Asianet Suvarna News Asianet Suvarna News

Sholay VS KGF 2: ಅತಿ ಹೆಚ್ಚು ಜನ ನೋಡಿದ ಸಿನಿಮಾ ಯಾವುದು ಗೊತ್ತಾ?

ಭಾರತೀಯ ಸಿನಿಮಾರಂಗದಲ್ಲಿ ಕೆಜಿಎಫ್ 2 ಅತೀ ಹೆಚ್ಚು ಜನರು ನೋಡಿದ ಸಿನಿಮಾ ಅನ್ನೋ ಟಾಕ್ ಶುರುವಾಗಿದೆ. ಟಿಕೆಟ್ ಬುಕ್ಕಿಂಗ್ ಹಾಗೂ ಸೇಲ್ ಆಗುವ ಆಧಾರದ ಮೇಲೆ ಇದನ್ನ ನಿರ್ಧರಿಸಲಾಗುತ್ತೆ. 
 

May 14, 2022, 8:47 PM IST

ರಾಕಿಂಗ್ ಸ್ಟಾರ್ ಯಶ್ (Yash) 'ಕೆಜಿಎಫ್' (KGF) ಸಿನಿಮಾ ಮೂಲಕ ದಾಖಲೆಗಳ ಮೇಲೆ ದಾಖಲೆ ಮಾಡುತ್ತಾ ಇಡೀ ಭಾರತೀಯ ಸಿನಿಮಾರಂಗವನ್ನೇ ಕಬ್ಜ ಮಾಡುತ್ತಿದ್ದಾರೆ. ಬಾಲಿವುಡ್ (Bollywood) ಅಂಗಳದಲ್ಲಿ ತೂಫಾನ್ ರೀತಿ ಯಶ್ ನುಗ್ಗುತ್ತಿದ್ದು ಹಿಂದಿ ಚಿತ್ರರಂಗದ ಅತೀ ಹೆಚ್ಚು ಗಳಿಕೆಯ ಸಿನಿಮಾ ಲೀಸ್ಟ್‌ನಲ್ಲಿ 'ಕೆಜಿಎಫ್ 2' (KGF 2) ಸಿನಿಮಾ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದೆ. ಈಗ ಅದನ್ನೂ ಮೀರಿ ಮತ್ತೊಂದು ದಾಖಲೆಯನ್ನ ಕೆಜಿಎಫ್ 2 ಕ್ರಿಯೆಟ್ ಮಾಡಲಿದೆ. ಭಾರತೀಯ ಸಿನಿಮಾರಂಗದಲ್ಲಿ ಕೆಜಿಎಫ್ 2 ಅತೀ ಹೆಚ್ಚು ಜನರು ನೋಡಿದ ಸಿನಿಮಾ ಅನ್ನೋ ಟಾಕ್ ಶುರುವಾಗಿದೆ. ಟಿಕೆಟ್ ಬುಕ್ಕಿಂಗ್ ಹಾಗೂ ಸೇಲ್ ಆಗುವ ಆಧಾರದ ಮೇಲೆ ಇದನ್ನ ನಿರ್ಧರಿಸಲಾಗುತ್ತೆ. ಹಾಗಾದ್ರೆ ಅತೀ ಹೆಚ್ಚು ಜನರು ವೀಕ್ಷಣೆ ಮಾಡಿದ ಚಿತ್ರ ಕೆಜಿಎಫ್ 2 ಮಾತ್ರವಲ್ಲ. ಆದ್ರೆ ರಿಸೆಂಟ್ ಆಗಿ ಬಿಡುಗಡೆಯಾದ ಚಿತ್ರಗಳಲ್ಲಿ ಕೆಜಿಎಫ್ 2 ಸಿನಿಮಾವೇ ಅತೀ ಹೆಚ್ಚು ಜನರು ನೋಡಿದ ಚಿತ್ರ ಅಂದ್ರೆ ತಪ್ಪಾಗೋದಿಲ್ಲ. 

IMDB ಪ್ರಕಾರ, ಅಮಿತಾಭ್ ಬಚ್ಚನ್ ಮತ್ತು ಧರ್ಮೇಂದ್ರ ಅಭಿನಯದ 1975 ರಲ್ಲಿ ತೆರೆಕಂಡ ಐತಿಹಾಸಿಕ ಬ್ಲಾಕ್‌ಬಸ್ಟರ್ ಸಿನಿಮಾ ಶೋಲೆ (Sholay). ಅಂದಿನ ಕಾಲದಲ್ಲಿಯೇ ಶೋಲೆ ಸಿನಿಮಾದ 18 ಮಿಲಿಯನ್ ಟಿಕೆಟ್‌ಗಳನ್ನು ಮಾರಾಟವಾಗಿತ್ತಂತೆ. ಈ ರೆಕಾರ್ಡ್ ಅನ್ನು ಇಂದಿಗೂ ಯಾರು ಮುರಿದಿಲ್ಲ. ಸನ್ನಿ ಡಿಯೋಲ್, ಅಮಿಶಾ ಪಟೇಲ್ ಅಭಿನಯದ ಗದರ್ ಏಲ್ ಪ್ರೇಮ್ ಕಥಾ ಚಿತ್ರವನ್ನ ಸುಮಾರು 5.05 ಕೋಟಿ ಜನರು ವೀಕ್ಷಣೆ ಮಾಡಿದ್ರು ಈ ಮೂಲಕ ಈ ಚಿತ್ರವೂ ಕೂಡ ರೆಕಾರ್ಡ್ ಲೀಸ್ಟ್ ನಲ್ಲಿದೆ. ಬಾಲಿವುಡ್ ಅಂಗಳದಲ್ಲಿ ಭಾರಿ ಸದ್ದು ಮಾಡಿದ್ದ ಲವ್ ಸ್ಟೋರಿ ಸಿನಿಮಾ ಹಮ್ ಆಪ್ ಕೆ ಹೈ ಕೌನ್. ಸಲ್ಮಾನ್ ಖಾನ್ ಮತ್ತು ಮಾಧುರಿ ದೀಕ್ಷಿತ್ ಅಭಿನಯದ ಈ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಈ ಲವ್ ಸ್ಟೋರಿಯನ್ನ  7.39 ಕೋಟಿ ಜನರು ಥಿಯೇಟರ್‌ನಲ್ಲಿ ವೀಕ್ಷಣೆ ಮಾಡಿದ್ರು. 

KGF Chapter 2: ಹಾಲಿವುಡ್‌ ಕೂಡಾ ಬೆಚ್ಚಿ ಬಿದ್ದಿದೆಯಂತೆ ರಾಕಿ ಭಾಯ್ ಸಿನಿಮಾ ನೋಡಿ!

ಇನ್ನು ಅಮೀರ್ ಖಾನ್ ನಟನೆಯ ರಾಜಾ ಹಿಂದೂಸ್ಥಾನಿ ಚಿತ್ರದ 4.09 ಕೋಟಿ ಟಿಕೆಟ್ ಸೇಲ್ ಆಗಿತ್ತು ಹಾಗಾಗಿ ಈ ಚಿತ್ರವೂ ರೆಕಾರ್ಡ್ ಲೀಸ್ಟ್‌ನಲ್ಲಿದೆ. ಶಾರುಖ್ ಹಾಗೂ ಕಾಜೊಲ್ ಅಭಿನಯದ ಕೇವಲ ಬಾಲಿವುಡ್ ಮಾತ್ರವಲ್ಲ ಇಡೀ ಭಾರತೀಯ ಸಿನಿಮಾ ಪ್ರೇಕ್ಷಕರ ಆಲ್ ಟೈಂ ಫೆವರೇಟ್ ಆಗಿರೋ ಡಿಡಿಎಲ್‌ಜೆ ಚಿತ್ರವನ್ನ 4.70 ಕೋಟಿ ಜನರು ವೀಕ್ಷಣೆ ಮಾಡಿದ್ರಂತೆ. ಇನ್ನು ರಾಜಮೌಳಿಯ ಬಾಹುಬಲಿ ಚಿತ್ರವನ್ನ 5.25 ಕೋಟಿ ಜನರು ವೀಕ್ಷಣೆ ಮಾಡಿದ್ರು. ಆದ್ರೆ ಇತ್ತೀಚಿನ ದಿನಗಳಲ್ಲಿ ಕೋಟಿ ಕೋಟಿ ಟಿಕೆಟ್ ಸೇಲ್ ಆದ ನಿದರ್ಶನವೇ ಇಲ್ಲ. ಈಗ ಆ ದಾಖಲೆಯನ್ನ ಮತ್ತೆ ಸೆಟ್ ಮಾಡಲು ಕನ್ನಡದ ರಾಕಿ ರೆಡಿಯಾಗಿದ್ದಾನೆ. ಕೆಜಿಎಫ್ 2 ಸಿನಿಮಾ ಎಲ್ಲಾ ಸಿನಿಮಾಗಳ ದಾಖಲೆಗಳನ್ನ ಪೀಸ್ ಪೀಸ್ ಮಾಡಿದೆ. ಹೊಸ ರೆಕಾರ್ಡ್‌ಗಳನ್ನ ಸೆಟ್ ಮಾಡುತ್ತಾ ಹೊಸ ಹಿಸ್ಟರಿ ಕ್ರಿಯೆಟ್ ಮಾಡುತ್ತಿದೆ. ಈಗ ಅತೀ ಹೆಚ್ಚು ಜನರು ವೀಕ್ಷಣೆ ಮಾಡಿದ ಬಾಲಿವುಡ್ ಚಿತ್ರಗಳಲ್ಲಿ ಒಂದಾಗಿರೋ ಕೆಜಿಎಫ್ 2 ಸಿನಿಮಾವನ್ನ 5.5 ಕೋಟಿಗೂ ಅಧಿಕ ಜನರು ಚಿತ್ರ ವೀಕ್ಷಣೆ ಮಾಡಿದ್ದಾರೆ. ಈ ಮೂಲಕ ರಾಕಿ ಎಲ್ಲಾ ದಾಖಲೆಯನ್ನ ಉಡೀಸ್ ಮಾಡಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories