Asianet Suvarna News Asianet Suvarna News

Sharan: ಹೇಗಿದೆ 'ಅವತಾರ ಪುರುಷ'ನ ಕಮಾಲ್? ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಹೇಳಿದ್ದಿಷ್ಟು!

ಶರಣ್‌ ಮತ್ತು ಸಿಂಪಲ್‌ ಸುನಿ ಕಾಂಬಿನೇಶನ್‌ನ 'ಅವತಾರ ಪುರುಷ' ಸಿನಿಮಾವು ಮೇ 6ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಹಾಸ್ಯದ ಜತೆಗೆ ಮಾಟ, ಮಂತ್ರದ ಕಥೆ ಇರುವ ಈ ಸಿನಿಮಾದ ಪ್ರೀಮಿಯರ್‌ ಶೋಗೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಆಗಮಿಸಿದ್ದರು.

ಶರಣ್‌ (Sharan) ಮತ್ತು ಸಿಂಪಲ್‌ ಸುನಿ (Simple Suni) ಕಾಂಬಿನೇಶನ್‌ನ 'ಅವತಾರ ಪುರುಷ' (Avatara Purusha) ಸಿನಿಮಾವು ಮೇ 6ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಹಾಸ್ಯದ ಜತೆಗೆ ಮಾಟ, ಮಂತ್ರದ ಕಥೆ ಇರುವ ಈ ಸಿನಿಮಾದ ಪ್ರೀಮಿಯರ್‌ ಶೋಗೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಆಗಮಿಸಿದ್ದರು. ಶರಣ್ ಸಿನಿಮಾವನ್ನು ಕೊಂಡಾಡಿದರು. ಈ ವೇಳೆ ಮಾತನಾಡಿದ ಲವ್‌ ಮಾಕ್‌ಟೇಲ್ ಹೀರೋ/ಡೈರೆಕ್ಟರ್ ಡಾರ್ಲಿಂಗ್ ಕೃಷ್ಣ, 'ನಾನು ಈ ಸಿನಿಮಾವನ್ನು ಬಹಳ ಎಂಜಾಯ್ ಮಾಡಿದೆ. ನಿರ್ದೇಶಕ ಸುನಿ ಈ ಬಾರಿ ಬೇರೆಯದೇ ಥರದ ಕಥೆ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಇದು ಇವರ ರೆಗ್ಯುಲರ್ ಸಿನಿಮಾ ಶೈಲಿಯಲ್ಲಿ ಇಲ್ಲ. ಬಹಳ ವಿಶೇಷವಾಗಿದೆ ಎಂದರು. 

ನನ್ನ ಸಿನಿಮಾಗಳು ಅಂದ್ರೆ ಮೊದ್ಲು ನಾಯಕಿಯರೇ ಸಿಕ್ತಿರಲಿಲ್ಲ, 'ಅವತಾರ ಪುರುಷ' ಟ್ರೇಲರ್‌ನಲ್ಲಿ ಶರಣ್

ನಾನಂತೂ ಪಾರ್ಟ್ 2ಗಾಗಿ ಕಾಯುತ್ತಿದ್ದೇನೆ. ಯಾಕೆಂದರೆ, ಕ್ಲೈಮ್ಯಾಕ್ಸ್‌ನಲ್ಲಿ ಅಂಥದ್ದೊಂದು ಟ್ವಿಸ್ಟ್ ಅನ್ನು ಅವರು ನೀಡಿದ್ದಾರೆ' ಎಂದು ಹೊಗಳಿದರು. ನಟಿ ಮಿಲನಾ ನಾಗರಾಜ್ ಕೂಡ ಚಿತ್ರದ ಬಗ್ಗೆ ಬಹಳ ಉತ್ತಮವಾದ ಪ್ರತಿಕ್ರಿಯೆ ನೀಡಿದರು. ಜೊತೆಗೆ ನಟ ನಿಖಿಲ್ ಕುಮಾರಸ್ವಾಮಿ, ನಿರ್ದೇಶಕ ಶಶಾಂಕ್ ಹಾಗೂ ನಟ ಅರುಣ್ ಸಾಗರ್ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಸಿಂಪಲ್ ಸುನಿ ನಿರ್ದೇಶನದ ಈ ಸಿನಿಮಾವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದಾರೆ. ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವಿಲಿಯಂ ಡೇವಿಡ್‌ ಛಾಯಾಗ್ರಹಣ ಮಾಡಿದ್ದಾರೆ. ಸಾಯಿಕುಮಾರ್, ಶ್ರೀನಗರ ಕಿಟ್ಟಿ, ಸಾಧು ಕೋಕಿಲ, ವಿಜಯ್ ಚೆಂಡೂರ್ ಮುಂತಾದವರು ನಟಿಸಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies