ಮೊನ್ನೆ ಸಚಿವ ಸಿ.ಟಿ. ರವಿ ಆಯ್ತು, ಈಗ MLA ಫೋನ್ ಬಳಸಿಯೇ BEOಗೆ ವಿದ್ಯಾರ್ಥಿನಿ ಫುಲ್ ಕ್ಲಾಸ್!

ಶಿಕ್ಷಕರ ಕೊರತೆ ಹಿನ್ನೆಲೆ BEOಗೆ ವಿದ್ಯಾರ್ಥಿನಿ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ. ಜಿಲ್ಲೆಯ ಸಿರವಾರ ತಾಲೂಕಿನ ಮಲ್ಲಟ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಮೋನಿಕಾ BEO ವೆಂಕಟೇಶ್ ಗುಡಿಹಾಳ್ ಅವರಿಗೆ ಫೋನಿನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾಳೆ. 
 

First Published Nov 7, 2019, 6:58 PM IST | Last Updated Nov 7, 2019, 6:59 PM IST

ರಾಯಚೂರು (ನ.07): ಶಿಕ್ಷಕರ ಕೊರತೆ ಹಿನ್ನೆಲೆ BEOಗೆ ವಿದ್ಯಾರ್ಥಿನಿ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ. ಜಿಲ್ಲೆಯ ಸಿರವಾರ ತಾಲೂಕಿನ ಮಲ್ಲಟ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಮೋನಿಕಾ BEO ವೆಂಕಟೇಶ್ ಗುಡಿಹಾಳ್ ಅವರಿಗೆ ಫೋನ್ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾಳೆ. 

ಸ್ಕೂಲ್‌ನಲ್ಲಿ ಶಿಕ್ಷಕರ ಕೊರತೆ, ಖಾಯಂ ಶಿಕ್ಷರಿಲ್ಲದ ಕಾರಣ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿತ್ತು. ಹೀಗಾಗಿ ಇಲಾಖೆ ಅಧಿಕಾರಿಗಳಿಗೆ ವಿದ್ಯಾರ್ಥಿಗಳು ಹಲವಾರು ಬಾರಿ ದೂರು‌ ನೀಡಿದ್ರು. ಅಧಿಕಾರಿಗಳು‌ ಮಾತ್ರ ಸಮಸ್ಯೆ  ಬಗೆಹರಿಸುವ ಕಡೆ ಗಮನವೇ ಹರಿಸಿರಲಿಲ್ಲ. ಹೀಗಾಗಿ ವಿದ್ಯಾರ್ಥಿನಿ  ಮೋನಿಕಾ ಮಾನವಿ ಶಾಸಕ ರಾಜಾ ವೆಂಕಟಪ್ಪ ನಾಯಕ್ ಅವರಿಗೆ ಪೋನ್ ಮಾಡಿ ಸಮಸ್ಯೆ ಹೇಳಿ ಶಾಲೆಗೆ ಬರಬೇಕೆಂದು ‌ಮನವಿ ಮಾಡಿದ್ದಳು. 

ವಿದ್ಯಾರ್ಥಿನಿ ಮನವಿಗೆ ಸ್ಪಂದಿಸಿ ಶಾಸಕ ರಾಜಾ ವೆಂಕಟಪ್ಪ ನಾಯಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ್ರು. ಇನ್ನೂ ಇದೇ ವೇಳೆ ಶಾಸಕ BEOಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಂಡು ಶಿಕ್ಷಕರನ್ನು ನೇಮಿಸುವಂತೆ  ಹೇಳಿದ್ರು. ಇದೆ ವೇಳೆ ಶಾಸಕರ ಎದುರೇ ಮೋನಿಕಾ BEO ಅವರಿಗೆ ಫೋನ್‌ನಲ್ಲಿ ಸರಿಯಾಗಿಯೇ ತರಾಟೆಗೆ ತೆಗೆದುಕೊಂಡು ತಕ್ಷಣ ಶಾಲೆಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿ ಇಲ್ಲದಿದ್ರೆ ಹೋರಾಟ ಮಾಡಬೇಕಾಗುತ್ತೆ ಅಂತಾ ಖಡಕ್ ಆಗಿ ಎಚ್ಚರಿಸಿದ್ದಾಳೆ. 

ಶಾಲೆಯಲ್ಲಿ 100 ವಿದ್ಯಾರ್ಥಿಗಳು ಕಲಿಯುತ್ತಿದ್ದು, ನವಲಕಲ್‌ನಿಂದ‌ ಮುಖ್ಯ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. 3 ಜನ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿದ್ದು,
 ವಿಷಯವಾರು 3 ಜನ ಶಿಕ್ಷಕರು ವಾರದಲ್ಲಿ ಮೂರು ದಿನ ಪಾಠ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಪಠ್ಯ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ‌. ಹೀಗಾಗಿ ವಿದ್ಯಾರ್ಥಿನಿ BEOಗೆ ಫೋನ್ನಲ್ಲಿ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

 ಹಾಳಾದ ರಸ್ತೆ ಗುಂಡಿಗೆ ಯುವತಿ ಬಲಿ : ಸಚಿವ ಸಿ.ಟಿ ರವಿಗೆ ತರಾಟೆ...

"