Asianet Suvarna News Asianet Suvarna News

ಇದು 'ತ್ರಿವಿಕ್ರಮ' ಚಿತ್ರದ ಹೈ ವೋಲ್ಟೇಜ್ ಸ್ಟಂಟ್ ಮೇಕಿಂಗ್..!

'ತ್ರಿವಿಕ್ರಮ' ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಕಿರಿಯ ಪುತ್ರ ವಿಕ್ರಂ ರವಿಚಂದ್ರನ್ (Vikram Ravichandran) ಅಭಿನಯದ ಸಿನಿಮಾ. ಚೊಚ್ಚಲ ಚಿತ್ರದಲ್ಲಿ ಸಖತ್ ಪರ್ಫಾಮೆನ್ಸ್ ನೀಡಿರೋ ವಿಕ್ರಂ ಸ್ಟಂಟ್ಸ್ ಕೂಡ ಸೂಪರ್ ಆಗಿಯೇ ಮಾಡ್ತಾರೆ.

'ತ್ರಿವಿಕ್ರಮ' ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಕಿರಿಯ ಪುತ್ರ ವಿಕ್ರಂ ರವಿಚಂದ್ರನ್ (Vikram Ravichandran) ಅಭಿನಯದ ಸಿನಿಮಾ. ಚೊಚ್ಚಲ ಚಿತ್ರದಲ್ಲಿ ಸಖತ್ ಪರ್ಫಾಮೆನ್ಸ್ ನೀಡಿರೋ ವಿಕ್ರಂ ಸ್ಟಂಟ್ಸ್ ಕೂಡ ಸೂಪರ್ ಆಗಿಯೇ ಮಾಡ್ತಾರೆ. ಸಿನಿಮಾಗೆ ಬರೋ ಮುನ್ನವೇ ರವಿವರ್ಮ ಮಾಸ್ಟರ್ ರಿಂದ ಟ್ರೈನಿಂಗ್ ಪಡೆದುಕೊಂಡಿದ್ದಾರೆ ವಿಕ್ರಂ. 

ವಿಕ್ರಂ ಸ್ಟಂಟ್ಸ್ ಟ್ರೈನಿಂಗ್ (Stunts Training) ಪಡೆದುಕೊಂಡಿರೋದ್ರಿಂದ ಆನ್ ಸ್ಕ್ರೀನ್ ಮೇಲೆ ಸಾಹಸ ದೃಶ್ಯಗಳಲ್ಲಿ ನಟಿಸೋದು ಸಖತ್ ಸುಲಭ ಮಾಡಿಕೊಂಡಿದ್ದಾರೆ. ಅದಕ್ಕಾಗಿಯೇ ಸಿನಿಮಾದಲ್ಲಿ ಸಾಕಷ್ಟು ಆಕ್ಷನ್ ಸೀನ್ ಗಳನ್ನ ಕಂಪೋಸ್ ಮಾಡಿದ್ದಾರೆ ನಿರ್ದೇಶಕರು.

'ಕಾಣೆಯಾದವರ ಬಗ್ಗೆ ಪ್ರಕಟಣೆ'ಗೆ ಮುನಿಸು ಮರೆತು ಒಂದಾದ್ರು ಅಲೋಕ್-ಚಂದನ್ ಶೆಟ್ಟಿ..!

ತ್ರಿವಿಕ್ರಂ ಸಿನಿಮಾವನ್ನ ಕರ್ನಾಟಕ ಮಾತ್ರವಲ್ಲದೆ ಕಾಶ್ಮಿರ ಹಾಗೂ ಬ್ಯಾಂಕಾಕ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ. ರಾಜ್ಯದಲ್ಲಿ  ಬೆಂಗಳೂರು, ಮಂಗಳೂರು, ಕೊಡಚಾದ್ರಿಯ ಸುಂದರ ತಾಣಗಳಲ್ಲಿ  ಶೂಟಿಂಗ್ ಮಾಡಿದ್ದಾರೆ ನಿರ್ದೇಶಕ ಸಹನಾ ಮೂರ್ತಿ.

ಸದ್ಯ ತಿವಿಕ್ರಮ ಟೀಂ ರಿಲೀಸ್ ಮಾಡಿರೋ ಮೇಕಿಂಗ್ ನಲ್ಲಿ ಕ್ರೇಜಿಸ್ಟಾರ್ ಕೂಡ ಕಾಣಿಸಿಕೊಂಡಿದ್ದು ಚಿತ್ರದಲ್ಲಿ ರವಿಮಾಮ ಕೂಡ ಆಕ್ಟ್ ಮಾಡಿದ್ದಾರಾ ಅನ್ನೋ ಅನುಮಾನಗಳು ಕಾಡುತ್ತಿದೆ. ಹಾಗೇನಾದ್ರು ರವಿಚಂದ್ರನ್ ಕೂಡ ಆಕ್ಟ್ ಮಾಡಿದ್ರೆ, ತ್ರಿವಿಕ್ರಮ ಸಿನಿಮಾ ಅಭಿಮಾನಿಗಳಿಗೆ ಡಬಲ್ ಧಮಾಕ ಆಗಲಿದೆ. ಜೂನ್ 24ರಂದು ತ್ರಿವಿಕ್ರಮ ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದ್ದು ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದು, ಸಂತೋಷ್ ರೈ ಛಾಯಾಗ್ರಹಣ ಮಾಡಿದ್ದಾರೆ.