Asianet Suvarna News Asianet Suvarna News

ಚಂದನ್ ಶೆಟ್ಟಿ-ನಿವೇದಿತಾಗೆ ವೆಡ್ಡಿಂಗ್ ಆನಿವರ್ಸರಿ: ಸುದೀಪ್-ಜೆನಿಲಿಯಾ ಸ್ನೇಹಕ್ಕೆ ಸಾಕ್ಷಿ ಈ ವೀಡಿಯೋ!

ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ನಾಲ್ಕನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಜೊತೆಯಾಗಿ ನಟಿಸುತ್ತಿರುವ ಕ್ಯಾಂಡಿ ಕ್ರಶ್ ಚಿತ್ರದ ಸಾಂಗ್ ಶೇರ್ ಮಾಡಿಕೊಂಡಿದ್ದಾರೆ. 2020ರ ಇದೇ ದಿನ ಮದ್ವೆಯಾಗಿದ್ದ ಜೋಡಿಗೆ ಈಗ ನಾಲ್ಕನೇ ಮದುವೆ ದಿನದ ಸಂಭ್ರಮ.

ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ನಾಲ್ಕನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಜೊತೆಯಾಗಿ ನಟಿಸುತ್ತಿರುವ ಕ್ಯಾಂಡಿ ಕ್ರಶ್ ಚಿತ್ರದ ಸಾಂಗ್ ಶೇರ್ ಮಾಡಿಕೊಂಡಿದ್ದಾರೆ. 2020ರ ಇದೇ ದಿನ ಮದ್ವೆಯಾಗಿದ್ದ ಜೋಡಿಗೆ ಈಗ ನಾಲ್ಕನೇ ಮದುವೆ ದಿನದ ಸಂಭ್ರಮ. ಈ ಸಂದರ್ಭದಲ್ಲಿ ಜೊತೆಯಾಗಿ ರೊಮ್ಯಾನ್ಸ್ ಮಾಡಿದ ವಿಡಿಯೋ ಒಂದನ್ನು ನಿವೇದಿತಾ ಶೇರ್ ಮಾಡಿಕೊಂಡಿದ್ದಾರೆ. ಇವರಿಬ್ಬರೂ ಜೊತೆಯಾಗಿ ನಟಿಸ್ತಿರೋ ಕ್ಯಾಂಡಿ ಕ್ರಶ್ ಮೂವಿಯ ಮೇಕಿಂಗ್ ವಿಡಿಯೋ ಇದಾಗಿದ್ದು, ಜೋಡಿ ಇದರಲ್ಲಿ ತುಂಬಾ ಮುದ್ದಾಗಿ ಕಾಣಿಸುತ್ತಿದ್ದಾರೆ. ಇದಕ್ಕೆ ಹಲವಾರು ಮಂದಿ ಹಾರ್ಟ್ ಎಮೋಜಿ ಹಾಕಿದ್ರೆ, ನಾಲ್ಕು ವರ್ಷವಾಯ್ತು ಇನ್ನಾದರೂ ಮಕ್ಕಳ ಕಡೆ ಗಮನ ಕೊಡಿ ಎಂದು ಕೆಲವರು ದಂಪತಿಗೆ ಬುದ್ಧಿ ಮಾತು ಹೇಳುತ್ತಿದ್ದಾರೆ. ಅದಕ್ಕೆ ಇನ್ನು ಕೆಲವರು ಈಕೆಯೇ ಇನ್ನೂ ಚಿಕ್ಕ ಮಗುವಿನ ರೀತಿ ಇದ್ದಾಳೆ, ಇಷ್ಟು ಬೇಗ ಮಕ್ಕಳ್ಯಾಕೆ ಎಂದು ನಿವೇದಿತಾ ಪರವಾಗಿ ಮಾತನಾಡುತ್ತಿದ್ದಾರೆ. 

ಸುದೀಪ್ -ಜೆನಿಲಿಯಾ ಸ್ನೇಹಕ್ಕೆ ಸಾಕ್ಷಿ ಈ ವೀಡಿಯೋ: ಕಿಚ್ಚನ ಯಾವುದೇ ಸಿನಿಮಾವಾಗಿರಲಿ, ವಿಶೇಷ ಕ್ಷಣಗಳಾಗಿರಲಿ ಜೆನಿಲಿಯಾ, ರಿತೇಶ್ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡುವುದನ್ನು ಮರೆಯುವುದಿಲ್ಲ. ಕಿಚ್ಚ ಸುದೀಪ್ ಕೂಡಾ ಜೆನಿಲಿಯಾ ಮತ್ತು ರಿತೇಶ್ ಜೋಡಿಯ ಹುಟ್ಟುಹಬ್ಬ, ಸಿನಿಮಾ ಸಂಬಂಧಿತ ಕೆಲಸಗಳಿಗೆ ಸೋಷಿಯಲ್ ಮೀಡಿಯಾ ಮೂಲಕ ವಿಶ್ ಮಾಡುತ್ತಿರುತ್ತಾರೆ.ಇದೀಗ ಜೆನಿಲಿಯಾ ಮತ್ತು ಸುದೀಪ್ ನಡುವೆ ಎಷ್ಟು ಒಳ್ಳೆಯ ಬಾಂಧವ್ಯವಿದೆ ಎನ್ನುವುದು ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯದ ವೇಳೆ ಗೊತ್ತಾಗಿದೆ. ಶಾರ್ಜಾದಲ್ಲಿ ನಡೆದ ಮುಂಬೈ ಮತ್ತು ಕರ್ನಾಟಕ ಬುಲ್ಲೋಜರ್ಸ್ ನಡುವಿನ ಪಂದ್ಯದಲ್ಲಿ ಸುದೀಪ್ ಮತ್ತು ಜೆನಿಲಿಯಾ ಭೇಟಿಯಾಗಿದ್ದಾರೆ. ಮೈದಾನದಲ್ಲಿ ಸುದೀಪ್ ನೋಡಿ ಜೆನಿಲಿಯಾ ಮುಂಬೈ ಡಗೌಟ್ ನಿಂದ ಓಡಿ ಬಂದು ಖುಷಿಯಿಂದ ತಬ್ಬಿಕೊಂಡಿದ್ದಾರೆ. ಬಳಿಕ ಜೊತೆಯಾಗಿ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ..ಇಬ್ಬರ ಬಾಂಧವ್ಯ ನೋಡಿ ನೆಟ್ಟಿಗರು ಸ್ನೇಹಿತರು ಅಂದರ ಹೀಗಿರಬೇಕು ಎಂದಿದ್ದಾರೆ. ಜೆನಿಲಿಯಾ ಮತ್ತು ಸುದೀಪ್ ಜೊತೆಗೆ ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್ ಕೂಡಾ ಸೇರಿಕೊಂಡಿದ್ದಾರೆ. ಕಿಚ್ಚ ಸುದೀಪ್ ಗೆ ಬಾಲಿವುಡ್ ನಲ್ಲೂ ಅನೇಕ ಸ್ನೇಹಿತರಿದ್ದಾರೆ ಎಂಬುದಕ್ಕೆ ಇದುವೇ ಸಾಕ್ಷಿ.

ಶಿಲ್ಪಾ ಶೆಟ್ಟಿ ಬೆಂಗಳೂರಲ್ಲಿ ಹೊಸ ರೆಸ್ಟೊರೆಂಟ್: ಶಿಲ್ಪಾ ಶೆಟ್ಟಿ ನಟಿಯಷ್ಟೆ ಅಲ್ಲಾ.. ಒಳ್ಳೆ ಬಿಸಿನೆಸ್ ವಿಮೆನ್ ಕೂಡ. ಮುಂಬೈನಲ್ಲಿ 2 ರೆಸ್ಟೊರೆಂಟ್ ಹೊಂದಿರೋ ಶಿಲ್ಪಾ ಶೆಟ್ಟಿ ಇದೀಗ ಮುಂಬೈನ ಹೊರಗೆ ಮೊದಲನೇ ಬ್ರಾಂಚ್ ಅನ್ನು ಶಿಲ್ಪಾ ಬೆಂಗಳೂರಿನಲ್ಲಿ ಆರಂಭಿಸ್ತಿದ್ದಾರೆ. ಬೆಂಗಳೂರಿನ ಬಾಸ್ಟಿಯನ್ ಬಹು ದೊಡ್ಡ ಕಾರ್ಪೆಟ್ ಏರಿಯಾ ಹೊಂದಿದ್ದು ಇಂಟೀರಿಯರ್ ಕೆಲಸ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಮುಂದಿನ ತಿಂಗಳು ಅಂದ್ರೆ ಮಾರ್ಚ್ 2024ಕ್ಕೆ 'ಬಾಸ್ಟಿಯನ್ ಬೆಂಗಳೂರು' ಆಹಾರ ಪ್ರಯರಿಗೆ ಬಾಗಿಲು ತೆರೆಯಲಿದೆ. ನಿನ್ನೆಯಷ್ಟೇ ಇದಕ್ಕೆ ಸಂಬಂಧಿಸಿದಂತೆ ಸರಳ ಪೂಜೆಯನ್ನು ರೆಸ್ಟೊರೆಂಟ್ನಲ್ಲಿ ಶಿಲ್ಪಾ ಶೆಟ್ಟಿ ನೆರವೇರಿಸಿದ್ರು. ಆ ಫೋಟೊಗಳನ್ನು ಖುದ್ದು ಶಿಲ್ಪಾ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನೇನು ಬೆಂಗಳೂರಿಗೆ ಬಂದೇಬಿಟ್ಟೆವು ಎಂದು ಶಿಲ್ಪಾ ಖುಷಿಯಲ್ಲಿ ಈ ವಿಚಾರ ಶೇರ್ ಮಾಡಿಕೊಂಡಿದ್ದಾರೆ.

Video Top Stories