Asianet Suvarna News Asianet Suvarna News

ಮೊದಲ ಬಾರಿಗೆ ಪ್ರೇಮ್ ಕೈ ತಪ್ಪಿತು ಟೈಟಲ್: ಹೆಬ್ಬುಲಿ ಕೃಷ್ಣ ಅವರ ಪಾಲಾಯ್ತು ಕಾಳಿ ಟೈಟಲ್!

ಕನ್ನಡ ಸಿನಿಮಾರಂಗದಲ್ಲಿ ಟೈಟಲ್ ಹಾಗೂ ಹಾಡುಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಪಡೆದುಕೊಂಡಿರೋ ನಿರ್ದೇಶಕ ಜೋಗಿ ಪ್ರೇಮ್. ಪ್ರೇಮ್ ಸಿನಿಮಾ ಟೈಟಲ್ ಎಷ್ಟರ ಮಟ್ಟಿಗೆ ಫೇಮಸ್ ಅಂದ್ರೆ ಇಂದಿಗೂ ಅವ್ರನ್ನ ಅವ್ರದ್ದೇ ಸಿನಿಮಾ ಟೈಟಲ್ ಸೇರಿಸಿ ಜೋಗಿ ಪ್ರೇಮ್ ಅಂತಾನೇ ಕರೆಯೋದು. 

ಕನ್ನಡ ಸಿನಿಮಾರಂಗದಲ್ಲಿ ಟೈಟಲ್ ಹಾಗೂ ಹಾಡುಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಪಡೆದುಕೊಂಡಿರೋ ನಿರ್ದೇಶಕ ಜೋಗಿ ಪ್ರೇಮ್. ಪ್ರೇಮ್ ಸಿನಿಮಾ ಟೈಟಲ್ ಎಷ್ಟರ ಮಟ್ಟಿಗೆ ಫೇಮಸ್ ಅಂದ್ರೆ ಇಂದಿಗೂ ಅವ್ರನ್ನ ಅವ್ರದ್ದೇ ಸಿನಿಮಾ ಟೈಟಲ್ ಸೇರಿಸಿ ಜೋಗಿ ಪ್ರೇಮ್ ಅಂತಾನೇ ಕರೆಯೋದು. ಆದ್ರೆ ಇಷ್ಟು ವರ್ಷದಲ್ಲಿ ಇದೇ ಮೊದಲ ಬಾರಿಗೆ ಪ್ರೇಮ್ ಅಂದುಕೊಂಡ ಟೈಟಲ್ ಅವ್ರ ಕೈ ತಪ್ಪಿದೆ. 'ಕಾಳಿ' ಕೇಳಿದ ತಕ್ಷಣವೇ ವಾವ್ಹ್ ಎಂಥ ಪವರ್ ಫುಲ್ ಟೈಟಲ್ ಅನ್ನಿಸೋ ಹೆಸರು. ಇದೇ ಟೈಟಲ್ ಪ್ರೇಮ್ ಅವ್ರಿಗೆ ಬೇಕಾಗಿದ್ದಿದ್ದು. ಧ್ರುವ ಹಾಗೂ ಪ್ರೇಮ್ ಕಾಂಬಿನೇಷನ್‌ನ ಚಿತ್ರಕ್ಕೆ ಈ ಟೈಟಲ್ ಇಡಬೇಕು ಅಂತಿದ್ರು. 

ಅಣ್ಣಾವ್ರ ಜನ್ಮದಿನದಂದು ನಡೆಯಿತು ಧ್ರುವ-ಪ್ರೇಮ್ ಚಿತ್ರದ ಮುಹೂರ್ತ.!

ಆದ್ರೆ ಈ ಟೈಟಲ್‌ನಲ್ಲಿ ಹೆಬ್ಬುಲಿ ಕೃಷ್ಣ ಅಭಿಷೇಕ್ ಅಂಬರೀಶ್ ಅವ್ರಿಗೆ ಹೊಸ ಸಿನಿಮಾ ಅನೌನ್ಸ್ ಮಾಡಿ ಆಗಿದೆ. ಹಾಗಾಗಿ ಈ ಟೈಟಲ್ ಪ್ರೇಮ್ ಅವ್ರಿಂದ ಮಿಸ್ ಆಗಿದೆ. ಪ್ರೇಮ್ ತಮ್ಮ ಸಿನಿಮಾ ಟೈಟಲ್‌ಗೆ ಸಖತ್ ಇಂಪಾರ್ಟೆಂಟ್ಸ್ ಕೊಡ್ತಾರೆ. ಜನರಿಗೆ ಸದಾ ನೆನಪಿರುವಂತಹ ಟೈಟಲ್ ಅನ್ನೇ ಅವ್ರು ಸೆಲೆಕ್ಟ್ ಮಾಡೋದು. ಜೋಗಿ ,ಜೋಗಯ್ಯ, ಪ್ರೀತಿ ಏಕೆ ಭೂಮಿಮೇಲಿದೆ, ಎಕ್ಸ್‌ಕ್ಯೂಸ್ ಮಿ, ಕರಿಯಾ, ದಿ ವಿಲನ್, ಏಕ್ ಲವ್ ಯಾ... ಹೀಗೆ ಎಲ್ಲರ ಬಾಯಲ್ಲಿ ಸುಲಭವಾಗಿ ಬರೋ ಟೈಟಲ್ ಅನ್ನೇ ಪ್ರೇಮ್ ಸೆಲೆಕ್ಟ್ ಮಾಡ್ತಿದ್ರು. ಆದ್ರೆ ಈ ಬಾರಿ ಟೈಟಲ್ ಪ್ರೇಮ್ ಕೈ ತಪ್ಪಿದ್ದು ಈಗ ಮತ್ತೊಂದು ಟೈಟಲ್ ಹುಡುಕಾಟದಲ್ಲಿದ್ದಾರೆ. ಇನ್ನು ಮೂಲಗಳ ಪ್ರಕಾರ ಪ್ರೇಮ್ ಎರಡನೇ ಆಪ್ಷನ್ ಆಗಿ ಕೇಡಿ ನಂ1 ಅನ್ನೋ ಟೈಟಲ್ ಇಟ್ಕೊಳಣ ಅನ್ಕೊಂಡಿದ್ದಾರಂತೆ. ಆದ್ರೆ ಈ ಟೈಟಲ್ ಕೂಡ ಪ್ರೇಮ್ ಕೈನಲ್ಲಿ ಇಲ್ಲ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies