Asianet Suvarna News Asianet Suvarna News

ಕಾಂತಾರ ಹೀರೋಗೆ ಅಮೇರಿಕಾದಲ್ಲಿ ಸಿಕ್ತು ದೊಡ್ಡ ಗರಿ: ರಿಷಬ್ ಸರಳತೆಗೆ ಮನಸೋತ ಕನ್ನಡಿಗರು!

ನಾನು ಪಡೆದ ದೊಡ್ಡ ಪ್ರಶಸ್ತಿ ಕನ್ನಡಿಗರು ಎಂದ ರಿಷಬ್!
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಈಗ 'ವಿಶ್ವ ಶ್ರೇಷ್ಠ ಕನ್ನಡಿಗ'
ಅಮೇರಿಕಾ ಕನ್ನಡಿಗರ ಹೃದಯ ಗೆದ್ದ ಕಾಂತಾರದ ಶಿವ!
 

First Published Jun 29, 2023, 12:40 PM IST | Last Updated Jun 29, 2023, 12:40 PM IST

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕೀರ್ತಿ ಪತಾಕೆ ವಿಶ್ವದಾದ್ಯಂತ ಹಬ್ಬುತ್ತಿದೆ. ಕಾಂತಾರ ಸಿನಿಮಾ ಮಾಡಿ ವಿಶ್ವದ ಜನ ಮನ ಗೆದ್ದಿರೋ ಕುಂದಾಪುರದ ಈ ಹೈದ ಈಗ ವಿಶ್ವ ಶ್ರೇಷ್ಠ ಕನ್ನಡಿಗ ಅನ್ನೋ ಕೀರ್ತಿಯ ಕಿರೀಟವನ್ನ ಹೊತ್ತಿದ್ದಾರೆ. ರಿಷಬ್ ಶೆಟ್ಟಿಗೆ 2023ರ ವಿಶ್ವ ಶ್ರೇಷ್ಠ ಕನ್ನಡಿಗ ಅನ್ನೊ ಪ್ರಶಸ್ತಿ ಸಿಕ್ಕಿದೆ. ಅಷ್ಟಕ್ಕು ಶೆಟ್ರಿಗೆ ಈ ಪ್ರಶಸ್ತಿ ಕೊಟ್ಟಿದ್ದು ಯಾರು ಗೊತ್ತಾ. ಅಮೇರಿಕಾದ ಷಿಂಗ್ಟನ್ನ ಸಿಯಾಟಲ್ನಲ್ಲಿರುವ ಸಹ್ಯಾದ್ರಿ ಕನ್ನಡ ಸಂಘ ಹಾಗೂ ವಾಷಿಂಗ್ಟನ್ ರಾಜ್ಯದ ಕನ್ನಡಿಗರ ತಂಡ. ಕಾಂತಾರ ಸಿನಿಮಾ ಬಳಿಕ ವಿಶ್ವ ಮಟ್ಟದಲ್ಲಿ ಫೇಮಸ್ ಆಗಿರೋ ರಿಷಬ್ ಶೆಟ್ಟಿ ಹಾಗೂ ಪತ್ನಿ ಪ್ರಗತಿ ಶೆಟ್ಟಿ ಅಮೆರಿಕದ ವಾಷಿಂಗ್ಟನ್ನ ಸಿಯಾಟಲ್ಗೆ ತೆರಳಿದ್ರು. ಅಲ್ಲಿನ ಪ್ರತಿಷ್ಠಿತ ಪ್ಯಾರಾಮೌಂಟ್ ಥಿಯೇಟರ್ನಲ್ಲಿ ರಿಷಬ್ ಶೆಟ್ಟಿಗೆ ಸಹ್ಯಾದ್ರಿ ಕನ್ನಡ ಸಂಘ ಹಾಗೂ ವಾಷಿಂಗ್ಟನ್ ರಾಜ್ಯದ ಕನ್ನಡಿಗರಾದ ಮನು ಗೌರವ್ ಮತ್ತು ತಂಡದವರು ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ವಾಷಿಂಗ್ಟನ್‌ನ ಸಿಯಾಟಲ್ ನಗರದ ಪ್ಯಾರಾಮೌಂಟ್ ಥಿಯೇಟರ್ಗೆ 95 ವರ್ಷಗಳ ಇತಿಹಾಸ ಇದೆ‌. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸೇರಿ ಹಲವು ಗಣ್ಯರು ಈ ವೇದಿಕೆ ಮೇಲೆ ನಿಂತು ಭಾಷಣ ಮಾಡಿದ್ರು. ಹೆಸರಾಂತ ಕಲಾವಿದರ ಕಾರ್ಯಕ್ರಮಗಳು ಇಲ್ಲಿ ನಡೆದಿದೆ. ಇಂಥ ಥಿಯೇಟರ್ನಲ್ಲಿ ರಿಷಬ್ ಶೆಟ್ಟಿ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪಡೆದುಕೊಂಡದ್ದು, ಈ ಖುಷಿಯನ್ನ ರಿಷಬ್ ಹಂಚಿಕೊಂಡಿದ್ದಾರೆ.

ಇದನ್ನೂ ವೀಕ್ಷಿಸಿ: 3ನೇ ವಾಗ್ದಾನ ಪೂರೈಸಲು ಮೋದಿ ತ್ರಿವಿಕ್ರಮ ಹೆಜ್ಜೆ: ಭಾರತದ ಭವಿಷ್ಯ ಬದಲಿಸುತ್ತಾ ಯುಸಿಸಿ..?