ಅಮಿತ್ ಶಾ ಕರೆಗೂ ಕರಗದ ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿದ್ದೇಕೆ? ಕಾರಣ ಇಲ್ಲಿದೆ..
ಬಿಜೆಪಿಯ ಚಾಣಕ್ಯ ಅಮಿತ್ ಶಾ ಶೆಟ್ಟರ್ ಅವರನ್ನು ಸಂತೈಸಲು ಕರೆ ಮಾಡಿ ಮಾತನಾಡಿದ್ರು. ಆದರೂ ಶೆಟ್ಟರ್ ಕರಗಿಲ್ಲ.
ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ಟಿಕೆಟ್ ಸಿಗುವುದಿಲ್ಲ ಎಂದು ಗೊತ್ತಾದ ಬಳಿಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೇಸರಿ ಪಕ್ಷಕ್ಕೇ ಗುಡ್‌ಬೈ ಹೇಳಿದ್ದಾರೆ. ಬಿಜೆಪಿಯ ಚಾಣಕ್ಯ ಅಮಿತ್ ಶಾ ಶೆಟ್ಟರ್ ಅವರನ್ನು ಸಂತೈಸಲು ಕರೆ ಮಾಡಿ ಮಾತನಾಡಿದ್ರು. ಆದರೂ ಶೆಟ್ಟರ್ ಕರಗಿಲ್ಲ. ಬದಲಿಗೆ ಪಕ್ಷವನ್ನೇ ಬಿಟ್ಟಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್‌ಗೆ ಲಿಂಗಾಯತ ಅಸ್ತ್ರ ಸಿಕ್ಕಿದ್ದು, ಹುಬ್ಬಳ್ಳಿಗೆ ಹೊಸ ನಾಯಕತ್ವ ದೊರೆತಿದೆ ಎಂದೂ ಹೇಳಲಾಗ್ತಿದೆ. ಹಾಗಾದ್ರೆ ಜಗದೀಶ್ ಶೆಟ್ಟರ್ ರಾಜೀನಾಮೆಗೆ ರಹಸ್ಯವೇನು..? ಕಾರಣ ಹೀಗಿದೆ..