Abhishek Ambarish: ಅಭಿಷೇಕ್-ಅವಿವಾ ಎಂಗೇಜ್ಮೆಂಟ್: ಲಂಡನ್'ನಲ್ಲಿ ಚಿಗುರೊಡೆದಿತ್ತು ಪ್ರೀತಿ
ಬೆಂಗಳೂರಿನಲ್ಲಿ ಜ್ಯೂ. ರೆಬೆಲ್ ಸ್ಟಾರ್ ಅಭಿಶೇಕ್ ಅಂಬರೀಷ್ ಹಾಗೂ ಅವಿವಾ ನಿಶ್ಚಿತಾರ್ಥವು ಭರ್ಜರಿಯಾಗಿ ನೆರವೇರಿದೆ.
ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸಂಸದೆ ಸುಮಲತಾ ಪುತ್ರ ಅಭಿಷೇಕ್, ಪ್ರೀತಿಸಿದ ಹುಡುಗಿ ಅವಿವಾ ಬಿದ್ದಪ್ಪ ಬೆರಳಿಗೆ ಉಂಗುರ ತೊಡಿಸಿದ್ದಾರೆ. ಇವರಿಬ್ಬರ ಪ್ರೀತಿ ಗುಟ್ಟು ಎಂದೂ ಎಲ್ಲೂ ರಟ್ಟಾಗಿರಲಿಲ್ಲ. ಐದು ವರ್ಷದಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಈ ಜೋಡಿ, ತಮ್ಮ ಪ್ರೀತಿಯನ್ನು ಗೌಪ್ಯವಾಗಿಟ್ಟುಕೊಂಡಿದ್ರು. ಇಬ್ಬರ ನಡುವೆ ಲಂಡನ್ನಿನಲ್ಲಿ ಓದುತ್ತಿರುವಾಗ್ಲೆ ಪ್ರೇಮಾಂಕುರವಾಗಿತ್ತು. ಇವರಿಬ್ಬರ ಪ್ರೀತಿ ರೆಬೆಲ್ ಸ್ಟಾರ್ ಅಂಬರೀಶ್'ಗೂ ಗೊತ್ತಿತ್ತು. ಈಗ ಈ ಪ್ರೀತಿಗೆ ಎಂಗೇಜ್ಮೆಂಟ್ ಮುದ್ರೆ ಒತ್ತಿದ್ದಾರೆ. ಅಭಿಶೇಕ್ ಅವಿವಾಗೆ ಡೈಮಂಡ್ ರಿಂಗ್ ತೊಡಿಸಿದ್ದಾರೆ.
Big Boss9: ಸಾನ್ಯಾ- ರೂಪೇಶ್ ಮೇಲೆ ಕಿಚ್ಚ ಗರಂ, ಬಿಗ್ಬಾಸ್ ಬಗ್ಗೆ ಮಾತಾಡಿದ್ದಕ್ಕೆ ಖಡಕ್ ಎಚ್ಚರಿಕೆ!