ಯುವ ಸಿನಿಮಾ ಶುರುವಾಗಿದ್ದು ಹೇಗೆ? ಅದಕ್ಕೆ ಕಾರಣ ಯಾರು?: ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಆರಂಭ!

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ ಅಂತೆಯೇ ಯುವ ರಾಜ್‌ಕುಮಾರ್ ಕೂಡ ಯುವ ಸಿನಿಮಾ ಮೂಲಕ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಯುವ ಹಾಡುಗಳು ಹಿಟ್ ಆಗಿವೆ. ಯುವ ರಾಜ್‌ಕುಮಾರ್ ಕ್ಲಾಸ್ ಎಂಟ್ರಿ ಕೊಡುತ್ತಾರೆ ಅಂದುಕೊಂಡಿದ್ದವರು ಟ್ರೈಲರ್ ಬಳಿಕ ಮಾಸ್ ಎಂಟ್ರಿ ಅನ್ನೋದು ಕನ್ಫರ್ಮ್ ಮಾಡಿಕೊಂಡಿದ್ದಾರೆ.
 

First Published Mar 27, 2024, 12:48 PM IST | Last Updated Mar 27, 2024, 12:48 PM IST

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ ಅಂತೆಯೇ ಯುವ ರಾಜ್‌ಕುಮಾರ್ ಕೂಡ ಯುವ ಸಿನಿಮಾ ಮೂಲಕ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಯುವ ಹಾಡುಗಳು ಹಿಟ್ ಆಗಿವೆ. ಯುವ ರಾಜ್‌ಕುಮಾರ್ ಕ್ಲಾಸ್ ಎಂಟ್ರಿ ಕೊಡುತ್ತಾರೆ ಅಂದುಕೊಂಡಿದ್ದವರು ಟ್ರೈಲರ್ ಬಳಿಕ ಮಾಸ್ ಎಂಟ್ರಿ ಅನ್ನೋದು ಕನ್ಫರ್ಮ್ ಮಾಡಿಕೊಂಡಿದ್ದಾರೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಮಿಸ್ ಮಾಡಿಕೊಳ್ಳುತ್ತಿದ್ದವರಿಗೆ ಯುವ ಹೊಸ ಭರವಸೆ. ಯುವ  ಸಿನಿಮಾದ ತುಣುಕುಗಳನ್ನ ನೋಡಿದ ಮೇಲೆ ಈ ಭರವಸೆ ಹುಟ್ಟಿಕೊಂಡಿದೆ. ಡ್ಯಾನ್ಸ್, ಡೈಲಾಗ್ ಡಿಲೇವರಿ ನಟನೆ ಆಕ್ಷನ್​ ಸೀಕ್ವೆನ್ಸ್​​ಗಳಲ್ಲಿ ಯುವ ಸೂಪರ್ ಆಗಿ ಕಾಣಿಸಿದ್ದಾರೆ. ಹೀಗಾಗಿ ಈ ಯುವ ಸಿನಿಮಾ ಮೇಲೆ ಕನ್ನಡ ಚಿತ್ರಪ್ರೇಮಿಗಳಿಗೆ ಭಾರಿ ನಿರೀಕ್ಷೆ ಇದೆ. ಯುವ ರಾಜ್​ಕುಮಾರ್ ನಟನೆಯ ಯುವ ಸಿನಿಮಾ ಇದೇ ವಾರ ಮಾರ್ಚ್​ 29ಕ್ಕೆ ಚಿತ್ರಮಂದಿರಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ. 

ಆದ್ರೆ ದೊಡ್ಮನೆಯ ಈ ಯುವ ಮೊದಲು ಯಾವ ದೃಶ್ಯದಿಂದ ಕ್ಯಾಮೆರಾ ಎದುರಿಸಿದ್ದು ಗೊತ್ತಾ.? ಕಥೆ ಸ್ಟೋರಿ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಯುವ ಮಾಡಿರೋ ಆಕ್ಷನ್‌ ದೃಶ್ಯಕ್ಕೆ ಸಿನಿ ಪ್ರಿಯರು ಫಿದಾ ಆಗಿದ್ದಾರೆ. ಅದೇ ಆಕ್ಷನ್ ಸೀಕ್ವೆನ್ಸ್​ನಿಂದಲೇ ಯುವ ಮೊಲದು ಕ್ಯಾಮೆರಾ ಎದುರಿಸಿದ್ದು. ಯುವ ಸಿನಿಮಾ ನಿರ್ದೇಶಕ ಸಂತೋಷ್ ಆನಂದ್ ರಾಮ್ ಒಂದು ಇಂಟ್ರೆಸ್ಟಿಂಗ್ ವಿಷಯ ಬಿಚ್ಚಿದ್ದಾರೆ. 'ಯುವ' ಸಿನಿಮಾಗೆ ತೆಗೆದ ಮೊದಲ ಶಾಟ್ ಏನು? ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಅದೇ ಸೀನ್ ಅನ್ನು ತೆಗೆದಿದ್ದು ಯಾಕೆ? ಅಂತಲೂ ಹೇಳಿದ್ದಾರೆ. ನಟ ರಜನಿ ಕಾಂತ್ ಮೊದಲನೇ ಸಿನಿಮಾ ಅಪೂರ್ವ ರಾಗಂಗಳ್‌ನಲ್ಲಿ ಮೊದಲ ಗೇಟ್ ತೆಗೆಯುವ ಶಾಟ್ ಇಟ್ರಂತೆ. ಯಾಕಂದ್ರೆ ಅಲ್ಲಿಂದ ಜೀವನ ಶುರುವಾಗಲಿ, ಹೊಸ ಜರ್ನಿ ಶುರುವಾಗಲಿ ಅಂತ. ಹಾಗೆ ಯುವನಿಗೆ ಮೊದಲ ಶಾಟ್ ಇಟ್ಟಿದ್ದು ಆಕ್ಷನ್ ದೃಶ್ಯದ ಓಡುವ ದೃಶ್ಯದಿಂದಂತೆ. 

ಯಾಕಂದ್ರೆ ಯುವ ಚಿತ್ರರಂಗದಲ್ಲಿ ಓಡುವ ಕುದುರೆಯಾಗೇ ಇರಬೇಕು ಈ ಪ್ಲಾನ್ ಮಾಡಿದ್ರಂತೆ. ಯುವ ರಾಜ್​ಕುಮಾರ್​ರನ್ನ ಚಿತ್ರರಂಗಕ್ಕೆ ಪರಿಚಯಿಸಬೇಕು ಅನ್ನೋ ದೊಡ್ಡ ಕನಸು ಕಂಡಿದ್ದು ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್. ಆದ್ರೆ ಆ ಆಸೆ ಈಡೇರೋ ಮೊದಲೇ ಅಪ್ಪು ಹೊರಟು ಹೋದ್ರು. ಪುನೀತ್ ಇದ್ದಿದ್ದರೆ ಅವರ ಪಿಆರ್​ಕೆ ಬ್ಯಾನರ್​ನಿಂದಲೇ ಯುವ ಚಿತ್ರರಂಗಕ್ಕೆ ಪರಿಚಯ ಆಗುತ್ತಿದ್ರು. ಆದ್ರೆ ಅಪ್ಪು ಸಾಯೋ ಕೆಲ ದಿನಗಳ ಹಿಂದೆ ಯುವನ್ನ ಲಾಂಚ್ ಮಾಡಿ ಅಂತ ನಿರ್ಮಾಪಕ ವಿಜಯ್ ಕಿರಗಂಧೂರುಗೆ ಹೇಳಿದ್ರಂತೆ. ಅಪ್ಪು ನಿಧನ ಬಳಿಕ ಅಶ್ವೀನಿ ಪುನೀತ್ ರಾಜ್​ಕುಮಾರ್​ ನಿರ್ಮಾಪಕ ವಿಜಯ್​​ ಕಿರಗಂಧೂರುಗೆ ಕರೆ ಮಾಡಿ ಯುವನ ಸಿನಿಮಾ ನಿರ್ಮಾಣ ಮಾಡಿ ಅಂತ ಕೇಳಿಕೊಂಡಿದ್ರಂತೆ. ಇವರಿಬ್ಬರ ಆಸೆಯಂತೆ ಯುವ ಇಂದು ಚಿತ್ರರಂಗಕ್ಕೆ ಬಂದಿದ್ದಾರೆ. 

ಯುವ ಸಿನಿಮಾ ರಿಲೀಸ್​ಗೆ ಕೌಟ್​ಡೌನ್ ಸ್ಟಾರ್ಸ್ ಆಗಿದೆ. ದೊಡ್ಮನೆ ಅಭಿಮಾನಿ ಬಳಗ ಹಬ್ಬ ಮಾಡೋದಕ್ಕೆ ಸಜ್ಜಾಗಿದ್ದಾರೆ. ಅಪ್ಪು ಶಿವಣ್ಣ ಸಿನಿಮಾಗಳು ಬಿಡುಗಡೆ ಆಗಿ ನೂರು ದಿನ ಪ್ರದರ್ಶನ ಕಾಣುತ್ತಿದ್ದ ಬೆಂಗಳೂರಿನ ಕೆಜಿ ರಸ್ತೆಯಲ್ಲಿರೋ ಸಂತೋಷ್ ಚಿತ್ರಮಂದಿರದಲ್ಲೇ ಯುವ ಮೊದಲ ಪ್ರದರ್ಶನ ಶುರು ಮಾಡುತ್ತಿದೆ. ಬೆಳಗ್ಗೆ 4 ಗಂಟೆಯಿಂದಲೇ ಫ್ಯಾನ್ಸ್ ಶೋ ಆರಂಭ ಆಗುತ್ತೆ ಅನ್ನೋ ಮಾಹಿತಿ ಇದೆ. ಮಾರ್ಚ್​​ 29 ಯುವ ರಾಜ್​ಕುಮಾರ್​ ಜೀವನದಲ್ಲಿ ಮರೆಯದ ದಿನ. ಯಾಕಂದ್ರೆ ಅದೇ ದಿನ ಯುವ ಬೆಳ್ಳಿತೆರೆ ಮೇಲೆ ಮೊದಲ ಹೆಜ್ಜೆ ಇಡಲಿದ್ದಾರೆ. ಅದಕ್ಕೆ ಇನ್ನೂ ಎರಡು ದಿನವಷ್ಟೇ ಭಾಗಿ. ಹೀಗಾಗಿ ಯುವ ಟಿಕೆಟ್ ಬುಕ್ಕಿಂಗ್ ಕೌಂಟರ್ ಕೂಡ ಓಫನ್ ಆಗಿದೆ. ಆನ್​​ಲೈನ್​ ಟಿಕೆಟ್​ ಬುಕ್ಕಿಂಗ್​ನಲ್ಲಿ ಸೀಟುಗಳು ಫಾಸ್ಟ್​ ಫಿಲ್ಲಿಂಗ್ ಆಗುತ್ತಿವೆ. ಸಧ್ಯದ ಸ್ಥಿತಿ ನೋಡಿದ್ರೆ ಯುವ ರಾಜ್​ಕುಮಾರ್ ತನ್ನ ಮೊದಲ ಸಿನಿಮಾದಲ್ಲೇ ರೆಕಾರ್ಡ್ ಬರೆಯೋ ಎಲ್ಲಾ ನಂಬಿಕೆ ಹುಟ್ಟಿದೆ.