ ಹೋಗುತ್ತಿದ್ದರು. ಅಲ್ಲಿ ರಾಜೇಶ್‌ ಅವರ ಆಸಕ್ತಿ ಕಂಡು ಕಂಪನಿಯಿಂದ ಶ್ರೀರಾಮನ ಪಾತ್ರ ಕೊಟ್ಟರು. ಇದೇ ರಾಜೇಶ್‌ ಅವರು ಮೊದಲ ಬಾರಿಗೆ ಬಣ್ಣ ಹಚ್ಚಿದ್ದು. ನಂತರ ಸರ್ಕಾರಿ ಕೆಲಸಕ್ಕೆ (Government Job) ಸೇರಿ ಸಂಜೆ ವೇಳೆ ನಾಟಕಗಳಲ್ಲಿ ನಟಿಸಿದ್ದಲ್ಲದೆ ಸ್ವಂತ ನಾಟಕ ರಚಿಸಿದರು. ರಾಜೇಶ್ ಎಂಬ ಕಲಾ ತಪಸ್ಪಿ ಬಗ್ಗೆ ತಿಳಿಯಲು ಈ ವೀಡಿಯೋ ನೋಡಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment