ಕನ್ನಡಕ್ಕೆ ಎಂಟ್ರಿ ಕೊಟ್ಟ ಕಚ್ಚಾ ಬಾದಾಮ್ ಸೆನ್ಸೇಷನ್ ಸಿಂಗರ್..!

ಗಾಯಕ ಭುವನ್ ಬದ್ಯಕರ್ (Bhuvan Badyakar) ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಗಜಾನನ ಅಂಡ್ ಗ್ಯಾಂಗ್ (Gajanana And Gang)  ಚಿತ್ರತಂಡ ಅವ್ರನ್ನ ತಲಾಷ್ ಮಾಡಿ ತಮ್ಮ ಸಿನಿಮಾದ ಪ್ರಚಾರಕ್ಕೆ (Promotion) ಹಾಡನ್ನ ಹಾಡಿಸಿದ್ದಾರೆ. ಕಚ್ಚಾ ಬಾದಾಮ್ ಮಾದರಿಯಲ್ಲೇ ನಿರ್ದೇಶಕರು ಹಾಡನ್ನ ಬರೆದು ಭುವನ್ ಅವ್ರಿಂದ ಹಾಡಿಸಲಾಗಿದೆ.

First Published Jun 2, 2022, 11:17 AM IST | Last Updated Jun 2, 2022, 11:41 AM IST

ಕಚ್ಚಾ ಬಾದಾಮ್ ಖ್ಯಾತಿಯ  ಗಾಯಕ ಭುವನ್ ಬದ್ಯಕರ್ (Bhuvan Badyakar) ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಗಜಾನನ ಅಂಡ್ ಗ್ಯಾಂಗ್ (Gajanana And Gang)  ಚಿತ್ರತಂಡ ಅವ್ರನ್ನ ತಲಾಷ್ ಮಾಡಿ ತಮ್ಮ ಸಿನಿಮಾದ ಪ್ರಚಾರಕ್ಕೆ (Promotion) ಹಾಡನ್ನ ಹಾಡಿಸಿದ್ದಾರೆ. ಕಚ್ಚಾ ಬಾದಾಮ್ ಮಾದರಿಯಲ್ಲೇ ನಿರ್ದೇಶಕರು ಹಾಡನ್ನ ಬರೆದು ಭುವನ್ ಅವ್ರಿಂದ ಹಾಡಿಸಲಾಗಿದೆ.

ಭುವನ್ ಬದ್ಯಕರ್ ಅವ್ರಿಂದ ಕನ್ನಡ ಹಾಡನ್ನ ಹಾಡಿಸೋದಕ್ಕೆ ಸಾಕಷ್ಟು ಕಷ್ಟ ಪಟ್ಟಿದೆ ಗಜಾನನ ಅಂಡ್ ಗ್ಯಾಂಗ್ ತಂಡ. ನಿರ್ಮಾಪಕ ನಾಗೇಶ್ ಕುಮಾರ್ ತಮ್ಮ ಸಿನಿಮಾ ಪ್ರಚಾರಕ್ಕೆ ಇಂಥದೊಂದು ಪ್ಲಾನ್ ಮಾಡಿದ್ದು, ಅವ್ರೇ ಕಷ್ಟ ಪಟ್ಟು ಭುವನ್ ಅವ್ರನ್ನ ಹುಡುಕಿದ್ದಾರೆ...ಬಂಗಾಳಿ ಭಾಷೆ ಬಿಟ್ಟು ಮತ್ಯಾವುದೇ ಭಾಷೆಯ ಬಗ್ಗೆ ಜ್ಞಾನ ಇಲ್ಲದ ಭುವನ್ ಮೊದಲಿಗೆ ನನಗೆ ಸಾಧ್ಯವಿಲ್ಲ ..ಹಾಡೋಲ್ಲ ಎಂದಿದ್ರಂತೆ..ಆದ್ರೆ ಛಲ ಬಿಡದೇ ನಾಗೇಶ್ ಕುಮಾರ್ ಸತತ ಪ್ರಯತ್ನದ ಮೂಲಕ ತಮಗೆ ಬೇಕಾದಂತೆ ಅವ್ರ ಬಳಿ ಹಾಡಿಸಿದ್ದಾರೆ.

ಬ್ಲಡ್ ಶೇಡ್‌ನಲ್ಲಿ ಯಂಗ್ ರೆಬಲ್, ಮೇಕಪ್‌ಗಾಗಿ 4 ಗಂಟೆ ಕೂತಲ್ಲೇ ಕೂತಿದ್ರು ಅಭಿಷೇಕ್..!

ಕಚ್ಚಾ ಬಾದಾಮ್ ರೀತಿಯೇ ನೋಡಿ ನೋಡಿ ಹಾಡನ್ನ ಹಾಡಿದ್ದಾರೆ ಭುವನ್ .ಸದ್ಯ ಈ ಹಾಡು ಸಖತ್ ವೈರಲ್ ಆಗ್ತಿದ್ದು ಸಿನಿಮಾತಂಡದ ವಿಭಿನ್ನ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..ಗಜಾನನ ಅಂಡ್ ಗ್ಯಾಂಗ್ ಸಿನಿಮಾದಲ್ಲಿನಟ ಶ್ರೀಮಹದೇವ್ ನಾಯಕರಾಗಿ ಅಬಿನಯ ಮಾಡಿದ್ದು ಅದಿತಿ ಪ್ರಭುದೇವ ಜೋಡಿಯಾಗಿದ್ದಾರೆ..ಅಭಿಷೇಕ್ ಶೆಟ್ಟಿ ಸಿನಿಮಾವನ್ನ ನಿರ್ದೇಶಿಸಿದ್ದು ಪ್ರದ್ದ್ಯೋತ್ತನ್ಸಂಗೀತ ನಿರ್ದೇಶಿಸಿದ್ದಾರೆ.