Asianet Suvarna News Asianet Suvarna News

Kantara: ಹಾಲಿವುಡ್‌ಎಂಟ್ರಿ ಕೊಡಲಿದೆ ಕನ್ನಡದ ಹೆಮ್ಮೆಯ 'ಕಾಂತಾರ'.?

ಕಾಡು ಬೆಟ್ಟದ ಶಿವನ ಹವಾ ಹಾಲಿವುಡ್'ಗೆ ಹಬ್ಬುತ್ತಿದೆ. ಯಾಕಂದ್ರೆ ಕಾಂತಾರ ಸಿನಿಮಾವನ್ನು ಇಂಗ್ಲೀಷ್'ನಲ್ಲಿ ಡಬ್ ಮಾಡಿ ಬಿಡುಗಡೆ ಮಾಡೋದಕ್ಕೆ ಕಸರತ್ತು ನಡೆದಿದೆ.
 

ಕಾಂತಾರ ಭಾಷೆಯ ಗಡಿ ಮೀರಿ ಪ್ರೇಕ್ಷಕರ ಮನಗೆದ್ದಿದೆ. ಮೊದಲಿಗೆ ಇಂಗ್ಲೀಷ್ ಸಬ್ ಟೈಟಲ್ ಜೊತೆಗೆ ಕನ್ನಡದಲ್ಲಿ ಮಾತ್ರ ಬಂದ್ದಿದ್ದ 'ಕಾಂತಾರ' ಸಿನಿಮಾ ಕೊನೆಗೆ ಪ್ರೇಕ್ಷಕರ ದೊಡ್ಡ ಬೇಡಿಕೆಗೆ ಮಣಿದು ತೆಲುಗು, ತಮಿಳು, ಮಲೆಯಾಳಂಮ ಹಿಂದಿಗೂ ಡಬ್ ಆಗಿ ಬಂದು ಸೂಪರ್ ಹಿಟ್ ಆಯ್ತು. ಅಷ್ಟೆ ಅಲ್ಲ ತುಳು ಭಾಷೆಯಲ್ಲೂ ಈ ಸಿನಿಮಾ ಬಿಡುಗಡೆ ಆಗಿದೆ. ಇದೀಗ ಕಾಂತಾರ ನಿರ್ಮಾಣ ಸಂಸ್ಥೆ ಹೊಂಬಾಳೆ ಪ್ರೊಡಕ್ಷನ್ ಹೌಸ್ ಇಂಗ್ಲೀಷ್'ನಲ್ಲೂ ಡಬ್ ಮಾಡಿ ಹಾಲಿವುಡ್'ನಲ್ಲೂ ಬಿಡುಗಡೆ ಮಾಡೋದಕ್ಕೆ ಕಸರತ್ತು ಮಾಡುತ್ತಿದೆ. ಒಟಿಟಿಯಲ್ಲಿ ಕಾಂತಾರ ಬಿಡುಗಡೆ ಆಗಿದ್ರು ಕೂಡ 'ಕಾಂತಾರ' ಸದ್ದು ಈಗ ವಿಶ್ವದಾದ್ಯಂತ ಮಾರ್ದನಿಸೋದು ಗ್ಯಾರೆಂಟಿ. 


ಕುಂಕುಮ ಇಟ್ಟು ಹಿಂದೂ ಸಂಪ್ರದಾಯದಂತೆ ಕಳಶ ಪೂಜೆ ಮಾಡಿದ ಆಮೀರ್ ಖಾನ್; ಫೋಟೋ ವೈರಲ್