ಕಾಂಗ್ರೆಸ್ನ ಬೆದರಿಕೆಗೆ ಬಿಜೆಪಿ ಬಗ್ಗಲ್ಲ, ಇದು ನಮ್ಮನ್ನು ಹೆದರಿಸುವ ತಂತ್ರವಷ್ಟೇ : ಆರ್. ಅಶೋಕ್
ಸೆಂಟ್ರಲ್ನಲ್ಲಿ ನಮ್ಮ ಸರ್ಕಾರವಿದೆ. ಕಾಂಗ್ರೆಸ್ ಮಾಡಿರುವ ಅವ್ಯವಹಾರಗಳ ಬಗ್ಗೆ ನಾವು ತನಿಖೆ ಮಾಡಿಸುತ್ತೇವೆ ಎಂದು ಆರ್.ಅಶೋಕ್ ಹೇಳಿದ್ದಾರೆ.
ಕಾಂಗ್ರೆಸ್ನವರ ಬೆದರಿಕೆಗೆ ಬಿಜೆಪಿ ಬಗ್ಗಲ್ಲ. ಬಿಟ್ ಕಾಯಿನ್, ಪೊಲೀಸ್ ನೇಮಕಾತಿ ಇರಬಹುದು, ಇದನ್ನೆಲ್ಲಾ ಇಟ್ಟುಕೊಂಡು ಬಿಜೆಪಿಯವರನ್ನು ಹೆದರಿಸಬಹುದು ಅಂದುಕೊಂಡಿದ್ದಾರೆ. ಆದ್ರೆ ನಾವು ಇದಕ್ಕೆ ಹೆದರುವುದಿಲ್ಲ ಎಂದು ಶಾಸಕ ಆರ್.ಅಶೋಕ್ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ವಿರೋಧ ಪಕ್ಷವಾಗಿ ನಾವು ಇದ್ದೇವೆ. ಸೆಂಟ್ರಲ್ನಲ್ಲಿ ನಮ್ಮ ಸರ್ಕಾರವಿದೆ. ಕಾಂಗ್ರೆಸ್ ಮಾಡಿರುವ ಅವ್ಯವಹಾರಗಳ ಬಗ್ಗೆ ನಾವು ತನಿಖೆ ಮಾಡಿಸುತ್ತೇವೆ. ಅವರದ್ದು ದೇಶದಿಂದ ಹಿಡಿದು ರಾಜ್ಯದವರೆಗೆ ಮೂಲೆ ಮೂಲೆಯಲ್ಲಿ ಹಗರಣಗಳು ಇವೆ. ತನಿಖೆ ಮಾಡಿಸಲು ಸತ್ಯಾಸತ್ಯತೆ ಹೊರಬರಲಿ. ನಾವು ಎಲ್ಲಾವನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ಶಾಸಕ ಆರ್. ಅಶೋಕ್ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ಚಪ್ಪಲಿ ತೋರಿಸಿದ್ದಕ್ಕೆ ನಾನು ಕ್ಷಮೆಯಾಚಿಸಿದ್ದೇನೆ, ನನ್ನ ಪತಿ ಬಳಿ ಕ್ಷಮೆ ಕೇಳಲಿ: ಯತೀಶ್ ಪತ್ನಿ ಶ್ವೇತಾ