ಅಬ್ಬಾಬ್ಬ..! ಜ್ಯೂನಿಯರ್ NTR ಸಿನಿಮಾಗೆ ಇಷ್ಟು ಬೆಲೆಯಾ ಕ್ಯಾಮೆರಾ ಬಳಕೆ ?
ಜ್ಯೂನಿಯರ್ NTR ದೇವರ ಸಿನಿಮಾದಲ್ಲಿ ಬಳಸಲಾಗುತ್ತಿರುವ ಕ್ಯಾಮೆರಾಗೆ 80 ಕೋಟಿ ರೂಪಾಯಿಯಂತೆ.
ದೇವರ’ ಸಿನಿಮಾದಲ್ಲಿ ಬಳಸ್ತಿರೋ ಕ್ಯಾಮೆರಾಗೆ ಮೀಸಲಿಟ್ಟಿರೋ ಬಜೆಟ್ ಎಷ್ಟು ಗೊತ್ತಾ? ಬರೋಬ್ಬರಿ 80ಕೋಟಿ ರೂಪಾಯಿ. ಹೌದು, ಕೇವಲ ಕ್ಯಾಮೆರಾಗಾಗಿಯೇ ದೇವರ ಸಿನಿಮಾದ ಪ್ರೊಡ್ಯೂಸರ್ 80 ಕೋಟಿ ರೂಪಾಯಿ ಖರ್ಚು ಮಾಡ್ತಿದ್ದಾರಂತೆ. ನಿರ್ದೇಶಕ ಕೊರಟಾಲ ಶಿವ ಈ ಚಿತ್ರವನ್ನು ಏಪ್ರಿಲ್ 5 ರಂದು ಬಿಡುಗಡೆ ಮಾಡಲು ತೀರ್ಮಾನಿಸಿದ್ದಾರೆ . ಈ ಚಿತ್ರದ ಚಿತ್ರೀಕರಣ ಇದೇ ವರ್ಷ ನವೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ. ದೇವರ ಚಿತ್ರದ ತಾರಾಗಣವೂ ತುಂಬಾ ದೊಡ್ಡದಾಗಿದೆ. ಈಗಾಗಲೇ ಈ ಚಿತ್ರದಲ್ಲಿ ಜಾಹ್ನವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದು, ಬಾಲಿವುಡ್ ಹೀರೋ ಸೈಫ್ ಅಲಿಖಾನ್ ಖಳನಾಯಕನಾಗಿ ನಟಿಸಿದ್ದಾರೆ. ಇವತ್ತಿನ ಕಾಲಘಟ್ಟದಲ್ಲಿ ಸಿನಿಮಾದ ಸ್ಕೇಲ್ ಕೇವಲ ನಟ-ನಟಿಯರಿಂದ ದೊಡ್ಡದಾಗೋದಿಲ್ಲ. ಟೆಕ್ನಿಕಲಿ ಕೂಡ ಸಿನಿಮಾ ಸಖತ್ ಸೌಂಡ್ ಮಾಡ್ಬೇಕು. ನಿಮ್ಗೆ ಮೊದ್ಲೇ ಹೇಳಿದ ಹಾಗೆ, ಕ್ಯಾಮರಾಗಾಗಿ 80 ಕೋಟಿ ಮೀಸಲಿಡಲಾಗಿದೆ.
ಇದನ್ನೂ ವೀಕ್ಷಿಸಿ: ಕಾಂತಾರ ಹೀರೋಗೆ ಅಮೇರಿಕಾದಲ್ಲಿ ಸಿಕ್ತು ದೊಡ್ಡ ಗರಿ: ರಿಷಬ್ ಸರಳತೆಗೆ ಮನಸೋತ ಕನ್ನಡಿಗರು!