Asianet Suvarna News Asianet Suvarna News

Shanvi srivastava: 'ಕಸ್ತೂರಿ ಮಹಲ್' ನೋಡಿದ ಸಿನಿ ಪ್ರೇಕ್ಷಕರು ಏನಂದ್ರು?

ಸ್ಯಾಂಡಲ್‌ವುಡ್‌ನ ಮಾಸ್ಟರ್ ಪೀಸ್ ಹುಡುಗಿ ಶಾನ್ವಿ ಶ್ರೀವಾತ್ಸವ್‌ಗೆ ದೆವ್ವ ಅಟ್ಯಾಕ್ ಮಾಡಿದೆ. ಆದ್ರೆ ಇದು ರೀಲ್ ಮೇಲೆ. ಹೌದು! ಶಾನ್ವಿ ಶ್ರೀವಾತ್ಸವ್‌ ನಟಿಸಿರೋ 'ಕಸ್ತೂರಿ ಮಹಲ್' ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿದೆ. 

May 14, 2022, 9:22 PM IST

ಸ್ಯಾಂಡಲ್‌ವುಡ್‌ನ ಮಾಸ್ಟರ್ ಪೀಸ್ ಹುಡುಗಿ ಶಾನ್ವಿ ಶ್ರೀವಾತ್ಸವ್‌ಗೆ ದೆವ್ವ ಅಟ್ಯಾಕ್ ಮಾಡಿದೆ. ಆದ್ರೆ ಇದು ರೀಲ್ ಮೇಲೆ. ಹೌದು! ಶಾನ್ವಿ ಶ್ರೀವಾತ್ಸವ್‌ ನಟಿಸಿರೋ 'ಕಸ್ತೂರಿ ಮಹಲ್' ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿದೆ. ಹೆಸರಾಂತ ನಿರ್ದೇಶಕ ದಿನೇಶ್ ಬಾಬು ಆಕ್ಷನ್ ಕಟ್ ಹೇಳಿರೋ 50ನೇ ಸಿನಿಮಾ ಇದು. ಹಾರರ್ ಸಬ್ಜೆಕ್ಟ್‌ನ ಈ ಸಿನಿಮಾ ನೋಡಿದ ಪ್ರೇಕ್ಷಕರು ಬೆಚ್ಚಿ ಬಿದ್ದಿದ್ದಾರೆ. ಯಾವಾಗಲೂ ಬಬ್ಲಿ ಪಾತ್ರಗಳ ಮೂಲಕ ಮಿಂಚುತ್ತಿದ್ದ ಶಾನ್ವಿ ಶ್ರೀವಾತ್ಸವ್‌ ಈ ಭಾರಿ ಬೆಚ್ಚಿ ಬೀಳಿಸೋ ಹಾರರ್ ರೋಲ್ ಮಾಡಿ ಮೋಡಿ ಮಾಡಿದ್ದಾರೆ. 

'ಕಸ್ತೂರಿ ಮಹಲ್‌'ನಲ್ಲಿ ದೆವ್ವವಾಗಿ ಹೆದರಿಸುತ್ತಿದ್ದಾರೆ ಕ್ಯೂಟಿ ಶಾನ್ವಿ ಶ್ರೀವತ್ಸವ್.!

ಕಸ್ತೂರಿ ಮಹಲ್ ಸಿನಿಮಾ ನೋಡಿ ಚಿತ್ರಮಂದಿರದಿಂದ ಹೊರ ಬಂದ ಪ್ರೇಕ್ಷಕರು, ಹಾರರ್ ಸ್ಟೋರಿಯ ಸಿನಿಮಾ ನೋಡಿ ತುಂಬಾ ದಿನಗಳಾಗಿತ್ತು. ಈ ಸಿನಿಮಾ ನೋಡಿ ಖುಷಿ ಆಯ್ತು ಎಂದಿದ್ದಾರೆ. ಭಾವನಾತ್ಮಕ ಸಂಬಂಧಗಳ ಮೂಲಕ ದೆವ್ವದ ಕತೆಯನ್ನು ಹೇಳುವ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗಿದೆ. ಅಂದರೆ ಪ್ಯಾರಾನಾರ್ಮಲ್‌ ಹಾರರ್‌, ಥ್ರಿಲ್ಲರ್‌ ಸಬ್ಜೆಕ್ಟ್ ಇಟ್ಟುಕೊಂಡು ಮಾಡಿರುವ ಚಿತ್ರ ಇದಾಗಿದೆ. ನಿರ್ದೇಶಕರು ಈ ಚಿತ್ರದಲ್ಲಿ ತುಂಬಾ ಬುದ್ದಿವಂತ ದೆವ್ವವನ್ನು ತೋರಿಸಿದ್ದಾರೆ. ದೆವ್ವ ತನ್ನ ಪವರ್‌ ಬಳಸಿಕೊಂಡು ಹೇಗೆ ಕೆಲಸ ಮಾಡಿಸಿಕೊಳ್ಳುತ್ತದೆ ಎಂಬುದು ಈ ಚಿತ್ರದಲ್ಲಿ ನೋಡಬಹುದು. ರಂಗಾಯಣ ರಘು, ಸ್ಕಂದ ಅಶೋಕ್‌, ವತ್ಸಲಾ ಮೋಹನ್‌, ಶ್ರುತಿ ಪ್ರಕಾಶ್‌, ನೀನಾಸಂ ಅಶ್ವಥ್‌ ಹಾಗೂ ಕಾಶಿಮಾ ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories