Asianet Suvarna News Asianet Suvarna News

Rocking Star Yash: 'ಕೆಜಿಎಫ್ 2' ಸಕ್ಸಸ್ ನಂತರ ಮೈಸೂರಿಗೆ ಎಂಟ್ರಿ‌ ಕೊಟ್ಟ ರಾಕಿಭಾಯ್!

'ಕೆಜಿಎಫ್ 2' ಸಿನಿಮಾ ಸಕ್ಸಸ್ ನಂತ್ರ ರಾಕಿಂಗ್ ಸ್ಟಾರ್ ಯಶ್ ಒಂದಿಷ್ಟು ದಿನ ವೆಕೆಷನ್ ಅಂತ ಬ್ಯುಸಿ ಆಗಿದ್ರು. ರಜಾದ ಮಜಾ ದಿನಗಳನ್ನ ಮುಗಿಸಿ ಬಂದ ನಂತರ ಮೊದಲಿಗೆ ಯಶ್ ಹಾಗೂ ರಾಧಿಕಾ ಮೈಸೂರಿನಲ್ಲಿ ಕಾಣಿಸಿಕೊಂಡಿದ್ದಾರೆ. 

'ಕೆಜಿಎಫ್ 2' (KGF Chapter 2) ಸಿನಿಮಾ ಸಕ್ಸಸ್ ನಂತ್ರ ರಾಕಿಂಗ್ ಸ್ಟಾರ್ ಯಶ್ (Yash) ಒಂದಿಷ್ಟು ದಿನ ವೆಕೆಷನ್ ಅಂತ ಬ್ಯುಸಿ ಆಗಿದ್ರು. ರಜಾದ ಮಜಾ ದಿನಗಳನ್ನ ಮುಗಿಸಿ ಬಂದ ನಂತರ ಮೊದಲಿಗೆ ಯಶ್ ಹಾಗೂ ರಾಧಿಕಾ ಪಂಡಿತ್ (Radhika Pandit) ಮೈಸೂರಿನಲ್ಲಿ (Mysuru) ಕಾಣಿಸಿಕೊಂಡಿದ್ದಾರೆ. ಹೌದು! ಗೆಳೆಯ ಹಾಗೂ ಯಶ್ ಮ್ಯಾನೇಜರ್ ಆಗಿರೋ ಚೇತನ್ ಮದುವೆಯಲ್ಲಿ (Wedding) ಯಶ್ ಭಾಗಿಯಾಗಿದ್ರು. ಪಟಾಕಿ ಸಿಡಿಸಿ ಅವರನ್ನು ಸ್ವಾಗತಿಸಲಾಯಿತು. 

Yash: ಅಪ್ಪ ಸಿನಿಮಾದಲ್ಲಿ ರಾಕಿಂಗ್, ಮಕ್ಕಳು ಮನೆಯಲ್ಲಿ ರಾಕಿಂಗ್!

ಯಶ್ ರಾಧಿಕಾ ಇಬ್ಬರು ಮದುವೆ ಹಾಲ್‌ಗೆ ಎಂಟ್ರಿ ಆಗುತ್ತಿದ್ದಂತೆ ಸೆಲ್ಫಿಗಾಗಿ (Selfie) ಅಭಿಮಾನಿಗಳು (Fans) ಹಾಗೂ ಮದುವೆಯಲ್ಲಿದ್ದ ಜನರು ಮುಗಿಬಿದ್ದರು. ಇನ್ನು ಯಶ್ ಬಂದ ನಂತರ ಅಭಿಷೇಕ್ ಅಂಬರೀಶ್ (Abhishek Ambarish) ಕೂಡ ಮದುವೆಗೆ ಆಗಮಿಸಿದ್ರು. ಅಭಿಯನ್ನ ಪ್ರೀತಿಯಿಂದ ಗಲ್ಲ ಮುಟ್ಟಿ ಮಾತನಾಡಿಸಿದ್ರು ಯಶ್. ನಂತರ ಕೆಲ ಅಭಿಮಾನಿಗಳ ಜೊತೆ ಫೋಟೋಗೆ ಫೋಸ್ ಕೊಟ್ರು. ಕೆಜಿಎಫ್2 ಅದ್ದೂರಿ ಸಕ್ಸಸ್ ನಂತ್ರ ಮೈಸೂರಿಗೆ ಯಶ್ ಭೇಟಿ ಕೊಟ್ಟಿದ್ದು ಮೈಸೂರಿನ ಯಶ್ ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories