Asianet Suvarna News Asianet Suvarna News
breaking news image

ಸರಣಿ ಆತ್ಮಹತ್ಯೆ ಸುಳಿಯಲ್ಲಿ ಸಿನಿಮಾ ನಾಯಕಿಯರು: ಆತ್ಮಹತ್ಯೆಯ ತವರುಮನೆ ಆಯ್ತಾ ಬಣ್ಣದ ಲೋಕ?

ಬಣ್ಣದ ಜಗತ್ತು ಎಲ್ಲರನ್ನ ಕೈಬೀಸಿ ಕರೆಯೋದಿಲ್ಲ. ಟ್ಯಾಲೆಂಟ್ ಇರುವವರು ಇಂಡಸ್ಟ್ರಿಯಲ್ಲಿ ಮುಗಿಲೆತ್ತರಕ್ಕೆ ಬೆಳೆಯುತ್ತಾರೆ. ಇನ್ನು ಕೆಲವರು ವರ್ಷಾನುಗಟ್ಟಲೇ ಸರ್ಕಸ್ ಮಾಡುತ್ತಲೇ ಇರುತ್ತಾರೆ.

ಬಣ್ಣದ ಜಗತ್ತು ಎಲ್ಲರನ್ನ ಕೈಬೀಸಿ ಕರೆಯೋದಿಲ್ಲ. ಟ್ಯಾಲೆಂಟ್ ಇರುವವರು ಇಂಡಸ್ಟ್ರಿಯಲ್ಲಿ ಮುಗಿಲೆತ್ತರಕ್ಕೆ ಬೆಳೆಯುತ್ತಾರೆ. ಇನ್ನು ಕೆಲವರು ವರ್ಷಾನುಗಟ್ಟಲೇ ಸರ್ಕಸ್ ಮಾಡುತ್ತಲೇ ಇರುತ್ತಾರೆ. ಹೊರಗಿಂದ ಕಲರ್ ಫುಲ್ ಆಗಿ ಕಾಣೋ ಈ ಜಗತ್ತಿನಲ್ಲಿ ಆತ್ಮಹತ್ಯೆ ಅನ್ನೋದು ಕಾಮನ್ ಆಗಿ ಬಿಟ್ಟಿದೆ ಅನ್ನೋದು ಆಘಾತಕಾರಿ ವಿಚಾರ. ಹೌದು ಕೆಲವು ತಿಂಗಳಿನಿಂದ ಸಾಲು ಸಾಲು ನಟಿಯರು ಆತ್ಮಹತ್ಯೆಗೆ ಶರಣಾಗುವ ಮೂಲಕ ಬಣ್ಣದ ಜಗತ್ತಿನ ಕರಾಳಮುಖವನ್ನ ತೆರೆದಿಟ್ಟಿದ್ದಾರೆ. ಕನ್ನಡ ಕಿರುತೆರೆಯ ಉದಯೋನ್ಮುಖ ನಟಿ ಸೌಜನ್ಯ ಕಳೆದ ಕೆಲ ತಿಂಗಳುಗಳ ಹಿಂದೆ ಆತ್ಮಹತ್ಯೆಗೆ ಶರಣಾದ್ರು. ಅನಾರೋಗ್ಯದ ನೆಪ ಹೇಳಿ ತಮ್ಮ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟರು. ಸೌಜನ್ಯ ಕೊಡಗಿನ ಕುಶಾಲನಗರದ ಮೂಲದವರಾಗಿದ್ದು ಹಲವು ಧಾರಾವಾಹಿಗಳು ಮತ್ತು ಚೌಕಟ್ಟು ಹಾಗೂ ಫನ್ ಸಿನೆಮಾಗಳಲ್ಲಿ ನಟಿಸಿದ್ದರು. 

ಚಿತ್ರರಂಗದಲ್ಲಿ ನೆಲೆ ಕಾಣುವ ಹೊತ್ತಿನಲ್ಲಿ ಜೀವವನ್ನೇ ಕಳೆದುಕೊಂಡುಬಿಟ್ರು ಸೌಜನ್ಯ. ಕನ್ನಡ ನಟಿ ಮತ್ತು ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿ ಜಯಶ್ರೀ ರಾಮಯ್ಯ ಅವರು ಜನವರಿ 25 ರಂದು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ರು. ಬಿಗ್ ಬಾಸ್ ನಂತ್ರ ಜಯಶ್ರೀ ಅವ್ರಿಗೆ ಸಾಕಷ್ಟು ಆಫರ್ ಗಳಿತ್ತು ಆದರೆ ಜಯಶ್ರೀ ಖಿನ್ನತೆಯಿಂದ ಬಳಲುತ್ತಿದ್ದರಂತೆ ಹಾಗಾಗಿ ಆತ್ಮಹತ್ಯೆಗೆ ಶರಣಾದ್ರು. ಕನ್ನಡದ ನಟಿಯರು ಮಾತ್ರವಲ್ಲ ಅಲ್ಲ ಪಕ್ಕದ ಇಂಡಸ್ಟ್ರಿಯ ನಟಿಯರು ಕೂಡ ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಕಾರಣ ಮಾತ್ರ ನಿಗೂಡವಾಗಿದೆ. ಇತ್ತೀಚಿಗಷ್ಟೇ ಕೇರಳದ ಕೋಯಿಕ್ಕೋಡ್ ನಲ್ಲಿ ರೂಪದರ್ಶಿ ಶಹನಾ. ಬಜಾರ್ ನಲ್ಲಿರುವ ತಮ್ಮ ಅಪಾರ್ಟಮೆಂಟ್ ನಲ್ಲಿ ಕಿಟಕಿಯ ಗ್ರೀಲ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ರೆ ಸಾವಿಗೆ ಕಾರಣವೇನು ಅನ್ನೋದು ಮಾತ್ರ ನಿಗೂಢವಾಗಿದೆ. 

ಕನ್ನಡ ಬೆಳ್ಳಿತೆರೆಯಲ್ಲಿ ಸಿನಿಮಾ ಹಂಗಾಮ: ಮೂರು ಸಿನಿಮಾಗಳಲ್ಲಿದೆ ಮನರಂಜನೆ ಮಹಾಪೂರ!

ಇನ್ನು ಬಂಗಾಳಿ ಚಿತ್ರರಂಗದ ಖ್ಯಾತ ನಟಿ ಪಲ್ಲವಿ ಡೇ ಫ್ಲ್ಯಾಟ್ ನಲ್ಲಿ ಶವವಾಗಿ ಪತ್ತೆಯಾಗಿದ್ರು. ರೇಷಮ್‌ಝಾನ್ಪಿ, ಅಮಿ ಸಿರ್ಜೇರ ಬೇಗಮ್‌ ಮುಂದಾದ ಧಾರಾವಾಹಿಗಳ ಮೂಲಕ ಪಲ್ಲವಿ ಡೇ ಸಾಕಷ್ಟು ಖ್ಯಾತಿ ಪಡೆದಿದ್ದರು. ಆದ್ರೆ ವೈಯಕ್ತಿಕ ಸಮಸ್ಯೆಯಿಂದಾಗಿ ಪಲ್ಲವಿ ಸಾವಿಗೆ ಶರಣಾದ್ರು ಎನ್ನಲಾಗಿದೆ..ಪಲ್ಲವಿ ಸಾವು ಆತ್ಮಹತ್ಯೆಯಲ್ಲ..ಇದು ಕೊಲೆ ಎಂದು ಪಲ್ಲವಿ ಅವ್ರ ಪೋಷಕರು ಆರೋಪಿಸಿದ್ದಾರೆ. ಪಲ್ಲವಿ ಡೇ ಆತ್ಮಹತ್ಯೆಯ ಕೇಸು ಇನ್ನೂ ಮಾಸಿಲ್ಲ, ಆಗಲೇ ನಟಿ ಮತ್ತು ರೂಪದರ್ಶಿಯಾಗಿ  ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಬಿದಿಶಾ, ಕೋಲ್ಕತ್ತಾದ ದಮ್ ಡಮ್‍ನಲ್ಲಿರುವ ತಮ್ಮ ಅಪಾರ್ಟಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬಿದಿಶಾ ಖಿನ್ನತೆಯಲ್ಲಿ ಬಳಲುತ್ತಿದ್ದರಂತೆ..ಲವ್ ಕೂಡ ಬ್ರೇಕ್ ಅಪ್ ಆಗಿತ್ತು ಅನ್ನೋ ಸುದ್ದಿ ಕೂಡ ಇದೆ. ಒಟ್ಟಾರೆ ಚಿತ್ರರಂಗದ ಉದಯೋನ್ಮುಖ ನಟಿರು ಚಿಕ್ಕ ವಯಸ್ಸಿನಲ್ಲೇ ಸಾವಿನ ಕದ ತಟ್ಟುತ್ತಿರೋದು ಬೇಸರದ ಸಂಗತಿ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories