Asianet Suvarna News Asianet Suvarna News

Shiva Rajkumar: ಶಿವಣ್ಣದು ಅರೇಂಜ್ ಮ್ಯಾರೇಜಾ ಅಥವಾ ಲವ್ ಮ್ಯಾರೇಜಾ?

ಶಿವರಾಜ್‌ಕುಮಾರ್ ಗೀತಾ ಶಿವರಾಜ್ ಕುಮಾರ್‌ರನ್ನ ಬಾಳ ಸಂಗಾತಿಯಾಗಿ ಕೈ ಹಿಡಿದು 36 ವರ್ಷ ಆಗಿದೆ. ಇಷ್ಟು ವರ್ಷದ ಬಳಿಕ ಶಿವರಾಜ್ ಕುಮಾರ್ ತನ್ನ ಮದುವೆ ಹನಿಮೂನ್ ಸೀಕ್ರೇಟ್ ಅನ್ನ ಬಿಚ್ಚಿಟ್ಟಿದ್ದಾರೆ.

ಡಾ. ಶಿವರಾಜ್‌ಕುಮಾರ್‌ ಅವರದ್ದು ಸುಂದರ ಸಂಸಾರ. ಎಸ್.ಬಂಗಾರಪ್ಪನವರ ಪುತ್ರಿ ಗೀತಾರನ್ನ ಕೈ ಹಿಡಿದಿರೋ ಸೆಂಚುರಿ ಸ್ಟಾರ್‌ಗೆ ಕೀರ್ತಿಗಿಬ್ಬರು ಹೆಣ್ಣು ಮಕ್ಕಳು. ಒಬ್ರು, ಮೊದಲನೇ ಪುತ್ರಿ ನಿರುಪಮಾ. ಎರಡನೇ ಮಗಳು ನಿವೇದಿತಾ. ವರನಟನ ವರಪುತ್ರ ಶಿವರಾಜ್‌ಕುಮಾರ್ ಗೀತಾ ಶಿವರಾಜ್‌ಕುಮಾರ್‌ರನ್ನ ಬಾಳ ಸಂಗಾತಿಯಾಗಿ ಕೈ ಹಿಡಿದು 36 ವರ್ಷ ಆಗಿದೆ. ಇಷ್ಟು ವರ್ಷದ ಬಳಿಕ ಶಿವರಾಜ್ ಕುಮಾರ್ ತನ್ನ ಮದುವೆ ಹನಿಮೂನ್ ಸೀಕ್ರೇಟ್ ಅನ್ನ ಬಿಚ್ಚಿಟ್ಟಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರೆಟಿಗಳ ಮಕ್ಕಳು ಅಂದ್ರೆ ಲವ್ ಮಾಡಿ ಮದುವೆ ಆಗ್ತಾರೆ ಅನ್ನೋ ನಂಬಿಕೆ ಇದೆ. ಅದೇ ತರ ಅಣ್ಣಾವ್ರ ಕುಟುಂಬದಲ್ಲೂ ಪ್ರೀತಿಸಿ ಮದುವೆ ಆದ ಜೋಡಿಗಳಿವೆ. ಹೀಗಾಗಿ ಶಿವರಾಜ್‌ಕುಮಾರ್‌ ಅವರದ್ದು ಲವ್ ಮ್ಯಾರೇಜಾ ಅಥವ ಅರೇಂಜ್ ಮ್ಯಾರೇಜಾ ಅಂತ ಅವರ ಅಭಿಮಾನಿಗಳಲ್ಲಿ ಕುತೂಹಲ ಇದೆ. 

ಇದೀಗ ನಟ ನಾಗಭೂಷಣ್ ಕೇಳಿದ ಪ್ರಶ್ನೆಗೆ ಸೆಂಚುರಿ ಸ್ಟಾರ್ ಫಸ್ಟ್ ಟೈಂ ಉತ್ತರ ಕೊಟ್ಟಿದ್ದಾರೆ. ಅಷ್ಟೆ ಅಲ್ಲ ತಮ್ಮ ಮದುವೆ ಬಳಿಕೆ ಹನಿಮೂನ್‌ಗೆ ಎಲ್ಲಿಗೆ ಹೋಗಿದ್ರು ಅನ್ನೋದನ್ನೂ ಹ್ಯಾಟ್ರಿಕ್ ಹೀರೋ ಬಾಯ್ಬಿಟ್ಟಿದ್ದಾರೆ. ಶಿವರಾಜ್‌ಕುಮಾರ್ ಗೀತಾರನ್ನ ಮದುವೆ ಆಗಿ 36 ವರ್ಷ ಆಯ್ತು. ಸುಖ ಸಂಸಾರಕ್ಕೆ 12 ಸೂತ್ರಗಳು ಅನ್ನೋ ಮಾತಿದೆ. ಆದ್ರೆ ಶಿವರಾಜ್ ಕುಮಾರ್ ತನ್ನ ಸುಂದರ ಸಂಸಾರಕ್ಕೆ ಒಂದೇ ಸೂತ್ರ ಕಂಡುಕೊಂಡಿದ್ದಾರೆ. ಅದೇನು ಅಂತ ಅವರ ಮಾತುಗಳಿಂದಲೇ ಕೇಳಿ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ತನ್ನ ಇಷ್ಟೆಲ್ಲಾ ಫ್ಯಾಮಿಲಿ ಸೀಕ್ರೇಟ್‌ನ ಬಿಟ್ಟುಕೊಟ್ಟಿದ್ದು ಎಲ್ಲಿ ಗೊತ್ತಾ.? ಶಿವರಾಜ್ ಕುಮಾರ್ ಎರಡನೇ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್, ನಿರ್ಮಾಪಕಿ ಆಗಿದ್ದು, ಹನಿಮೂನ್ ಅನ್ನೋ ವೆಬ್ ಸೀರೀಸ್ ನಿರ್ಮಾಣ ಮಾಡಿದ್ದಾರೆ. 

ನನಗೆ 60 ವರ್ಷ ಯಂಗ್‌ಸ್ಟರ್ಸ್‌ಗೆ ಏನ್ ಸಲಹೆ ಕೊಡ್ಲಿ ಅವರೇ ನನಗೆ ಸಲಹೆ ಕೊಡಬೇಕು: ಶಿವಣ್ಣ

ಈ ವೆಬ್ ಸೀರಿಸ್‌ನ ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೆ ಬಂದಿದ್ದ ಸೆಂಚುರಿ ಸ್ಟಾರ್ ತನ್ನ ಕುಟುಂಬದ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಶಿವರಾಜ್‌ಕುಮಾರ್ ಎರಡನೇ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್, ಈ ಹಿಂದೆ ಸೀರಿಯಲ್ ಒಂದನ್ನ ನಿರ್ಮಾಣ ಮಾಡಿದ್ರು. ಈಗ ಶ್ರೀಮುತ್ತು ಕ್ರಿಯೇಷನ್ಸ್ ಅನ್ನೋ ಪ್ರೊಡಕ್ಷನ್ ಹೌಸ್ ಅನ್ನ ಹುಟ್ಟುಹಾಕಿರೋ ನಿವೇದಿತಾ ಕನ್ನಡದಲ್ಲಿ ವೆಬ್ ಸೀರಿಸ್‌ಗಳ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದಾರೆ. ಶಿವಣ್ಣನ ಪುತ್ರಿ ನಿರ್ಮಾಪಕಿ ಆಗೋಕೆ ಕಾರಣ ಕನ್ನಡದ ಟ್ಯಾಲೆಂಟ್‌ಗಳನ್ನ ಬೆಳೆಸೋ ಉದ್ದೇಶವಂತೆ. ಎನಿ ವೇ ರಾಜ್ ಕುಟುಂಬದ ಕೀರ್ತಿ ಕಳಸ ಪುನೀತ್ ರಾಜ್ಕುಮಾರ್ ಕನ್ನದಲ್ಲಿ ಒಟಿಟಿ ಜಮಾನಕ್ಕೆ ಹೊಸ ಶಕ್ತಿ ತುಂಬಿದ್ರು. ಇದೇ ಹಾದಿಯಲ್ಲಿ ಈಗ ಶಿವರಾಜ್ ಕುಮಾರ್ ಎರಡನೇ ಪುತ್ರಿ ನಿವೇದಿತಾ ಸಾಗುತ್ತಿದ್ದಾರೆ.  

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories