Asianet Suvarna News Asianet Suvarna News

'UI' ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ ಉಪೇಂದ್ರ.!

 ಏಳು ವರ್ಷಗಳ ನಂತರ ಮತ್ತೆ ನಮ್ಮ ಸೂಪರ್ ಡೈರೆಕ್ಟರ್ Upendra ನಿರ್ದೇಶನಕ್ಕೆ ಮತ್ತೆ ಓಂಕಾರ ಹಾಕಿದ್ದಾರೆ. ಬೆಂಗಳೂರಿನ ಬಂಡೆಮಹಾಂಕಾಳಿ ದೇವಸ್ಥಾನದಲ್ಲಿ ಮುಂಚಿನ ಚಿತ್ರ UI ಮುಹೂರ್ತ ನೆರವೇರಿತು.

First Published Jun 4, 2022, 4:56 PM IST | Last Updated Jun 4, 2022, 5:12 PM IST

 ಏಳು ವರ್ಷಗಳ ನಂತರ ಮತ್ತೆ ನಮ್ಮ ಸೂಪರ್ ಡೈರೆಕ್ಟರ್ Upendra ನಿರ್ದೇಶನಕ್ಕೆ ಮತ್ತೆ ಓಂಕಾರ ಹಾಕಿದ್ದಾರೆ. ಬೆಂಗಳೂರಿನ ಬಂಡೆಮಹಾಂಕಾಳಿ ದೇವಸ್ಥಾನದಲ್ಲಿ ಮುಂಚಿನ ಚಿತ್ರ UI ಮುಹೂರ್ತ ನೆರವೇರಿತು.

ಈ ಸಮಾರಂಭಕ್ಕೆ ನಟ ಉಪೇಂದ್ರ, ನಿರ್ಮಾಪಕರಾದ ಜಿ.ಮನೋಹರನ್ ಮತ್ತು ಕೆ.ಪಿ. ಶ್ರೀಕಾಂತ್, ಲಹರಿ ವೇಲು ಮತ್ತು ಸಹ ನಿರ್ಮಾಪಕರಾದ ನವೀನ್ ಮನೋಹರನ್ ಸೇರಿದಂತೆ ಸಿನಿಮಾದ ತಂಡದ ಬಹುತೇಕರು ತಮ್ಮ ಸಿನಿಮಾದ ಟೈಟಲ್ ಅನ್ನು ಹಣೆ ಮೇಲೆ ಹಾಕಿಕೊಂಡು ಆಗಮಿಸಿದ್ದು ನೋಡುಗರಲ್ಲಿ ಇನ್ನೂ ಕುತೂಹಲ ಹೆಚ್ಚಿಸಿತು.

ಉಪೇಂದ್ರ ಯುಐ ಚಿತ್ರಕ್ಕೆ ಹೀರೋಯಿನ್ ಯಾರು..? ಲಿಸ್ಟಲ್ಲಿದೆ ಅಚ್ಚರಿ ಹೆಸರು...!

ಸದ್ಯ ಟೈಟಲ್ ಪೋಸ್ಟರ್ ನಿಂದಲೆ ಕುತೂಹಲ ಹೆಚ್ಚಿಸಿರೋ ಉಪ್ಪಿ ಇದೀಗ ಮುಹೂರ್ತವಷ್ಟೆ ಮುಗಿಸಿದ್ದಾರೆ. ಮುಂದಿನದ್ದೇನನ್ನೂ ಬಿಟ್ಟುಕೊಟ್ಟಿಲ್ಲ. ಮುಂದಿನದ್ದು ನೀವೇ ಗೆಸ್ ಮಾಡಿ ಬರೆದುಕೊಳ್ಳೀ ಎಂದು ಅಲ್ಲೂ ಒಂದು ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದ್ದಾರೆ ಉಪ್ಪಿ. ಅದಕ್ಕೆ ಅಲ್ವೇ ಹೇಳೋದು ಉಪ್ಪಿ ಅಂದ್ರೇನೆ ಹಾಗೆ ತುಂಬಾ ಡಿಫರೆಂಟು ಬುದ್ದಿವಂತರಿಗೆ ಮಾತ್ರ ಅರ್ಥವಾಗೋದು ಅಂತ.

Video Top Stories