Winter Session: ಚಳಿಗಾಲ ಅಧಿವೇಶನದಲ್ಲಿ ಸರ್ಕಾರಕ್ಕೆ ಹೋರಾಟದ ಬಿಸಿ: 'ಮರಾಠ' ಮೀಸಲಾತಿ ಕೂಗು

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನದ ನಡೆಯುತ್ತಿದ್ದು, ಈ ವೇಳೆ ರಾಜ್ಯ ಸರ್ಕಾರಕ್ಕೆ ಡಬಲ್‌ ಟೆನ್ಶನ್‌ ಶುರುವಾಗಿದೆ.
 

First Published Dec 20, 2022, 10:52 AM IST | Last Updated Dec 20, 2022, 10:52 AM IST

ಅಧಿವೇಶನದ ವೇಳೆ ಪಂಚಮಸಾಲಿ 2ಎ ಮೀಸಲಾತಿ ನಡುವೆ ಮತ್ತೊಂದು ಮೀಸಲಾತಿ ಕೂಗು ಕೇಳಿ ಬಂದಿದೆ. ಅಧಿವೇಶನದ ವೇಳೆ ಮರಾಠಾ ಸಮುದಾಯದ ಹೋರಾಟಕ್ಕೆ ಪ್ಲಾನ್‌ ನಡೆಸಿದ್ದು,  ಕ್ಷತ್ರಿಯ ಮರಾಠ ಮಹಾ ಒಕ್ಕೂಟ ನೇತೃತ್ವದಲ್ಲಿ 2ಎಗೆ ಮೀಸಲಾತಿ  ಆಗ್ರಹಿಸಿ ಮರಾಠಾ ಸಮುದಾಯದ ಕೊಂಡಸಕೊಪ್ಪ ಗ್ರಾಮದ ಬಳಿ ನಿರ್ಮಿಸಿರುವ ಟೆಂಟ್‌'ನಲ್ಲಿ ಪ್ರತಿಭಟನೆ ನಡೆಸಲಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಲು ವಿವಿಧ ಜಿಲ್ಲೆಗಳಿಗೆ ತೆರಳಿ ಆಹ್ವಾನ ನೀಡಿದ್ದು, ಸರ್ಕಾರಕ್ಕೆ ಸಾಲು ಸಾಲು ಪ್ರತಿಭಟನೆಯ ಬಿಸಿ ಎದುರಾಗಿದೆ.

Karnataka Politics : 23 ಕಡೆಯಲ್ಲಿ ಜನಾಶೀರ್ವಾದ ಯಾತ್ರೆಗೆ ಚಾಲನೆ