Asianet Suvarna News Asianet Suvarna News

Kiccha Sudeep: ಕಿಚ್ಚನಿಗಾಗಿ 14 ದಿನ, 600 ಕಿಲೋಮೀಟರ್‌ ನಡೆದು ಬಂದ ಫ್ಯಾನ್ಸ್!

ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗಾಗಿ ಏನು ಬೇಕಾದರೂ ಮಾಡುತ್ತಾರೆ. ತಮ್ಮ ನೆಚ್ಚಿನ ನಟನನ್ನು ಮಾತನಾಡಿಸಲು, ಭೇಟಿ ಆಗಲು ಎಂತಹ ರಿಸ್ಕ್‌ ಆದ್ರೂ ತೆಗೆದುಕೊಳ್ಳುತ್ತಾರೆ. 

ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗಾಗಿ ಏನು ಬೇಕಾದರೂ ಮಾಡುತ್ತಾರೆ. ತಮ್ಮ ನೆಚ್ಚಿನ ನಟನನ್ನು ಮಾತನಾಡಿಸಲು, ಭೇಟಿ ಆಗಲು ಎಂತಹ ರಿಸ್ಕ್‌ ಆದ್ರೂ ತೆಗೆದುಕೊಳ್ಳುತ್ತಾರೆ. ಇದೀಗ ನಟ ಕಿಚ್ಚ ಸುದೀಪ್‌ರನ್ನ (Kiccha Sudeep) ಭೇಟಿ ಆಗಲೇ ಬೇಕು ಅಂತ ಕಲಬುರಗಿಯ ಅಭಿಮಾನಿಗಳು (Fans) ದೊಡ್ಡ ಸಾಹಸ ಮಾಡಿದ್ದಾರೆ. ದೇವರ ದರ್ಶನಕ್ಕೆ ಸಾವಿರಾರು ಕಿಲೋಮೀಟರ್ ಪಾದಯಾತ್ರೆ ಮಾಡ್ತಾರಲ್ಲಾ, ಅದೇ ರೀತಿ ಕಲ್ಬುರ್ಗಿಯ ಕಿಚ್ಚನ ಅಭಿಮಾನಿಗಳು 14 ದಿನಗಳ ಕಾಲ ಕಾಲ್ನಡಿಗೆಯಲ್ಲೇ ಬಂದು, ಸುದೀಪ್‌ರನ್ನ ಭೇಟಿ ಮಾಡಿದ್ದಾರೆ. 

ಗೆಳೆಯನ ಬ್ಲಾಕ್ ಬಸ್ಟರ್ ಮೂವಿ ಬರ್ತಿದೆ ಸಿದ್ಧರಾಗಿ ಎಂದ ಸಿಡಿಲ ಮರಿ ಸೆಹ್ವಾಗ್..!

ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಅವರಾದಿ ಗ್ರಾಮದ ನಿವಾಸಿಗಳಾದ ರೇಣುಕಾ, ಗೋಪಾಲ, ಮರೇಮ್ಮ ನಟ ಕಿಚ್ಚ ಸುದೀಪ್‌ ಅವರ ಅಪ್ಪಟ ಅಭಿಮಾನಿಗಳು. ಹೀಗಾಗಿ ತಮ್ಮ ನೆಚ್ಚಿನ ನಟನನ್ನು ನೋಡಲೇಬೇಕೆಂಬ ಆಸೆಯಿಂದ ಊರಿನಿಂದ ಕಾಲ್ನಡಿಗೆಯಲ್ಲೇ ಹೊರಟ ಈ ಅಭಿಮಾನಿಗಳು ಸುಮಾರು 600 ಕಿಲೋಮೀಟರ್ ನಡೆದಿದ್ದಾರೆ. ಜೆಪಿ ನಗರದ ನಿವಾಸಕ್ಕೆ ಬಂದಿದ್ದ ತನ್ನ ಅಭಿಮಾನಿಗಳನ್ನ ಕಿಚ್ಚ ಸುದೀಪ್ ಪ್ರೀತಿಯಿಂದ ಅಪ್ಪಿಕೊಂಡು ಸತ್ಕಾರ ಮಾಡಿ ಕಳಿಸಿದ್ದಾರೆ. ಅಷ್ಟೆ ಅಲ್ಲ ದೂರದೂರಿಂದ ಬಂದಿದ್ದ ಅಭಿಮಾನಿಗಳನ್ನ ಕೂರಿಸಿ ತಾನು ನಿಂತುಕೊಂಡೇ ಮಾತನಾಡಿದ್ದಾರೆ ಸುದೀಪ್. ಇದೀಗ ಈ ವೀಡಿಯೋ ಎಲ್ಲಡೆ ವೈರಲ್ (Viral) ಆಗುತ್ತಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories