Asianet Suvarna News Asianet Suvarna News

ದರ್ಶನ್ ಉಮಾಪತಿ ಜಗಳಕ್ಕೆ ತುಪ್ಪ ಸುರಿದ ಪ್ರಕಾಶ್ ರಾಜ್: ಭಾಷೆಯನ್ನ ಅಣ್ಣಾವ್ರಿಂದ ಕಲಿಯಿರಿ ಎಂದಿದ್ಯಾಕೆ?

ನಟ ದರ್ಶನ್ ಹಾಗು ನಿರ್ಮಾಪಕ ಉಮಾಪತಿ ನಡುವಿನ ಕಿತಾಪತಿ ಬೂದಿ ಮುಚ್ಚಿದ ಕೆಂಡದಂತಿದೆ. ಒಮ್ಮೆ ಬೆಂಕಿ ಹತ್ತಿದ್ರೆ ಏರಡ್ಮೂರು ದಿನ ಉರಿದು ಮತ್ತೆ ತಣ್ಣಗಾಗುತ್ತೆ. ಯಾರಾದ್ರು ತುಪ್ಪ ಸುರಿದ್ರೆ ಮತ್ತೆ ಬೆಂಕಿ ಹೊತ್ತಿಕೊಳ್ಳುತ್ತೆ. 

ನಟ ದರ್ಶನ್ ಹಾಗು ನಿರ್ಮಾಪಕ ಉಮಾಪತಿ ನಡುವಿನ ಕಿತಾಪತಿ ಬೂದಿ ಮುಚ್ಚಿದ ಕೆಂಡದಂತಿದೆ. ಒಮ್ಮೆ ಬೆಂಕಿ ಹತ್ತಿದ್ರೆ ಏರಡ್ಮೂರು ದಿನ ಉರಿದು ಮತ್ತೆ ತಣ್ಣಗಾಗುತ್ತೆ. ಯಾರಾದ್ರು ತುಪ್ಪ ಸುರಿದ್ರೆ ಮತ್ತೆ ಬೆಂಕಿ ಹೊತ್ತಿಕೊಳ್ಳುತ್ತೆ. ಇದೀಗ ನಟ ದರ್ಶನ್ ಉಮಾಪತಿ ವಿವಾದಕ್ಕೆ ಸೌತ್ ಸಿನಿ ರಂಗದ ಸ್ಟಾರ್​ ನಟನ ಎಂಟ್ರಿ ಆಗಿದೆ. ಕಾಟೇರ ಸಿನಿಮಾ ಶೀರ್ಷಿಕೆ ವಿಚಾರವಾಗಿ ಶುರುವಾದ ನಟ ದರ್ಶನ್ ಹಾಗು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ನಡುವೆ ಮಾತಿನ ಸಮರ ನಡೆಯುತ್ತಿದೆ. ತನ್ನ ಸಿನಿಮಾ ನಿರ್ಮಾಪಕ ದುಡ್ಡು ಕೊಟ್ಟು ಕೆಲಸ ಕೊಟ್ಟ ನಿರ್ಮಾಪಕ ಅನ್ನೋದನ್ನೂ ಮರೆತು ಉಮಾಪತಿಗೆ  ತಗಡು, ಗುಮ್ಮುಸ್ಕೋತಿಯಾ ಅಂತೆಲ್ಲ ಬಹಿರಂಗವಾಗಿ ವೇಧಿಕೆಯಲ್ಲಿ ಅವಾಜ್ ಹಾಕಿದ್ರು ದರ್ಶನ್. 

ದರ್ಶನ್​​ರ ಈ ಮಾತುಗಳನ್ನ ಕೇಳಿ ಕೆಂಡಾಮಂಡಲ ಆದ ನಿರ್ಮಾಪಕ ಉಮಾಪತಿ ಗುಮ್ಮೋಕೆ ನಮ್ಗು ಬರುತ್ತೆ ಅಂತ ನೇರವಾಗೆ ಹೇಳಿದ್ರು. ಅಷ್ಟೆ ಅಲ್ಲ ನಟ ದರ್ಶನ್​ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರುಗಳೂ ದಾಖಲಾಗಿವೆ. ಈ ವಿವಾದಕ್ಕೆ ಈಗ ದಕ್ಷಿಣದ ಸ್ಟಾರ್ ನಟ ಪ್ರಕಾಶ್ ರಾಜ್ ಎಂಟ್ರಿ ಕೊಟ್ಟಿದ್ದಾರೆ. 'ಇಬ್ಬರದೂ ಭಾಷೆ ತಪ್ಪಾಗಿದೆ, ಕೇಳೋಕೆ ಕಷ್ಟವಾಗುತ್ತೆ. ತುಂಬಾ ಜನರು ಸೇರಿರುವ ವೇದಿಕೆ ಮೇಲೆ ಆಡಿರುವ ಅಂಥ ಮಾತುಗಳನ್ನು ಕೇಳುವುದಕ್ಕೆ ಮುಜುಗರ ಆಗುತ್ತೆ ಎಂದಿದ್ದಾರೆ ಪ್ರಕಾಶ್ ರಾಜ್​. ನಟ ದರ್ಶನ್ ಉಮಾಪತಿಗೆ ತಗಡು, ಗುಮ್ಮುಸ್ಕೋತಿಯಾ ಅಂದಾಗ ನಿರ್ಮಾಪಕ ಉಮಾಪತಿ ಅಣ್ಣಾವ್ರ ವೀಡಿಯೋ ಒಂದನ್ನ ಹಂಚಿಕೊಂಡಿದ್ರು. ಆ ವೀಡಿಯೋದಲ್ಲಿ ಹಣ ಹಾಕಿ ಸಿನಿಮಾ ಮಾಡೋ ನಿರ್ಮಾಪಕರಿಗೆ ಅಣ್ಣಾವ್ರು ಅನ್ನದಾತ ಅಂತ ಕರೆದಿದ್ರು. 

ಈಗ ಪ್ರಕಾಶ್​ ರಾಜ್​ ಕೂಡ ಅಣ್ಣಾವ್ರ ಹೆಸರು ಹೇಳಿ ನಟ ದರ್ಶನ್ ಹಾಗು ನಿರ್ಮಾಪಕ ಉಮಾಪತಿಗೆ ಬುದ್ಧಿಮಾತು ಹೇಳಿದ್ದಾರೆ. 'ನಮ್ಮ ಕನ್ನಡದ ಮೇರು ನಟ ಡಾ ರಾಜ್‌ಕುಮಾರ್‌ ಹೇಗಿದ್ದರು, ಹೇಗೆ ಮಾತನಾಡಬೇಕು ಎಂದು ಅವರನ್ನು ನೋಡಿಯಾದರೂ ಕಲಿಯಬೇಕು' ದರ್ಶನ್ ಮತ್ತು ಉಮಾಪತಿ ಶ್ರೀನಿವಾಸ್ ಗೌಡ ಇಬ್ಬರ ಭಾಷೆಯೂ ಸರಿ ಇಲ್ಲ. ಕನ್ನಡ ಭಾಷೆಯನ್ನು ನೀವು ಅಪ್ಪಾಜಿ ಹತ್ರ ಕಲೀಬೇಕು ಎಂದಿದ್ದಾರೆ. ನಟ ಪ್ರಕಾಶ್ ರಾಜ್ ದರ್ಶನ್​ ಸಿನಿಮಾಗಳಲ್ಲೂ ನಟಿಸಿದ್ದಾರೆ. ಪ್ರಕಾಸ್ ರಾಜ್​ ಕೂಡ ವಿವಾದಗಳಿಂದ ಹೊರತಾದವರಲ್ಲ. ಈಗ ದರ್ಶನ್ ಉಮಾಪತಿ ವಿಚಾರವಾಗಿ ಮಾತನಾಡಿರೋ ನಟ ಪ್ರಕಾಶ್​ ರಾಜ್​​ಗೆ ನೆಟ್ಟಿಗರು ಪಾಠ ಮಾಡಿದ್ದಾರೆ. ದರ್ಶನ್ ಉಮಾಪತಿ ಬಗ್ಗೆ ಮಾತನಾಡೋ ಮುಂಚೆ ನೀವು ನೆಟ್ಟಗಾಗಿ ಅನ್ನುತ್ತಿದ್ದಾರೆ. ಸಧ್ಯಕ್ಕೆ ದರ್ಶನ್ ಉಮಾಪತಿ ವಿವಾದ ಬೂದಿ ಮುಚ್ಚಿದ ಕೆಂಡದಂತಿದ್ದು ಮತ್ತೆ ಯಾವಾಗ ಬೇಕಾದ್ರು ಬ್ಲಾಸ್​ ಆಗೋದ್ರಲ್ಲಿ ನೋ ಡೌಟ್.

Video Top Stories