'ಲವ್ ಮಾಕ್ಟೆಲ್' ಹೀರೋ ಮೇಲೆ 80 ಕೋಟಿ ಬಂಡವಾಳ: ಪ್ಯಾನ್ ಇಂಡಿಯಾ ಸಿನಿಮಾಗೆ ಡಾರ್ಲಿಂಗ್ ಕೃಷ್ಣ ರೆಡಿ!
ಡಾರ್ಲಿಂಗ್ ಕೃಷ್ಣ. ಕನ್ನಡದ ಮತ್ತೊಬ್ಬ ಟ್ಯಾಲೆಂಟೆಡ್ ಹೀರೋ. ಲವ್ ಮಾಕ್ಟೆಲ್ ಸಿನಿಮಾ ಡೈರೆಕ್ಟ್ ಮಾಡ್ಕೊಂಡು ನಿರ್ಮಾಣವನ್ನೂ ಮಾಡಿ ನಾಯಕನಾಗಿ ನಟಿಸಿ ಸ್ಟಾರ್ ಗಿರಿ ಗಿಟ್ಟಿಸಿಕೊಂಡಿರೋ ಡಾರ್ಲಿಂಗ್ ಕೃಷ್ಣ ಕನ್ನಡದ ಭರವಸೆಯ ಹೀರೋ ಆಗಿದ್ದಾರೆ.
ಡಾರ್ಲಿಂಗ್ ಕೃಷ್ಣ. ಕನ್ನಡದ ಮತ್ತೊಬ್ಬ ಟ್ಯಾಲೆಂಟೆಡ್ ಹೀರೋ. ಲವ್ ಮಾಕ್ಟೆಲ್ ಸಿನಿಮಾ ಡೈರೆಕ್ಟ್ ಮಾಡ್ಕೊಂಡು ನಿರ್ಮಾಣವನ್ನೂ ಮಾಡಿ ನಾಯಕನಾಗಿ ನಟಿಸಿ ಸ್ಟಾರ್ ಗಿರಿ ಗಿಟ್ಟಿಸಿಕೊಂಡಿರೋ ಡಾರ್ಲಿಂಗ್ ಕೃಷ್ಣ ಕನ್ನಡದ ಭರವಸೆಯ ಹೀರೋ ಆಗಿದ್ದಾರೆ. ಇದೀಗ ಕೃಷ್ಣ ಸಿನಿ ಜರ್ನಿಯಲ್ಲಿ ಹೊಸ ಹೆಜ್ಜೆಯೊಂದನ್ನ ಇಟ್ಟಿದ್ದಾರೆ. ಅದೇ ಕೃಷ್ಣನ ಪ್ಯಾನ್ ಇಂಡಿಯಾ ಸಿನಿಮಾ. ಬರೋಬ್ಬರಿ 80 ಕೋಟಿಯಲ್ಲಿ ಸಿದ್ಧವಾಗುತ್ತಿರೋ ಸಿನಿಮಾ. ಕನ್ನಡದಲ್ಲಿ ಮತ್ತೊಂದು ಐತಿಹಾಸಿಕ ಸಿನಿಮಾ ಮೂಡಿ ಬರುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗೆರಿಲ್ಲಾ ವಾರ್ ಮಾಡುವ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದ ಹಲಗಲಿ ಬೇಡರ ಕಥೆ ಈಗ ಸಿನಿಮಾ ಆಗುತ್ತಿದೆ.
ನಿರ್ದೇಶಕ ಸುಕೇಶ್ ಡಿ.ಕೆ. ಆಕ್ಷನ್ ಕಟ್ ಹೇಳುತ್ತಿರೋ ಈ ಸಿನಿಮಾದಲ್ಲಿ ನಟ ಡಾರ್ಲಿಂಗ್ ಕೃಷ್ಣ ಹೀರೋ ಅನ್ನೋದು ಇಂಟ್ರೆಸ್ಟಿಂಗ್.. ಐತಿಹಾಸಿಕ ಸಿನಿಮಾವಾಗಿದ್ದರಿಂದ ಆ ಕಾಲ ಘಟ್ಟವನ್ನು ಕಟ್ಟಿ ಕೊಡಬೇಕಾಗಿದ್ದರಿಂದ ಬರೋಬ್ಬರಿ 80 ಕೋಟಿಯನ್ನ ಈ ಸಿನಿಮಾಗಾಗಿ ಖರ್ಚು ಮಾಡುತ್ತಿದ್ದಾರೆ. ಕಲ್ಯಾಣ್ ಚಕ್ರವರ್ತಿ ಧೂಳಿಪಳ್ಯ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ನಟ ಡಾರ್ಲಿಂಗ್ ಕೃಷ್ಣ ರೊಮ್ಯಾಂಟಿಕ್ ಹೀರೋ ಲವರ್ ಬಾಯ್ ಕ್ಯಾರೆಕ್ಟರ್ಗಳಿಗೆ ಫೇಮಸ್ ಆದವರು. ಕೃಷ್ಣ ಲವ್ ಸ್ಟೋರಿಗಳು ಪ್ರೇಮಿಗಳ ಮನ ಗೆದ್ದು ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತವೆ. ಆದ್ರೆ ಈ ಭಾರಿ ಒಂದು ಚೇಂಜ್ ಓವರ್ ಇರಲಿ ಅಂತ ನಟ ಕೃಷ್ಣ ವಾರ್ ಫೀಲ್ಡ್ಗೆ ಇಳಿದಿದ್ದಾರೆ.
80 ಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗುತ್ತಿರೋ ಹಲಗಲಿ ಸಿನಿಮಾದಲ್ಲಿ ಹಲಗಲಿ ಬೇಡರ ಸೈನಿಕನ ರೋಲ್ ಮಾಡುತ್ತಿದ್ದಾರೆ. ಈ ಪಾತ್ರಕ್ಕಾಗೆ ಕೃಷ್ಣ ತೂಕ ಇಳಿಸಿಕೊಂಡಿದ್ದಾರೆ. ಐತಿಹಾಸಿಕ ಸಿನಿಮಾ ಹಲಗಲಿ ಚಿತ್ರದ ಶೂಟಿಂಗ್ ಆರಂಭ ಆಗಿದೆ. ಮೈಸೂರಿನ ಲಲಿತ್ ಮಹಲ್ ನಲ್ಲಿ ಹಲಗಲಿ ಸಿನಿಮಾದ ಪೂಜೆ ಆಗಿದೆ. ಮುಹೂರ್ತದ ದಿನವೇ 200ಕ್ಕೂ ಹೆಚ್ಚು ರಷ್ಯನ್ ಕಲಾವಿದರು ಸೇರಿದಂತೆ 500 ಮಂದಿ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಹನುಮಾನ್ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದ ದಶರಥಿ ಶಿವೇಂದ್ರ, ಸಾಯಿ ಶ್ರೀರಾಮ್ ಈ ಚಿತ್ರಕ್ಕೆ ಛಾಯಗ್ರಹಣ ಮಾಡುತ್ತಿದ್ದಾರೆ. ಕನ್ನಡ ನಾಡಿನ ಸ್ವಾತಂತ್ರ್ಯ ಪೂರ್ವದ ವೀರರ ಕಥೆಯಲ್ಲಿ ಡಾರ್ಲಿಂಗ್ ಕೃಷ್ಣ ಕೈಯಲ್ಲಿ ಬಿಲ್ಲು-ಬಾಣ ಹಿಡಿಯಲಿದ್ದಾರೆ. ಈ ಸಿನಿಮಾ ಎರಡು ಭಾಗದಲ್ಲಿ ಮೂಡಿ ಬರಲಿದೆ.