Asianet Suvarna News Asianet Suvarna News

ವಿವಾದಕ್ಕೆ ಕಾರಣವಾಯ್ತು ದರ್ಶನ್ ಖಾಸಗಿ ಡ್ಯಾನ್ಸ್ ವೀಡಿಯೋ: ನಟನ ಜತೆ ಕುಣಿದ ಈ ಹಾಟ್ ಹುಡುಗಿ ಯಾರು?

ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡಿಂಗ್​​​​ನಲ್ಲಿರೋದು ರಿಯಲ್ ಸ್ಟಾರ್ ಉಪೇಂದ್ರ. ಕರಿಮಣಿ ಮಾಲೀಕ ಹಾಡು ಟ್ರೆಂಡ್​​ ಆಗಿ ಟ್ರೋಲ್ ಆಗುತ್ತಿದ್ದಂತೆ, ಯುಐ ಸಿನಿಮಾದ ಟ್ರೋಲ್ ಸಾಂಗ್ ಬಂದು ಸೋಷಿಯಲ್ ಮೀಡಿಯಾದಲ್ಲಿ ಹಂಗಾಮ ಎಬ್ಬಿಸಿದೆ. 

ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡಿಂಗ್​​​​ನಲ್ಲಿರೋದು ರಿಯಲ್ ಸ್ಟಾರ್ ಉಪೇಂದ್ರ. ಕರಿಮಣಿ ಮಾಲೀಕ ಹಾಡು ಟ್ರೆಂಡ್​​ ಆಗಿ ಟ್ರೋಲ್ ಆಗುತ್ತಿದ್ದಂತೆ, ಯುಐ ಸಿನಿಮಾದ ಟ್ರೋಲ್ ಸಾಂಗ್ ಬಂದು ಸೋಷಿಯಲ್ ಮೀಡಿಯಾದಲ್ಲಿ ಹಂಗಾಮ ಎಬ್ಬಿಸಿದೆ. ಆದ್ರೆ ಮತ್ತೊಂದ್ ಕಡೆ ನಟ ದರ್ಶನ್ ಕೂಡ ನಾನೇನು ಕಮ್ಮಿ ಇಲ್ಲ ಅಂತ ಟ್ರೆಂಡ್ ಆಗಿ ಟ್ರೋಲ್ ಆಗುತ್ತಿದ್ದಾರೆ. ಅದಕ್ಕೆ ಕಾರಣ ನಟ ದರ್ಶನ್ ಒಬ್ಬ ಹುಡುಗಿ ಜೊತೆ ಡಾನ್ಸ್ ಮಾಡಿರೋ ಈ ವೀಡಿಯೋ. ದರ್ಶನ್ ಜೊತೆ ಡಾನ್ಸ್ ಮಾಡೋ ಆಸೆ ಯಾರಿಗೆಲ್ಲ ಇದೆಯೋ ಗೊತ್ತಿಲ್ಲ. ಆದ್ರೆ ಆ ಅದೃಷ್ಟ ಮಾತ್ರ ಇಲ್ಲೊಬ್ರು ಹುಡುಗಿಗೆ ಸಿಕ್ಕಿದೆ. ನಟ ದರ್ಶನ್ ಜೊತೆ ಈ ಬಳುಕೋ ಬಳ್ಳಿ ಎನಿರ್ಜಿಯಿಂದ ಡಾನ್ಸ್ ಮಾಡಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಮಾಡಿರೋ ಡಾನ್ಸ್ ಇದು. 

ಈ ಹುಡುಗಿ ಯಾರು ಅಂತ ಹುಡುಗಿದ್ರೆ ಗೊತ್ತಾಗಿದ್ದು ಇವ್ರು ಒಬ್ಬ ಡಾನ್ಸರ್ ಅನ್ನೋದು. ತನ್ನ ಪತ್ನಿ ವಿಜಲಕ್ಷ್ಮಿ ಎದುರೇ ನಟ ದರ್ಶನ್ ಈ ಹುಡುಗಿ ಜೊತೆ ಕುಣಿದಿದ್ದಾರೆ. ಈ ವೀಡಿಯೋಗಳು ಈಗ ವೈರಲ್ ಆಗುತ್ತಿವೆ. ನಟ ದರ್ಶನ್ ಇತ್ತೀಚೆಗೆ ತನ್ನ ವಯಕ್ತಿಕ ವಿಚಾರಕ್ಕೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಮನೆ ಗಲಾಟೆ, ನಿರ್ಮಾಪಕರ ಜೊತೆ ಕಿತ್ತಾಟ, ಮಹಿಳೆಯರ ಬಗ್ಗೆ ಅವಹೇಳನ ಹೇಳಿಕೆಗಳು ಆರೋಪ ದರ್ಶನ್ ಮೇಲಿವೆ. ಆದ್ರೆ ಈಗ ದರ್ಶನ್ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಹುಡಗಿ ಜತೆ ಮಸ್ತ್ ಡಾನ್ಸ್ ಮಾಡಿರೋ ವೀಡಿಯೋ ಕೂಡ ವಿವಾದಕ್ಕೆ ಕಾರಣ ಆಗಿದೆ. ದರ್ಶನ್ ಡಾನ್ಸ್ ಮಾಡಿರೋದು ಪರಭಾಷಾ ಹಾಡಿಗೆ ಅಂತ ಟ್ರೋಲ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ದರ್ಶನ್ ಏನೇ ಮಾಡಿದ್ರು ಈಗ ಸುದ್ದಿನೇ.