Asianet Suvarna News Asianet Suvarna News

ತೆರೆ ಮೇಲೆ ಸಾರಾ ಆದ ಅನು ಪ್ರಭಾಕರ್: ನೆಗೆಟಿವ್ ಶೇಡ್‌ನಲ್ಲಿ ರೆಹಮಾನ್!

ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ಅವರ ಕಾದಂಬರಿ ಆಧಾರಿತ 'ಸಾರಾ ವಜ್ರ' ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸಿನಿಮಾದಲ್ಲಿ ಸಾರಾ ಪಾತ್ರದಲ್ಲಿ ನಟಿ ಅನು ಪ್ರಭಾಕರ್ ಕಾಣಿಸಿಕೊಂಡಿದ್ದು, ಅವರಿಗೆ ಜೋಡಿಯಾಗಿ ರೆಹಮಾನ್ ಅಭಿನಯಿಸಿದ್ದಾರೆ.

ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ಅವರ ಕಾದಂಬರಿ ಆಧಾರಿತ 'ಸಾರಾ ವಜ್ರ' (Sara Vajra) ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸಿನಿಮಾದಲ್ಲಿ ಸಾರಾ ಪಾತ್ರದಲ್ಲಿ ನಟಿ ಅನು ಪ್ರಭಾಕರ್ (Anu Prabhakar) ಕಾಣಿಸಿಕೊಂಡಿದ್ದು, ಅವರಿಗೆ ಜೋಡಿಯಾಗಿ ರೆಹಮಾನ್ (Rahman Hassan) ಅಭಿನಯಿಸಿದ್ದಾರೆ. 'ಸಾರಾ ವಜ್ರ' ಸಿನಿಮಾದ ಟ್ರೇಲರ್ (Trailer) ಇಂಟ್ರೆಸ್ಟಿಂಗ್ ಆಗಿದ್ದು, ಮದುವೆಯಾದ ಮುಸ್ಲಿಂ ಹೆಣ್ಣು ಮಗಳ ಜೀವನದ ಕಥೆಯನ್ನ ಸಾರುತ್ತಿದೆ ಈ ಸಿನಿಮಾ. ಇನ್ನು ಚಿತ್ರಕ್ಕೆಆರ್ನಾ ಸಾಧ್ಯ ನಿರ್ದೇಶನ ಮಾಡಿದ್ದು, ಡ್ರೀಮ್ ಹೌಸ್ ಅಡಿಯಲ್ಲಿ ಚಿತ್ರವನ್ನ ನಿರ್ಮಾಪಕ ದೇವೇಂದ್ರ ರೆಡ್ಡಿ ನಿರ್ಮಾಣ ಮಾಡಿದ್ದಾರೆ. 

ಕಣ್ಣೀರು ತಡ್ಕೊಂಡು ಅಪ್ಪು ಬಗ್ಗೆ ಮಾತನಾಡೋದು ತುಂಬಾನೇ ಕಷ್ಟ: ಅನು ಪ್ರಭಾಕರ್

ಸಾರಾ ವಜ್ರ ಸಿನಿಮಾ ಈಗಾಗಲೇ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡು ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಕಮರ್ಷಿಯಲ್ ಸಿನಿಮಾಗಳ ಮಧ್ಯೆ ಇಂತದೊಂದು ಸಂದೇಶ ಸಾರುವ ಸಿನಿಮಾ ರಿಲಿಸ್ ಆಗ್ತಿರೋದು ಖುಷಿಯ ವಿಚಾರ.  ‘ಈ ಚಿತ್ರದ ಸ್ಕ್ರಿಪ್ಟ್‌ ಓದಿದಾಗ ಮಗಳಿಗೆ ಕೇವಲ 15 ತಿಂಗಳು. ನನ್ನ 22 ವರ್ಷಗಳ ಸಿನಿಮಾ ಕೆರಿಯರ್‌ನಲ್ಲೇ ಈ ಚಿತ್ರದಲ್ಲಿ ನಟಿಸಿದ್ದು ವಿಭಿನ್ನ ಅನುಭವ. ಇದರಲ್ಲಿ ಕಂದು ಮೈಬಣ್ಣದ ನಫೀಸಾ ಎಂಬ ಹೆಣ್ಣು ಮಗಳ ಪಾತ್ರದಲ್ಲಿ ನಟಿಸಿದ್ದೇನೆ. ಬಾಲ್ಯದಿಂದ ವೃದ್ಧಾಪ್ಯದವರೆಗೆ ಪಾತ್ರದ ಜರ್ನಿ ಇದೆ’ ಎಂದು ನಟಿ ಅನುಪ್ರಭಾಕರ್ ಹೇಳಿದ್ದಾರೆ. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies